ಸಿದ್ದಗಂಗಾ ಮಠದಲ್ಲಿ ಕರಡಿ ಪ್ರತ್ಯಕ್ಷ, ವಿದ್ಯಾರ್ಥಿಗಳಲ್ಲಿ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜ.9- ಸಿದ್ದಗಂಗಾಮಠದಲ್ಲಿ ರಾತ್ರಿ ಕರಡಿ ಪ್ರತ್ಯಕ್ಷವಾಗಿದ್ದು, ವಿದ್ಯಾರ್ಥಿಗಳು ಭಯಗೊಂಡಿದ್ದಾರೆ. ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನದ ಬೆಟ್ಟಕ್ಕೆ ತೆರಳುವ ಮಾರ್ಗದ ಮೆಟ್ಟಿಲಿನ ಮೇಲೆ ಕರಡಿ ಕಾಣಿಸಿಕೊಂಡಿದ್ದು ಆತಂಕ ಸೃಷ್ಟಿಸಿದೆ. ಮಠದ ಸಿಬ್ಬಂದಿ ಕರಡಿಯನ್ನು ಓಡಿಸಿ, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಮಠದ ಬಳಿ ಚಿರತೆ ಕಾಣಿಸಿಕೊಂಡಿತ್ತು.

ಲಿಂಗೈಕ್ಯರಾದ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ಬಳಿ ಬಂದು ಹೋಡಾಡಿ ಕೊಂಡು ಸುತ್ತಮುತ್ತ ಓಡಾಡಿದೆ. ಇದನ್ನು ಇಲ್ಲಿನ ಕೆಲವು ವಿದ್ಯಾರ್ಥಿಗಳು ನೋಡಿ ಇಲ್ಲಿನ ಶಿಕ್ಷಕರ ಗಮನಕ್ಕೆ ತಂದಿದ್ದಾರೆ . ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಎಲ್ಲಾರು ಸೇರಿ ಕರಡಿಯನ್ನು ಓಡಿಸಿದ್ದಾರೆ. ಆಹಾರವನ್ನು ಅರಸಿ ಬೆಟ್ಟದ ಸಾಲಿನಲ್ಲಿ ಇರುವ ಕರಡಿಗಳು ಮಠಕ್ಕೆ ಬಂದಿರಬಹುದು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಇತ್ತೀಚೆಗಷ್ಟೇ ಮಠಕ್ಕೆ ಚಿರತೆ ಬಂದು ಭಯದ ವಾತಾವರಣ ನಿರ್ಮಾಣ ಮಾಡಿತ್ತು.ಅದರ ಬೆನ್ನಲ್ಲೇ ಈಗ ಕರಡಿ ಬಂದಿದ್ದರಿಂದ ಮಠದ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ.
ಒಟ್ಟಾರೆ ಬೆಟ್ಟದ ಸಾಲಿನಲ್ಲಿ ಇರುವ ಪ್ರಾಣಿಗಳು ಮಠದತ್ತ ಮುಖ ಮಾಡಿರೋದು ಇದೆ ಮೂದಲಲ್ಲೇ ಆದರೆ ದುರದೃಷ್ಟವಶಾತ್ ಯಾರ ಮೇಲಾದರೂ ದಾಳಿ ಮಾಡಿದರೆ ಎನಪ್ಪ ಅನ್ನುವ ಆತಂಕ ಸೃಷ್ಟಿಸಿದೆ.

ಇನ್ನಾದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಪಟ್ಟಣಕ್ಕೆ ಕಾಡು ಪ್ರಾಣಿಗಳು ಬರದಂತೆ ನೋಡಿಕೊಳ್ಳಬೇಕು. ಮಠದ ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

Facebook Comments