ಸಿದ್ಧಗಂಗಾ ಮಠದಿಂದ ಸಿಎಂ ಪರಿಹಾರ ನಿಧಿಗೆ 50 ಲಕ್ಷ ದೇಣಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಏ.5- ಕೊರೋನಾ ವೈರಸ್ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸಿದ್ಧಗಂಗಾ ಮಠ ಹಾಗೂ ಸಿದ್ಧಗಂಗಾ ವಿದ್ಯಾಸಂಸ್ಥೆ ವತಿಯಿಂದ 50ಲಕ್ಷ ರೂ.ಗಳ ಡಿಡಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಯಿತು.

ಸಿದ್ಧಗಂಗಾ ಮಠದಲ್ಲಿ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಸಿದ್ಧಗಂಗಾ ಮಠದಿಂದ 25ಲಕ್ಷ ರೂ. ಹಾಗೂ ಸಿದ್ಧಗಂಗಾ ವಿದ್ಯಾಸಂಸ್ಥೆಯಿಂದ 25ಲಕ್ಷ ರೂ.ಗಳು ಒಟ್ಟು 50 ಲಕ್ಷ ರೂ.ಗಳ ಡಿಡಿಯನ್ನು ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರ ಮೂಲಕ ಸಿಎಂ ಪರಿಹಾರ ನಿಧಿಗೆ ಸಲ್ಲಿಸಿದರು.

ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್, ಸಿದ್ಧಗಂಗಾ ಮಠದ ವಿಶ್ವನಾಥಯ್ಯ, ಟಿ.ಕೆ.ನಂಜುಂಡಪ್ಪ ಮತ್ತಿತರರು ಹಾಜರಿದ್ದರು.

# ದೀಪ ಬೆಳಗಿಸಲು ಸಿದ್ದಗಂಗಾ ಶ್ರೀಗಳ ಕರೆ
ಇಂದು ರಾತ್ರಿ 9ಗಂಟೆಗೆ 9 ನಿಮಿಷ ದೀಪ ಹಚ್ಚುವ ಮೂಲಕ ಪ್ರಧಾನಿ ನರೇಂದ್ರಮೋದಿ ಕರೆಯನ್ನು ನಾವೆಲ್ಲರು ಬೆಂಬಲಿಸೋಣ ದೀಪ ಹಚ್ಚಿ ಕೊರೊನಾ ವೈರಸ್ ಓಡಿಸೋಣ.

ದೇಶದ ಜನರೆಲ್ಲ ಒಂದೇ ಎಂದು ಸಾರೋಣ ಎಂದು ತುಮಕೂರಿನ ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಮನವಿ ಮಾಡಿದರು.

ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಕೇಂದ್ರ, ರಾಜ್ಯ ಸರ್ಕಾರ ಕೊರೊನಾ ವೈರಸ್ ಓಡಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮೋದಿಯವರು ಇಂದು ರಾತ್ರಿ 9 ಗಂಟೆಗೆ 9 ನಿಮಿಷ ಎಲ್ಲಾ ವಿದ್ಯುತ್ ದೀಪಗಳನ್ನು ಆರಿಸಿ ದೀಪ ಹಚ್ಚುವ ಮೂಲಕ ದೇಶದಲ್ಲಿ ಕೊರೊನಾ ವೈರಸ್ ಓಡಿಸಲು ಕರೆ ನೀಡಿದ್ದಾರೆ. ಅದನ್ನು ಎಲ್ಲರೂ ಪಾಲಿಸೋಣ ಎಂದು ಹೇಳಿದರು.

Facebook Comments

Sri Raghav

Admin