ಎಂಟಿಬಿ ಬಳಿ ನಾನು ಯಾವ ಸಾಲವನ್ನೂ ಪಡೆದಿಲ್ಲ : ಸಿದ್ದು ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಹುಣಸೂರು, ನ.20- ಹೊಸಕೋಟೆ ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ಬಳಿ ನಾನು ಯಾವ ಸಾಲವನ್ನೂ ಪಡೆದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ. ಎಂ.ಟಿ.ಬಿ.ನಾಗರಾಜ್ ಅವರು ಹೋದಲ್ಲಿ, ಬಂದಲ್ಲಿ ಸಿದ್ದರಾಮಯ್ಯ ಅವರು ನನ್ನಿಂದ ಹಣ ಪಡೆದಿದ್ದಾರೆ, ವಾಪಸ್ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರಿಂದ ಯಾವುದೇ ದುಡ್ಡಾಗಲಿ, ಸಾಲವಾಗಲಿ ಪಡೆದಿಲ್ಲ ಎಂದರು. ಸಾಲ ಪಡೆಯುವುದಕ್ಕೂ, ಚುನಾವಣೆಗೂ ಏನು ಸಂಬಂಧ ಎಂದು ಸಿದ್ದರಾಮಯ್ಯ ಮರುಪ್ರಶ್ನೆ ಹಾಕಿದರು.

Facebook Comments