ಮುಂದುವರಿದ ಸಿದ್ದರಾಮಯ್ಯ -ಸಿ.ಟಿ.ರವಿ ವಾಕ್ಸಮರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.22- ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕಿಂತ ಮತಬ್ಯಾಂಕ್ ರಾಜಕಾರಣವೇ ಮುಖ್ಯವಾಗಿದೆ. ದೇಶ ಭಕ್ತಿ ಸರಳವಾಗಿ ಅರ್ಥವಾಗಬೇಕಾದರೆ ಸ್ವಯಂ ಸೇವಕ ಸಂಘಟನೆಯೊಂದೆ ಮಾರ್ಗ. ಅಲ್ಲಿಗೆ ಬನ್ನಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತೊಮ್ಮೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದಾರೆ.

ಕೆಲವು ದಿನಗಳಿಂದ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕರ ನಡುವೆ ಆರ್‍ಎಸ್‍ಎಸ್ ಕಚೇರಿಗೆ ಭೇಟಿ ನೀಡುವ ವಿಷಯವಾಗಿ ವಾದ ವಿವಾದ ನಡೆಯುತ್ತಿದೆ. ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರಿಗೆ ದೇಶಭಕ್ತಿಯ ಪಾಠ ಕಲಿಯಲು ಆರ್‍ಎಸ್‍ಎಸ್ ಕಚೇರಿಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ, ನನಗೆ ಆರ್‍ಎಸ್‍ಎಸ್ ಏನು ಎಂದು ಗೊತ್ತು. ಆಡಳಿತ ನಡೆಸುವ ನಾಯಕರಿಗೆ ಮೊದಲು ಸಂವಿಧಾನ ಅರ್ಥವಾಗಲಿ ಎಂದು ತಿರುಗೇಟು ನೀಡಿದ್ದಾರೆ.

ಮುಂದುವರೆದ ಭಾಗವಾಗಿ ಸಿದ್ದರಾಮಯ್ಯ ಅವರು ಸಿ.ಟಿ.ರವಿ ಏನು ಆರ್‍ಎಸ್‍ಎಸ್ ಸಂಸ್ಥಾಪಕರೇ ಅಥವಾ ಹೆಡ್ಗೆವಾರ್ ಸಹಚರರೇ ಎಂದು ಪ್ರಶ್ನಿಸಿದ್ದರು. ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿ.ಟಿ.ರವಿ ಅವರು, ನಾನು ಆರ್‍ಎಸ್‍ಎಸ್ ಸಂಸ್ಥಾಪಕ ಅಲ್ಲ, ನಾನೊಬ್ಬ ಸಂಘದ ಸ್ವಯಂಸೇವಕ. ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರನ್ನು ಗುರುವಾಗಿ ಸ್ವೀಕರಿಸಿದ್ದು, ಸಹಸ್ರಾರು ವರ್ಷಗಳಿಂದ ಪ್ರೇರಣೆ ನೀಡಿದ ಭಗವದ್ ಧ್ವಜವನ್ನು ಮತ್ತು ವ್ಯಕ್ತಿಗಿಂತ ತತ್ವ ಶ್ರೇಷ್ಠ ಎಂಬ ಸಿದ್ದಾಂತವನ್ನು ನಂಬಿದ್ದೇನೆ ಎಂದರು.

ಸಂಘ ಸ್ವಯಂಸೇವಕರಿಗೆ ಹೇಳಿ ಕೊಟ್ಟಿದ್ದು ದೇಶ ಮೊದಲು ಎನ್ನುವ ತತ್ವವನ್ನು. ಸ್ವಂತಕ್ಕೆ ಸ್ವಲ್ಪಸಮಾಜಕ್ಕೆ ಸರ್ವಸ್ವ ಎಂಬ ಭಾವವನ್ನು. ಇದು ಅರ್ಥವಾಗಬೇಕಾದರೆ, ಅಸ್ಪೃಶ್ಯತೆಯ, ಜಾತೀಯತೆಯ ಸೋಂಕಿಲ್ಲದೆ ನಾವೆಲ್ಲರೂ ಒಂದು, ಭಾರತಮಾತೆಯ ಮಕ್ಕಳು ಎಂದು ಬದುಕಬೇಕಾದರೆ ನೀವು ಶಾಖೆಗೆ ಬರಬೇಕು ಎಂದು ಮತ್ತೊಮ್ಮೆ ಆಹ್ವಾನ ನೀಡಿದ್ದಾರೆ.

ನಾನು ನಿಮ್ಮ ಹಾಗೆ, ಸಿದ್ದರಾಮಯ್ಯ ಅವರೇನು ಕಾಂಗ್ರೆಸ್ ಸಂಸ್ಥಾಪಕ ಹ್ಯೂಮïರವರ ಮೊಮ್ಮಗನೋ, ಮರಿಮಗನೋ ಎಂದು ಕೇಳುವುದಿಲ್ಲ. ಇಂದಿರಾ ಗಾಂಯವರ ದತ್ತುಪುತ್ರ ಎಂದು ಹೇಳುವುದಿಲ್ಲ. ಅಕಾರಕ್ಕಾಗಿ ಪಕ್ಷ ಬದಲಾಯಿಸಿದರು ಎಂದು ಆರೋಪಿಸುವುದಿಲ್ಲ. ಬದಲಾಗಿ ವಂಶವಾದಕ್ಕಿಂತ, ಜಾತಿವಾದಕ್ಕಿಂತ, ರಾಷ್ಟ್ರವಾದ ದೇಶಕ್ಕೆ ಒಳ್ಳೆಯದು ಎಂದಷ್ಟೇ ಹೇಳಬಯಸುತ್ತೇನೆ ಎಂದು ನಯವಾಗಿಯೇ ತಿರುಗೇಟು ನೀಡಿದ್ದಾರೆ.

ನೀವಿರುವ ಪಕ್ಷದಲ್ಲಿ (ಕಾಂಗ್ರೆಸ್) ದೇಶಕ್ಕಿಂತ ಮತಬ್ಯಾಂಕ್ ಮುಖ್ಯವಾಗಿದೆ, ಪ್ರಜಾಪ್ರಭುತ್ವಕ್ಕಿಂತ ರಾಜಪ್ರಭುತ್ವದ ಮಾದರಿಯ ಕುಟುಂಬ ರಾಜಕಾರಣವಿದೆ. ದಾರಿತಪ್ಪಿರುವ ಕಾಂಗ್ರೆಸ್ಸಿಗರಿಗೆ ದೇಶಭಕ್ತಿಯ ಪಾಠ ಹೇಳಿಕೊಡಲು ಯಾರಿದ್ದಾರೆ ? ಮಹಾತ್ಮ ಗಾಂಯವರು ಬದುಕಿಲ್ಲ, ಕಾಂಗ್ರೆಸ್ ಅವರ ತತ್ವಕ್ಕೆ ನೆಹರು ಅವರ ಕಾಲದಲ್ಲಿಯೇ ಎಳ್ಳುನೀರು ಬಿಟ್ಟಾಗಿದೆ ಎಂದಿದ್ದಾರೆ.

ದೇಶಭಕ್ತಿ ಸರಳವಾಗಿ ಅರ್ಥವಾಗಲು ಸಂಘದ ಶಾಖೆಗಿಂತ ಬೇರೆ ದಾರಿಯಿಲ್ಲ. ಅದಕ್ಕಾಗಿಯೇ ಸಾರ್ವಜನಿಕ ರೂಪದ ಸಂಪರ್ಕ ಮಾಡಿದ್ದೇನೆ. ಇನ್ನೆಷ್ಟು ದಿನ ನಯವಂಚಕ, ಸ್ವಾರ್ಥದ ರಾಜಕಾರಣ? ಎಂದು ಹೇಳುವ ಜೊತೆ ಉಳಿದಿದ್ದು ನಿಮಗೆ ಬಿಟ್ಟಿದ್ದು ಎಂದಿದ್ದಾರೆ.

Facebook Comments