ಇಂದಿರಾಕ್ಯಾಂಟಿನ್ ಅನುದಾನ ಬಿಡುಗಡೆಗೆ ಸಿದ್ದು ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.2- ಇಂದಿರಾ ಕ್ಯಾಂಟಿನ್‍ಗೆ ಅಗತ್ಯವಾದ ಅನುದಾನ ಬಿಡುಗಡೆ ಮಾಡಿ ಅವುಗಳನ್ನು ಮತ್ತಷ್ಟು ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಇಂದಿರಾಕ್ಯಾಂಟಿನ್‍ಗಳಿಗೆ ಅಗತ್ಯವಿರುವ 28 ಕೋಟಿ ರೂ.ಗಳ ಹಣವನ್ನು ಆರು ತಿಂಗಳಿನಿಂದ ಬಿಡುಗಡೆ ಮಾಡಿಲ್ಲ.

198 ಕ್ಯಾಂಟಿನ್‍ಗೆ ನೀರಿನ ಸಂಪರ್ಕ ಕಡಿತ ಮಾಡಲಾಗಿದೆ. ಈ ಮೊದಲು ಕ್ಯಾಂಟಿನ್‍ನ ಹೆಸರು ಬದಲಾವಣೆ ಮಾಡುವ ಮೂಲಕ ರಾಜಕಾರಣಕ್ಕೆ ಮುಂದಾಗಿದ್ದು ಬಿಜೆಪಿ ಸರ್ಕಾರ ಹಂತ ಹಂತವಾಗಿ ಕ್ಯಾಂಟಿನ್‍ಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ. ಕ್ಯಾಂಟಿನ್ ನಿರ್ವಹಣೆಗೆ ವರ್ಷಕ್ಕೆ 250 ಕೋಟಿ ರೂ. ಹಣ ಬೇಕು.

ಈ ಅನುದಾನ ಬಿಡುಗಡೆ ಮಾಡಿ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡಬೇಕೆಂದು ಅವರು ತಿಳಿಸಿದ್ದಾರೆ. ಹಣ ಬಿಡುಗಡೆಗೆ ಮೀನಾಮೇಷ ಎಣಿಸುತ್ತಿರುವ ಮುಖ್ಯಮಂತ್ರಿಗಳ ನಡೆ ಹಲವು ಅನುಮಾನಗಳನ್ನು ಹುಟ್ಟಿಹಾಕುತ್ತಿದೆ ಎಂದರು.

Facebook Comments