ರಾಂಪುರ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ನಂಜನಗೂಡು.ಫೆ.7-ತಾಲೂಕು ರಾಂಪುರ ಗ್ರಾಮದಲ್ಲಿ ನಿರ್ಮಿಸಿರುವ ರಾಮಲಿಂಗೇಶ್ವರ ದೇವಸ್ಥಾನಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಭೇಟಿ ನೀಡಿ ದೇವರ ಆರ್ಶೀವಾದ ಪಡೆದರು.  ನಂತರ ಅವರು ಮಾತನಾಡಿದ ಅವರು, ಈ ದೇವಾಲಯ ಅತ್ಯಂತ ಪುರಾತನವಾಗಿದ್ದು, ಗ್ರಾಮಸ್ಥರು ಬಹುದಿನಗಳಿಂದ ಹೊಸದಾಗಿ ನಿರ್ಮಿಸಿಕೊಡಬೇಕೆಂದು ಬೇಡಿಕೆ ಇಟ್ಟಿದ್ದರು.

ಅವರ ಬಹುದಿನಗಳ ಬೇಡಿಕೆ ಈಡೇರಿಸಿದಂತಾಯಿತು ಎಂದು ತಿಳಿಸಿದರಲ್ಲದೆ ಗ್ರಾಮೀಣ ಭಾಗದಲ್ಲಿ ಇಂತಹ ದೇವಸ್ಥಾನವನ್ನು ನಿರ್ಮಿಸಿರುವುದು ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಹಂದನಹಳ್ಳಿ ರಮೇಶ್ ಹಾಗೂ ಗ್ರಾಮದ ಮುಖಂಡರಾದ ಪಟೇಲ್ ಮಹದೇವಪ್ಪನವರನ್ನು ಸಿದ್ದರಾಮಯ್ಯನವರು ಸನ್ಮಾನಿಸಿದರು.
ಮಾಜಿ ಸಂಸದ ಆರ್.ಧ್ರುವನಾರಾಯಣ, ಹೆಚ್.ಡಿ.ಕೋಟೆ ಶಾಸಕ ಅನಿಲ್‍ಚಿಕ್ಕಮಾದು, ಹೆಚ್.ಸಿ.ಬಸವರಾಜು, ಮಾಜಿ ಜಿ.ಪಂ.ಅಧ್ಯಕ್ಷ ರಾಮು, ಹುಲ್ಲಹಳ್ಳಿ ಬಸವರಾಜಪ್ಪ, ಸೋಮಸುಂದರ್, ಕೆಂಪಣ್ಣ, ಮರಳೂರು ಮಹೇಶ್, ಬಸವಣ್ಣ ಸೇರಿದಂತೆ ರಾಂಪುರ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ನಂಜನಗೂಡಿನ ಮಾರ್ಗವಾಗಿ ಚಾಮರಾಜನಗರಕ್ಕೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಲ್ಲಿನ ಕಾಂಗ್ರೆಸ್ ಮುಖಂಡರು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ನೇತೃತ್ವದಲ್ಲಿ ಭವ್ಯ ಸ್ವಾಗತ ಕೋರಿದರು.

ಮೈಸೂರು, ಫೆ.7– ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ಹೇಗೆ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದನ್ನು ನಾನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಮಿಕವಾಗಿ ನುಡಿದರು. ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನೂತನ ಸಚಿವ ಎಸ್.ಟಿ.ಸೋಮಶೇಖರ್ ನಿನ್ನೆ ಅನರ್ಹರೆಂಬುದನ್ನು ಇನ್ನು ಮುಂದೆ ಬಿಡಲಿ ಎಂದು ಸೂಚ್ಯವಾಗಿ ಸಿದ್ದರಾಮಯ್ಯನವರನ್ನು ಕುರಿತು ಹೇಳಿದುದಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

ಸುಪ್ರೀಂಕೋರ್ಟೇ ಅವರನ್ನು ಅನರ್ಹರೆಂದು ಹೇಳಿದೆ ಅವರುಗಳು ಏನಾದರೂ ಆಗಿರಲಿ ಜನರಿಗೆ ಒಳ್ಳೆಯ ಕೆಲಸಗಳನ್ನು ಮಾಡಲಿ ಈ ಬಗ್ಗೆ ಹೆಚ್ಚು ಹೇಳುವುದಿಲ್ಲ ಎಂದರು.
ಮತ್ತೊಮ್ಮೆ ತಮಗೆ ಅಧಿಕಾರ ಕೊಡಿ ಎಂದು ಎಚ್.ಡಿ.ಕುಮಾರಸ್ವಾಮಿ ಕೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರೇನೋ ಕೇಳಬಹುದು ಆದರೆ ಜನ ಕೊಡಬೇಕಲ್ಲ. 14 ತಿಂಗಳು ಅಧಿಕಾರದಲ್ಲಿದ್ದು ಏನು ಮಾಡಿದರು ಎಂಬುದು ಜನರಿಗೆ ಗೊತ್ತಿದೆ. ಸೋ ಅಂತದ್ದೆಲ್ಲ ಆಗಲ್ಲ ಬಿಡಿ ಎಂದು ಸಿದ್ದು ಮುನ್ನಡೆದರು.

Facebook Comments