ಎಡವಟ್ಟಾಗಿ ‘ನಾನು ವಿರೋಧ ಪಕ್ಷದ ನಾಯಕ’ ಎಂದ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.18-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಶಾಸಕಾಂಗ ಪಕ್ಷದ ನಾಯಕರು ಎನ್ನುವ ಬದಲು ವಿರೋಧ ಪಕ್ಷದ ನಾಯಕ ಎಂದು ಹೇಳಿದ್ದು ಇಡೀ ವಿಧಾನಸಭೆ ಅಚ್ಚರಿಗೊಳ್ಳುವಂತೆ ಮಾಡಿತ್ತು.

ವಿಧಾನಸಭೆಯಲ್ಲಿಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ವಿಶ್ವಾಸಮತಯಾಚನೆ ನಿರ್ಣಯದ ಸಂದರ್ಭದಲ್ಲಿ ಕ್ರಿಯಾಲೋಪವೆತ್ತಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಅವರು, ಮಾತು ತಪ್ಪಿ ಶಾಸಕಾಂಗ ಪಕ್ಷದ ನಾಯಕ ಎನ್ನುವ ಬದಲು ವಿರೋಧ ಪಕ್ಷದ ನಾಯಕ ಎಂದರು.

ಆಗ ಬಿಜೆಪಿ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು. ಆಗ ಮಾತು ಮುಂದುವರೆಸಿದ ಸಿದ್ದರಾಮಯ್ಯ ಅವರು, ತಾವು ಬಾಯಿ ತಪ್ಪಿ ಹೇಳಿರುವುದು, ಅದಕ್ಕಿಷ್ಟು ಖುಷಿ ಪಡಬೇಕಿಲ್ಲ. ಈಗಾಗಲೇ ನಾಲ್ಕು ವರ್ಷ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ ಎಂದರು.

Facebook Comments