‘ಒಳಜಗಳದಿಂದ ಬಿಜೆಪಿ ಸರ್ಕಾರ ಬಿದ್ದರೆ ಮುಂದೆ ನೋಡೋಣ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.3- ಬಿಜೆಪಿ ತನ್ನ ಒಳ ಜಗಳದಿಂದ ತಾನಾಗಿಯೇ ಬಿದ್ದು ಹೋದರೆ, ಆ ಸಂದರ್ಭದಲ್ಲಿ ಸರ್ಕಾರ ರಚನೆ ಅಥವಾ ಬೇರೆ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಕಾಂಗ್ರೆಸ್ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಭಿನ್ನಮತ ಇರೋದು ಸತ್ಯ. ಬಿಜೆಪಿಯಲ್ಲಿ ಭಿನ್ನಮತ ಮುಂದುವರಿಯುತ್ತೆ. ಅದರಲ್ಲಿ ನಾವು ಕೈ ಹಾಕಲ್ಲ. ಸರ್ಕಾರ ಅದಾಗಿಯೇ ಬಿದ್ದು ಹೋದರೆ ನೋಡೋಣ ಎಂದರು.

ಅಸಂವಿಧಾನಾತ್ಮಕ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಇದ್ದಾರೆ ಅಂತ ಜನ ಹೇಳುತ್ತಾರೆ, ನಾವಲ್ಲ. ಯಡಿಯೂರಪ್ಪ ಹೆಸರಿಗಷ್ಟೇ ಸಿಎಂ, ವಿಜಯೇಂದ್ರ ಸಹಿ ಮಾಡೋದು. ಬಹಳ ಜನ ಅಸಮಾಧಾನಿತ ಬಿಜೆಪಿ ಶಾಸಕರು ನನ್ನನ್ನು ಭೇಟಿಯಾಗಿದ್ದಾರೆ.

ಅವರು ಸಹಜವಾಗಿ ಅಸಮಾಧಾನ ತೋಡಿಕೊಂಡಿದಾರೆ ಅಷ್ಟೇ. ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಅತ್ಯುತ್ತಮ ಬಾಂಧವ್ಯ, ಸಂಬಂಧ ಇದೆ. ನಮ್ಮ ನಡುವೆ ಸರಿ ಇಲ್ಲ ಅನ್ನೋದೆಲ್ಲ ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದರು.

ಎಚ್ಚರಿಕೆ ವಹಿಸಿದರೆ ಕೊರೊನಾ ಹರಡಲ್ಲ. ಕೊರೊನಾ ಬಗ್ಗೆ ತಿಳಿದುಕೊಳ್ಳುವುದು ಕಾಮನ್‍ಸೆ£. ಕೊರೊನಾ ಬಗ್ಗೆ ಮಾತಾಡಲು ಪಿಎಚ್‍ಡಿ ಮಾಡಬೇಕಿಲ್ಲ ಎಂದು ಕೃಷಿ ಸಚಿವ ಬಿ.ಸಿಪಾಟೀಲ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್ ನೀಡಿದರು. ವಸತಿ ಸಚಿವ ಸೋಮಣ್ಣ ಅವರಿಗೆ ಆರ್ಥಿಕ ವ್ಯವಸ್ಥೆ ಬಗ್ಗೆ ಸರಿಯಾದ ಜ್ಞಾನ ಇಲ್ಲ.

ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಹಾಳು ಮಾಡಿದ್ದರು ಎಂದು ಸೋಮಣ್ಣ ಅವರು ಆರೋಪಿಸಿದ್ದಾರೆ. ನಮ್ಮ ಕಾಲದಲ್ಲಿ ಆರ್ಥಿಕ ಶಿಸ್ತಿನಲ್ಲಿ ರಾಜ್ಯ ಸರ್ಕಾರ ಮೊದಲ ಸ್ಥಾನದಲ್ಲಿತ್ತು. ಸೋಮಣ್ಣ ರಾಜಕೀಯಕ್ಕಾಗಿ ಏನೇನೋ ಮಾತಾಡ್ತಾರೆ. ಸೋಮಣ್ಣ ಯಾವ ಆರ್ಥಿಕ ತಜ್ಞ ರೀ ಎಂದು ಪ್ರಶ್ನಿಸಿದರು.

ರಾಜ್ಯದ ಆರ್ಥಿಕ ಸ್ಥಿತಿ ಈಗ ದಿವಾಳಿಯಾಗಿದೆ. ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ. ಇದು ಕರ್ನಾಟಕದ ಕಥೆ ಮಾತ್ರವಲ್ಲ, ಇಡೀ ದೇಶದ ಸ್ಥಿತಿಯೇ ಹೀಗಾಗಿದೆ. ಕೊರೊನಾ ಬರೋದಕ್ಕಿಂತ ಮುಂಚೆಯಿಂದಲೂ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ. ಸೋಮಣ್ಣನವರಿಗೆ ಸಂಸ್ಕøತಿ ಇಲ್ಲ.

ಬಿಜೆಪಿಯವರ ಹಾಗೆ ನಾನು ಕೀಳುಮಟ್ಟಕ್ಕೆ ಇಳಿದು ಮಾತನಾಡಲ್ಲ ಎಂದರು. ಗ್ರಾಪಂ ಚುನಾವಣೆಯನ್ನು ಕೊರೊನಾ ಹೆಸರಿನಲ್ಲಿ ಮುಂದೂಡುವುದನ್ನು ನಾವು ವಿರೋಧಿಸಿದ್ದೇವೆ.

ಈ ಕುರಿತು ನ್ಯಾಯಾಲಯದ ಮೊರೆ ಹೋಗುತ್ತೇವೆ. ಪ್ರಗತಿಪರರ ಮೇಲೆ ಕೊಪ್ಪಳದಲ್ಲಿ ಕೇಸ್ ಹಾಕುವುದನ್ನು ಖಂಡಿಸುವೆ. ಬಿಜೆಪಿ ಆ ರೀತಿ ಮಾಡಕೂಡದು. ಅವರಿಗೆ ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

Facebook Comments