ಶಿವಕುಮಾರ ಶ್ರೀ ಹಾಗೂ ಪೇಜಾವರ ಶ್ರೀ ಗೌರವಾರ್ಥ ಸ್ಮೃತಿವನ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.8- ತುಮಕೂರಿನಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಮತ್ತು ಉಡುಪಿಯಲ್ಲಿ ಪೇಜಾವರ ಶ್ರೀ ವಿಶ್ವತೀರ್ಥ ಶ್ರೀಪಾದ ಅವರ ಗೌರವಾರ್ಥ ಸ್ಮೃತಿವನ ನಿರ್ಮಿಸಲು ತಲಾ 2 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ.

ಪ್ರಾವಸೋದ್ಯಮ ಅಭಿವೃದ್ಧಿಗೆ ಬಜೆಟ್‍ನಲ್ಲಿ ಹೆಚ್ಚಿನ ಆದ್ಯತೆ ನೀಡಿರುವ ಸಿಎಂ, ಸಾರ್ವನಿಕ ಸಹಭಾಗಿತ್ವದಲ್ಲಿ ತದಡಿಯ 100 ಎಕರೆ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ಉದ್ಯೋನವನ ಅಭಿವೃದ್ಧಿಪಡಿಸುವುದಾಗಿ ಹೇಳಿದ್ದಾರೆ.

ನಂದಿ, ಕೆಮ್ಮಣ್ಣುಗುಂಡಿಯ ಪ್ರವಾಸೋದ್ಯಮ ತಾಣಗಳನ್ನು ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸಲಾಗಿದ್ದು, ಇವುಗಳನ್ನು ಅಂತಾರಾಷ್ಟ್ರೀಯ ಪರಿಸರ ಪ್ರಾವಸೋದ್ಯಮ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಬೆಂಗಳೂರು ಸುತ್ತಮುತ್ತ ಇರುವ ಪ್ರವಾಸಿ ತಾಣಗಳನ್ನು ಗುರುತಿಸಿ ಮೂಲಸೌಕರ್ಯ ಅಭಿವೃದ್ಧಿ ಪಡಿಸಿ ಕರ್ನಾಟಕ ಪ್ರಾಸೋದ್ಯಮ ಅಭಿವೃದ್ಧಿಗೆ ವಾರಾಂತ್ಯದ ಪ್ರವಾಸ ವೃತ್ತವನ್ನಾಗಿ ಮಾರ್ಪಾಡಿಸಲಾಗುವುದು ಎಂದಿದ್ದಾರೆ.

[ ಕರ್ನಾಟಕ ಬಜೆಟ್ – 2021 (All Updates) ]

ಒಂದು ರಾಜ್ಯ ಹಲವು ಜಗತ್ತು ಘೋಷ ವಾಕ್ಯದಲ್ಲಿ ವಿವಿಧ ಪ್ರವಾಸೋದ್ಯಮ ತಾಣಗಳ ಮೂಲಸೌಕರ್ಯಾಭಿವೃದ್ಧಿಗೆ ಈ ವರ್ಷ ಪ್ರವಾಸೋದ್ಯಮ ಇಲಾಖೆಗೆ 500 ಕೋಟಿ ರೂ. ಅನುದಾನ ನೀಡಲಾಗಿದೆ. ಕಬಿನಿ ಅಣೆಕಟ್ಟು ಕೆಳ ಭಾಗದಲ್ಲಿರುವ ಉದ್ಯಾನವ ಅಭಿವೃದ್ಧಿಗೆ 50 ಕೋಟಿ ಅನುದಾನ ನೀಡಲಾಗಿದೆ. ಉಡುಪಿಯ ತ್ರಾಸಿ, ಮರವಂತೆ, ಒತ್ತಿನೆಣೆ ಹಾಗೂ ಇತರ ಕಡಲ ತೀರಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.

ಬೈಂದೂರು ತಾಲ್ಲೂಕು ಸೋಮೇಶ್ವರ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ 10 ಕೋಟಿ, ಬಳ್ಳಾರಿ ಜಿಲ್ಲೆ ಸಂಗನಕಲ್ಲಿನಲ್ಲಿರುವ ದೇಶದ ಮೊದಲ ಪೂರ್ವ ಐತಿಹಾಸಿಕ ಯುಗದ ಅವಶೇಷಗಳ ವಸ್ತು ಸಂಗ್ರಹಾಲಯ ಸ್ಥಾಪಿಸಲಾಗಿದೆ. ತೋಣಗಲ್ಲು ನಡುವೆ ಇರುವ ಕುಡುತಿನಿ ಆಶ್‍ಮೌಂಟ್ ಅಭಿವೃದ್ಧಿಗೆ 5 ಕೋಟಿ ನೀಡಲು ನಿರ್ಧರಿಸಲಾಗಿದ್ದು, ಈ ವರ್ಷ 2 ಕೋಟಿ ಬಿಡಗುಡೆ ಮಾಡಲಾಗುತ್ತಿದೆ ಎಂದರು.

ರಾಜ್ಯದ ಪ್ರಸ್ತಭೂಮಿ ಪ್ರದೇಶದಲ್ಲಿ ಕಾಣುತ್ತಿರುವ ಅಳುವಿನಂಚಿನಲ್ಲಿರುವ ಲೆಸ್ಸರ್ ಪ್ಲೊರಿಕನ್ ಪಕ್ಷಿ ಪ್ರಭೇದ ಸಂರಕ್ಷಣೆಗಾಗಿ 50 ಲಕ್ಷ ನೀಡಲಾಗಿದೆ. ಚಾಮರಾಜನಗರ ಜಿಲ್ಲೆ ಗೋಪಿನಾಥನ್ ಪ್ರದೇಶದಲ್ಲಿ ಸಫಾರಿಗಾಗಿ 5 ಕೋಟಿ ನೀಡಲಾಗಿದೆ. ಬೂದಿಪಡಗದಲ್ಲಿ ಆನೆ ಕಾರಿಡಾರ್‍ಗೆ ಒಂದು ಕೋಟಿ ನೀಡಲಾಗಿದೆ.

Facebook Comments

Sri Raghav

Admin