ಸಿದ್ದರಾಮಯ್ಯಗೆ ಜ್ವರ, ಎರಡು ದಿನ ವಿಶ್ರಾಂತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.1- ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜ್ವರದಿಂದ ಬಳಲುತ್ತಿರುವ ಕಾರಣಕ್ಕೆ ಎರಡು ದಿನಗಳ ಕಾಲ ಅವರ ಎಲ್ಲಾ ಕಾರ್ಯಕ್ರಮಗಳು ರದ್ದಾಗಿದ್ದು, ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಈ ನಡುವೆ ಅವರನ್ನು ಕೊರೊನಾ ಸೋಂಕಿನ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪಲಿತಾಂಶ ನೆಗೆಟಿವ್ ಬಂದಿದೆ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.

ಈ ಮೊದಲು ಸಿದ್ದರಾಮಯ್ಯ ಕೊರೊನಾ ಸೋಂಕಿಗೆ ಸಿಲುಕಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಇಬ್ಬರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಬಳಿಕ ಯಡಿಯೂರಪ್ಪ ಎರಡನೆ ಬಾರಿಗೆ ಸೋಂಕಿಗೆ ಸಿಲುಕಿದ್ದರು.

ಹಾಗಾಗಿ ಸಿದ್ದರಾಮಯ್ಯ ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರೆ ಸೋಂಕು ಇಲ್ಲ ಎಂದು ಖಚಿತವಾಗಿದೆ. ಕೋವಿಡ್ ಲಸಿಕೆಯ ಎರಡು ಡೋಸ್ ಗಳನ್ನು ಪಡೆದಿರುವ ಸಿದ್ದರಾಮಯ್ಯ, ಕೊರೊನಾದಿಂದ ರಕ್ಷಣೆ ಪಡೆಸಿದ್ದಾರೆ, ಆದರೆ ಜ್ವರ ಇರುವ ಕಾರಣಕ್ಕೆ ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯುತ್ತಿದ್ದಾರೆ.

ಕೋವಿಡ್ ಎರಡನೆಯ ಅಲೆಯ ನಡುವೆಯೂ ಸಿದ್ದರಾಮಯ್ಯ ಮನೆಯಲ್ಲಿ ಕೂರದೆ ಬಿಡುವಿಲ್ಲದೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ವಿವಿದ ಕಡೆಗಳಲ್ಲಿ ಫುಡ್ ಕಿಟ್, ಹೆಲ್ತ್ ಕಿಟ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಎಷ್ಟೆ ಎಚ್ಚರಿಕೆ ನೀಡಿದರು ಅವರು ಹೋದ ಕಡೆಯಲ್ಲಿ ಜನ ಜಂಗುಳಿ ತುಂಬಿರುತ್ತಿತ್ತು. ಹೀಗಾಗಿ ಇಂದು ಮತ್ತು ನಾಳಿನ ಅವರ ಕಾರ್ಯಕ್ರಮಗಳನ್ನು ರದ್ದು ಪಡಿಸಿದ್ದಾರೆ.

Facebook Comments