17 ಶಾಸಕರನ್ನು ಅನರ್ಹಗೊಳಿಸಿದ್ದು ಸೂಕ್ತ ನಿರ್ಧಾರ : ದೊರೆಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.22-ವಿಧಾನಸಭೆಯ ಮಾಜಿ ಅಧ್ಯಕ್ಷ ರಮೇಶ್‍ಕುಮಾರ್ ಬಿಜೆಪಿ ಕಾಲು ಹಿಡಿದ ಶಾಸಕರನ್ನು ಅನರ್ಹಗೊಳಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.

ನಗರದ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ಸಿದ್ದರಾಮಯ್ಯ ಆಡಳಿತದ ಅಂತರಂಗ-ಬಹಿರಂಗ ಗ್ರಂಥ ಲೋಕಾರ್ಪಣೆ ಮಾಡಿ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾತನಾಡಿದ ಅವರು, ಅನರ್ಹ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಬಡವರ ಕಣ್ಣೊರೆಸುವ ಕೆಲಸ ಮಾಡಿದ್ದಾರೆ. ರಾಜಕೀಯದಲ್ಲಿ ಅವರದೇ ಸಾರ್ಥಕ ಜೀವನ. ಇಂದಿನ ಆಡಳಿತಗಾರರು ಹೇಗಿರಬೇಕು ಎಂಬ ಮಾದರಿಯನ್ನು ಹಾಕಿಕೊಟ್ಟಿದ್ದಾರೆ. ಕೆಲವು ಸಣ್ಣಪುಟ್ಟ ಲೋಪದೋಷಗಳಿರಬಹುದು. ಕೆಲವು ಒಳ್ಳೆಯ ಕೆಲಸಗಳು ಕೂಡ ಇವೆ. ದುರಂತ ಎಂದರೆ ಯಾರೇ ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ತೆಗಳುವುದು ಮಾತ್ರ ನಿಲ್ಲುವುದಿಲ್ಲ.ರಾಜಕೀಯಕ್ಕಾಗಿ ಪಕ್ಷಗಳು ಟೀಕೆ ಮಾಡುತ್ತವೆ.

ಆರೋಪ ಮಾಡುವ ಬದಲು ತಪ್ಪಿತಸ್ಥರು ಹಾವಿನಂತಿದ್ದಾರಾ, ಚೇಳಿನಂತಿದ್ದಾರಾ ಎಂಬುದನ್ನು ಗಮನಿಸಬೇಕು ಎಂದರು. ಸಿದ್ದರಾಮಯ್ಯ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗುತ್ತಾರೋ ಇಲ್ಲವೋ ಗೊತ್ತಿಲ್ಲ. ಮುಖ್ಯಮಂತ್ರಿಯಾಗುವುದೇ ಆದರೆ ಒಳ್ಳೆಯ ಕೆಲಸ ಮಾಡಲಿ. ಪಕ್ಷದ ಒಳಗೆ ಜಗಳವಾಡುತ್ತಾ ಕುಳಿತರೆ ಆಗುವುದಿಲ್ಲ ಎಂದರು.

Facebook Comments