ಬಿಜೆಪಿ ಶಾಸಕರಿಗೆ ‘ಗುಡ್ ಲಕ್’ ಹೇಳಿದ ಸಿದ್ದರಾಮಯ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜುಲ.23-ಸಮ್ಮಿಶ್ರ ಸರ್ಕಾರ ಪತನವಾಗುವುದನ್ನೇ ಚಾತಕ ಪಕ್ಷಿಯಂತೆ ಕಾಯುತ್ತಿರುವ ಬಿಜೆಪಿ ಶಾಸಕರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶುಭ ಹಾರೈಸಿದ ಘಟನೆ ಇಂದು ನಡೆಯಿತು.

ಬೆಳಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿದ್ದ ಬಿಜೆಪಿ ಶಾಸಕರಾದ ಎಸ್.ಆರ್.ವಿಶ್ವನಾಥ್ ಹಾಗೂ ಸುನೀಲ್‍ಕುಮಾರ್ ಹಿಂದಿರುಗುತ್ತಿದ್ದ ವೇಳೆ ಎದುರಾದ ಸಿದ್ದರಾಮಯ್ಯ ಇಬ್ಬರಿಗೂ ಹಸ್ತಲಾಘವ ಮಾಡಿ ಶುಭ ಹಾರೈಸಿದರು.

ಈ ದಿಢೀರ್ ಬೆಳವಣಿಗೆ ನಾನಾ ಊಹೋಪೋಹಗಳಿಗೆ ಎಡೆ ಮಾಡಿಕೊಟ್ಟಿತು. ಆಕಸ್ಮಿಕವಾಗಿ ಇಬ್ಬರೂ ಶಾಸಕರು ಎದುರಾದ ವೇಳೆ ಸಿದ್ದರಾಮಯ್ಯ ಸೌಹಾರ್ದಯುತವಾಗಿ ಶುಭ ಹಾರೈಸಿದ್ದಾರೆ.

ಇದಕ್ಕೂ ಪ್ರಸ್ತುತ ರಾಜಕೀಯ ವಿದ್ಯಮಾನಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸಿದ್ದರಾಮಯ್ಯನವರವರ ಆಪ್ತ ಮೂಲಗಳು ಖಚಿತಪಡಿಸಿವೆ.

Facebook Comments

Sri Raghav

Admin