ಸಿದ್ಧರ ಬೆಟ್ಟದಲ್ಲಿವೆ 900 ಸಂಜೀವಿನಿ ಔಷಧೀಯ ಸಸ್ಯಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜೂ.10- ಜಿಲ್ಲಾಯ ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದಲ್ಲಿ ಔಷಧೀಯ ಗುಣವುಳ್ಳ ಮರ-ಗಿಡಗಳು ಅಗಾಧ ಪ್ರಮಾಣದಲ್ಲಿದ್ದು, ಅವುಗಳಲ್ಲಿ ಸುಮಾರು 900 ಔಷಧೀಯ ಸಸ್ಯಗಳನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಜಿಲ್ಲಾಯಲ್ಲೊಂದು ಅಗಾಧವಾದ ಔಷಧೀಯ ಗುಣಗಳ ಸಸ್ಯರಾಶಿಯನ್ನು ಒಳಗೊಂಡಿರುವ ಅಪರೂಪದ ಶಿಖರವಿದೆ.

ಈ ಬೆಟ್ಟವನ್ನು ಹತ್ತಿದರೆ ಆಯುರ್ವೇದಿಕ್ ಔಷಧೀಯ ಗುಣಗಳುಳ್ಳ ಮರ-ಗಿಡಗಳು ಕಾಣಸಿಗುತ್ತವೆ. ಇಲ್ಲಿ 900 ಔಷಧೀಯ ಸಸ್ಯಗಳಿವೆ ಎಂದು ಪತ್ತೆಹಚ್ಚಲಾಗಿದೆ. ಸುಮಾರು 6600 ಅಡಿ ಎತ್ತರದವರೆಗೂ ಚಾಚಿಕೊಂಡಿರುವ ಬೆಟ್ಟ ಶತಮಾನಗಳಿಂದಲೂ ಹಲವು ಔಷಧೀಯ ಗುಣಗಳ ಸಸ್ಯಗಳನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡು ಜತನದಿಂದ ಕಾಪಾಡಿಕೊಂಡು ಬಂದಿದೆ.

ಈ ಬೆಟ್ಟ ಸಂಜೀವಿನಿ ಬೆಟ್ಟ ಮತ್ತು ರಸ ಸಿದ್ಧರಬೆಟ್ಟ ಎಂಬ ನಾಮಾಂಕಿತದಿಂದ ಪ್ರಚಲಿತಗೊಂಡಿದೆ. ಈ ಗಿರಿ ಶಿಖರದಲ್ಲಿ ಸಂಜೀವಿನಿ ಕೂಡ ಇದೆ ಎಂಬ ಹಿನ್ನೆಲೆಯಲ್ಲಿ ಇದನ್ನು ಸಂಜೀವಿನ ಬೆಟ್ಟ ಎಂದು ಕರೆಯಲಾಗುತ್ತಿದೆ. ಈ ಸಿದ್ಧರಬೆಟ್ಟದ ಕುರಿತು ಅಧ್ಯಯನ ನಡೆಸಿರುವಂತಹ ಕೇಂದ್ರ ಸರ್ಕಾರದ ವಿಶೇಷ ವೈದ್ಯರ ತಂಡ, ಈ ಗಿರಿಶಿಖರ ಒಂದೆರಡಲ್ಲಾ 900 ಅಪರೂಪದ ಔಷಧೀಯ ಗುಣ ಹೊಂದಿದ ಸಸ್ಯಗಳಿವೆ ಎಂದು ಘೋಷಿಸಿದೆ.

ಅಲ್ಲದೆ, ಇನ್ನಷ್ಟು ಔಷಧೀಯ ಗುಣ ಹೊಂದಿದ ಸಸ್ಯಗಳ ಕುರಿತು ನಿರಂತರವಾಗಿ ಅಧ್ಯಯನ ನಡೆಸುತ್ತಿದೆ. ಈ ಸಂಜೀವಿನಿ ಬೆಟ್ಟದಲ್ಲಿವೆ 900 ಔಷಧೀಯ ಸಸ್ಯಗಳು: ಬೆಟ್ಟಕ್ಕೆ ಭೇಟಿ ನೀಡುವ ಭಕ್ತರು ಕೂಡ ಈ ಸಸ್ಯ ಸಂಪತ್ತನ್ನು ಸಂರಕ್ಷಿಸುವ ಜವಾಬ್ದಾರಿ ವಹಿಸಬೇಕಿದೆ. ಔಷಧೀಯ ಗುಣವಿರುವ ಸಸ್ಯಗಳನ್ನು ನಾಶ ಮಾಡಬಾರದು ಎಂದು ಬಾಳೆಹೊನ್ನೂರು ಶಾಖಾಮಠದ ಶ್ರೀ ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.

ಕೆಲ ರೈತರು ತಮ್ಮ ಜಾನುವಾರುಗಳಿಗೆ ಪೂರಕವಾದಂತಹ ಔಷಧೀಯ ಸಸ್ಯಗಳ ಎಲೆಗಳನ್ನು ಕಿತ್ತುಕೊಂಡು ಹೋಗುತ್ತಾರೆ. ಬೆಟ್ಟದಲ್ಲಿ ಮಧುನಾಶಿನಿ, ನೇಪಥ್ಯಕ್ಕೆ ಸರಿಯುತ್ತಿರುವ ಜಾಲಾರಿ ಗಿಡ, ಬಹು ಮುಖ್ಯವಾಗಿ ಕ್ಯಾನ್ಸರ್ ರೋಗ ನಿವಾರಿಸುವಂತಹ ಬಗೆಬಗೆಯ ಸಸ್ಯರಾಶಿ ಇರುವುದನ್ನು ಕಾಣಬಹುದಾಗಿದೆ. ಒಟ್ಟಾರೆ, ದೇಶದಲ್ಲಿಯೇ ಇಂತಹ ಅಪರೂಪದ ಔಷಧೀಯ ಸಸ್ಯರಾಶಿ ಹೊಂದಿರುವ ಸಿದ್ಧರಬೆಟ್ಟದ ಸಂರಕ್ಷಣೆ ಮಾಡುವುದು ಕೂಡ ಅಷ್ಟೇ ಪ್ರಮುಖವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ