ಈಶುಗೆ ಸಿದ್ದು ಗುದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.18-ಸಚಿವ ಈಶ್ವರಪ್ಪ ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದು, ಇನ್ನು ಮುಂದಾದರೂ ಜವಾಬ್ದಾರಿಯುತ ಸಚಿವರಾಗಿ ಸಂಸದೀಯ ಭಾಷೆಯನ್ನು ಬಳಸುವಂತೆ ಸಲಹೆ ನೀಡಿದ್ದಾರೆ.

ಕೆಟ್ಟದಾಗಿ ಮಾತನಾಡಲು ಎಲ್ಲರಿಗೂ ಬರುತ್ತದೆ. ಗ್ರಾಮೀಣ ಭಾಗದ ಹಿನ್ನೆಲೆಯಿಂದ ಬಂದ ನಮಗೂ ಕೂಡ ಕೆಟ್ಟ ಮಾತು ಬಳಸಲು ಗೊತ್ತು. ಆದರೆ ಸಾರ್ವಜನಿಕ ಜೀವನದಲ್ಲಿದ್ದೇವೆ. ಆದಷ್ಟು ಸಂಸದೀಯ ಭಾಷೆಯನ್ನು ಬಳಸಬೇಕು. ನಮ್ಮನ್ನು ಲಕ್ಷಾಂತರ ಜನ ನೋಡುತ್ತಿರುತ್ತಾರೆ.  ಯಾರು ಏನು ಅಂದುಕೊಳ್ಳುತ್ತಾರೋ ಎಂಬ ಭಯ ಇರಬೇಕು. ಕೆಟ್ಟದಾಗಿ ಮಾತನಾಡುವುದನ್ನೇ ಈಶ್ವರಪ್ಪ ದೊಡ್ಡಸ್ಥಿಕೆ ಎಂದುಕೊಂಡಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Facebook Comments