ಆಸ್ಪತ್ರೆಯಿಂದ ಸಿದ್ದಗಂಗಾ ಶ್ರೀ ಡಿಸ್ಚಾರ್ಜ್, ಮಠಕ್ಕೆ ಮರಳಿದ ನಡೆದಾಡುವ ದೇವರು

ಈ ಸುದ್ದಿಯನ್ನು ಶೇರ್ ಮಾಡಿ

Siddaganga-Swamiji--01

ಬೆಂಗಳೂರು, ಡಿ.3-ಉಸಿರಾಟ ತೊಂದರೆಯಿಂದ ಕಳೆದ ಮೂರು ದಿನಗಳಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಅವರು ಇಂದು ಡಿಸ್ಚಾರ್ಜ್ ಆಗಿ ಶ್ರೀಮಠಕ್ಕೆ ಹಿಂದಿರುಗಿದರು.

ಒಂದು ವಾರ ಕಾಲ ಅವರು ವಿಶ್ರಾಂತಿಯಲ್ಲಿರಬೇಕು ವೈದ್ಯರು ತಿಳಿಸಿದ್ದು, ಹೀಗಾಗಿ ಭಕ್ತರ ದರ್ಶನಕ್ಕೆ ಮಠದಲ್ಲಿ ಅವಕಾಶವಿಲ್ಲ, ದಯಮಾಡಿ ಸಹಕರಿಸಬೇಕೆಂದು ಕಿರಿಯ ಶ್ರೀಗಳು ಆಸ್ಪತ್ರೆ ಮುಂಭಾಗ ಸುದ್ದಿಗಾರರಿಗೆ ತಿಳಿಸಿದರು. ಆಸ್ಪತ್ರೆಯ ವೈದ್ಯರು ಸಿದ್ಧಗಂಗಾ ಶ್ರೀಗಳ ಆಚಾರ-ವಿಚಾರಕ್ಕೆ ಧಕ್ಕೆ ಬಾರದಂತÉ ಚಿಕಿತ್ಸೆ ನೀಡಿ ಆಸ್ಪತ್ರೆಯನ್ನು ಮಠವಾಗಿ ಪರಿವರ್ತಿಸಿ ಅವರ ಆರೋಗ್ಯವನ್ನು ಕಾಪಾಡಿದ್ದಾರೆ. ಇಲ್ಲಿನ ಎಲ್ಲಾ ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

ನಿನ್ನೆಗೆ ಅವರ ಚಿಕಿತ್ಸೆ ಮುಗಿದಿತ್ತು. ಆದರೂ ನಿಗಾ ಘಟಕದಲ್ಲಿ ಇಡಲಾಗಿತ್ತು. ಇಂದು ಬೆಳಗ್ಗೆ ಡಿಸ್ಚಾರ್ಜ್ ಮಾಡಲಾಯಿತು. ಈ ಮಠಕ್ಕೆ ಕರೆದೊಯ್ಯುತ್ತಿದ್ದೇವೆ. ಒಂದು ವಾರ ಕಾಲ ಅಲ್ಲಿ ವಿಶ್ರಾಂತಿ ಪಡೆಯುತ್ತಾರೆ ಎಂದು ಹೇಳಿದರು. ಶ್ರೀಗಳಿಗೆ ಚಿಕಿತ್ಸೆ ನೀಡಿದ ಡಾ.ರವೀಂದ್ರ ಮಾತನಾಡಿ, ಪಿತ್ತಕೋಶ, ಮೂತ್ರನಾಳದಲ್ಲಿ ಸೋಂಕು ಉಂಟಾಗಿತ್ತು. ಎಂಡೋಸ್ಕೋಪಿ ಮೂಲಕ ಎರಡು ಸ್ಟಂಟ್‍ಗಳನ್ನು ಅಳವಡಿಸಿದ್ದೇವೆ. ಈಗ ಸೋಂಕು ಕಡಿಮೆಯಾಗಿದೆ. ಚಿಕಿತ್ಸೆ ವೇಳೆ ಅರವಳಿಕೆ ನೀಡಲಾಗಿತ್ತು.

ಶ್ರೀಗಳು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಗಂಭೀರ ಪರಿಸ್ಥಿತಿ ಇದ್ದರೆ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಬೇಕಿತ್ತು. ಆದರೆ ಶ್ರೀಗಳು ಆರಾಮಾಗಿರುವುದರಿಂದ ಸದ್ಯಕ್ಕೆ ವಾರ್ಡ್‍ನಲ್ಲಿ ವಿಶ್ರಾಂತಿ ಪಡೆದರು. ಗಾಲ್ ಬ್ಲಾಡರ್‍ನ ಇನ್‍ಫೆಕ್ಷನ್ ಇದ್ದಾಗ ಕೆಲವೊಮ್ಮೆ ಪದೇ ಪದೇ ಜ್ವರ ಬರುವ ಸಾಧ್ಯತೆ ಇದೆ. ಹಾಗಾಗಿ ಶ್ರೀಗಳನ್ನು ಡಿಸ್ಚಾರ್ಜ್ ಮಾಡದೆ ಆಸ್ಪತ್ರೆಯಲ್ಲಿಯೇ ಇರಿಸಿಕೊಂಡು ನಿಗಾ ವಹಿಸಲಾಗಿತ್ತು. ಇಂದು ಡಿಸ್ಚಾರ್ಜ್ ಮಾಡಲಾಯಿತು. ನಮ್ಮ ಸಿಬ್ಬಂದಿ ಎಂದೆರಡು ದಿನ ಮಠದಲ್ಲೇ ಇದ್ದು, ಶ್ರೀಗಳ ಆರೋಗ್ಯ ಬಗ್ಗೆ ನಿಗಾ ವಹಿಸುತ್ತಾರೆ ಎಂದು ಹೇಳಿದರು.

Facebook Comments

Sri Raghav

Admin