ವಿಧಾನಸಭೆಯಲ್ಲಿ ಸಿದ್ದು-ಬೊಮ್ಮಾಯಿ ಜಟಾಪಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.15- ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ಬರುತ್ತೇವೆ ಎಂದುವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತು ವಿಧಾನಸಭೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು. 2021-22ನೆ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದಾಗ ಕೋತಾ ಬಜೆಟ್ ಮಂಡಿಸಲಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಆಗ ಸಿಎಂ ಯಡಿಯೂರಪ್ಪ ಅವರು ನನ್ನ ಜಾಗದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ನೀವು ಆ ಜಾಗ ಕೊಟ್ಟರೆ ಹೇಳುತ್ತೇವೆ. ಮುಂದಿನ ಚುನಾವಣೆಯಲ್ಲಿ ಜನ ನಮಗೆ ಅಧಿಕಾರ ಕೊಟ್ಟೇ ಕೊಡುತ್ತಾರೆ. ಜನರು ಬದಲಾವಣೆ ಮಾಡುತ್ತಾರೆ. ನಿಮ್ಮ ಕುರ್ಚಿಯಲ್ಲಿ ನಾವು ಕೂರುವ ದಿನ ದೂರವಿಲ್ಲ, ಮರಳಿ ಅಧಿಕಾರಕ್ಕೆ ಬರುತ್ತೇವೆ ಎಂದು ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಮದ್ಯ ಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಬಸವರಾಜ ಬೊಮ್ಮಾಯಿ ಕೋವಿಡ್ ಲಾಕ್‍ಡೌನ್ ಮತ್ತಿತರ ಕಾರಣದಿಂದಾಗಿ ಆದಾಯ ಕಡಿಮೆ ಆಗಿರುವುದನ್ನು ಬಜೆಟ್‍ನಲ್ಲೇ ಪ್ರಸ್ತಾಪ ಮಾಡಲಾಗಿದೆ. ನೀವು ಮಾಡಿದ ಸಾಧನೆ ನೋಡಿ ಜನರು ನಿಮ್ಮನ್ನು ಅಲ್ಲಿ ಕೂರಿಸಿದ್ದಾರೆ. ನಿಮ್ಮ ಕಾಲದಲ್ಲಿ ಕೋವಿಡ್, ಲಾಕ್‍ಡೌನ್ ಏನೂ ಇರಲಿಲ್ಲ. ಆದರೂ ರೆವಿನ್ಯು ಸರ್‍ಪ್ಲಸ್ ಕಡಿಮೆ ಮಾಡಿದ್ದೀರಿ. ಅದರ ಫಲ ಇದು. ನೀವು ಏಕೆ ಅಧಿಕಾರಕ್ಕೆ ಮರಳಿ ಬರುತ್ತೀರಿ ಎಂದು ಪ್ರಶ್ನಿಸಿದರು.

ಈ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ತೆರಿಗೆ ಸಂಗ್ರಹ ಕಟಿಡಿಮೆಯಾಗಿದೆ ಎಂದರು. ಮತ್ತೆ ಮಾತು ಮುಂದುವರೆಸಿದ ಸಿದ್ದರಾಮಯ್ಯ ಅವರು, ಕೋವಿಡ್‍ಗೆ 5,300 ಕೋಟಿ ರೂ. ಖರ್ಚು ಮಾಡಿದ್ದೀರಿ. ನೀವು ಅಧಿಕಾರಕ್ಕೆ ಬಂದಾಗ ಬದ್ಧಚಾ ವೆಚ್ಚ ಶೇ.87. 2021-22ಕ್ಕೆ ಶೇ.102ಕ್ಕೆ ಏರಿಕೆಯಾಗಿದೆ. ಎಲ್ಲದಕ್ಕೂ ಕೋವಿಡ್ ಕಾರಣ ಎಂದು ಹೇಳಲಾಗುವುದಿಲ್ಲ ಎಂದು ತಿರುಗೇಟು ನೀಡಿದರು. ಗೃಹ ಸಚಿವ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ ನಡುವೆ ಆರ್ಥಿಕ ಅಂಕಿ-ಅಂಶಗಳಿಗೆ ಸಂಬಂಧಿಸಿದಂತೆ ಮಾತಿನ ಚಕಮತಿಯೂ ನಡೆಯಿತು.

Facebook Comments