ತುಮಕೂರಿನ ಸಿದ್ದಗಂಗಾ ಶ್ರೀಗಳು ಮತ್ತೆ ಐಸಿಯುಗೆ

ಈ ಸುದ್ದಿಯನ್ನು ಶೇರ್ ಮಾಡಿ

swamijiಬೆಂಗಳೂರು,ಡಿ.16- ಅನಾರೋಗ್ಯದ ಹಿನ್ನೆಲೆಯಲ್ಲಿ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತುಮಕೂರಿನ ಸಿದ್ದಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿಯವರನ್ನು ವಾರ್ಡ್‍ನಿಂದ ಮತ್ತೆ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಸಿದ್ದಗಂಗಾ ಶ್ರಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದರೂ ಪೋಷಕಾಂಶದ ಕೊರತೆ ಇರುವ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿಟ್ಟು ಅವರಿಗೆ ಪೋಷಕಾಂಶಗಳನ್ನು ಪೂರೈಸಲಾಗುತ್ತಿದೆ ಎಂದು ಅವರ ಆಪ್ತ ವೈದ್ಯರಾದ ಡಾ.ಪರಮೇಶ್ವರ್ ತಿಳಿಸಿದರು. ಶ್ವಾಸಕೋಶದ ಸೋಂಕಿನ ಹಿನ್ನೆಲೆಯಲ್ಲಿ ಶ್ರೀಗಳಿಗೆ ಶಸ್ತ್ರ ಚಿಕಿತ್ಸೆಯಾಗಿತ್ತು. ಗಾಯ ವಾಸಿಯಾಗುತ್ತಿದೆ. ಸದ್ಯ ಅವರಿಗೆ ಬೇಯಿಸಿದ ಆಹಾರ ನೀಡುತ್ತಿದೆ. ದ್ರವಾಹಾರ ನೀಡಲಾಗುತ್ತಿದೆ.

ಶ್ರೀಗಳಿಗೆ ಪಿಜಿಯೋಥೆರಪಿ ಮಾಡಲಾಗುತ್ತಿದ್ದು ಐಸಿಯುನಲ್ಲೇ ವಾಕಿಂಗ್ ಮಾಡಿಸಲಾಗುವುದು ಎಂದು ತಿಳಿಸಿದರು. ತೀವ್ರ ನಿಗಾ ಘಟಕದಲ್ಲೇ ಶ್ರೀಗಳು ಇಷ್ಟಲಿಂಗ ಪೂಜೆ ನೇರವೇರಿಸುತ್ತಿದ್ದಾರೆ. ಎಲ್ಲರನ್ನೂ ಲವಲವಿಕೆಯಿಂದ ಮಾತನಾಡಿಸುತ್ತಿದ್ದಾರೆ. ಅಗತ್ಯ ಪೋಷಕಾಂಶಗಳನ್ನು ನೀಡಿ ಅವರ ಆರೋಗ್ಯ ಸಂಪೂರ್ಣ ಸುಧಾರಿಸಿದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದರು.
111ನೇ ಇಳಿ ವಯಸ್ಸಿನಲ್ಲಿ ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿದರೂ ಅವರು, ಚಿಕಿತ್ಸೆಗೆ ಸ್ಪಂದಿಸಿ, ಶೀಘ್ರ ಗುಣಮುಖರಾಗುತ್ತಿರುವುದನ್ನು ಕಂಡು ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಡೆದಾಡುವ ಈ ದೇವರಾದ ಶ್ರೀಗಳ ಆರೋಗ್ಯದ ಪವಾಡ ವೈದ್ಯ ಕ್ಷೇತ್ರದಲ್ಲಿ ಅಚ್ಚರಿ, ಕುತೂಹಲ ಮೂಡಿಸಿದೆ.

Facebook Comments

2 thoughts on “ತುಮಕೂರಿನ ಸಿದ್ದಗಂಗಾ ಶ್ರೀಗಳು ಮತ್ತೆ ಐಸಿಯುಗೆ

Comments are closed.