ಬಿಜೆಪಿಯವರು ಹಣ, ಅಧಿಕಾರ ದುರುಪಯೋಗ ಮಾಡಿ ನಡೆಸುತ್ತಿದ್ದಾರೆ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ನ.26- ಬಿಜೆಪಿಯವರು ಹಣ, ಅಧಿಕಾರ ದುರುಪಯೋಗ ಮಾಡಿಕೊಂಡು ಚುನಾವಣೆ ನಡೆಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು. ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕೆಂದರೆ ಅದಕ್ಕೆ ಜನರ ಆಶೀರ್ವಾದ ಬೇಕು.

ಆದರೆ ಬಿಜೆಪಿಯವರು ಈ ಮಾರ್ಗ ಅನುಸರಿಸದೇ ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಇದು ಸರಿಯಲ್ಲ. ಯಾರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಅವರು ಈ ಕೆಲಸ ಮಾಡುತ್ತಾರೆ ಎಂದರು.

ಮಹಾರಾಷ್ಟ್ರದಲ್ಲಿ ಬಿಜೆಪಿಯವರು ಕಳ್ಳರು, ದರೋಡೆಕೋರರ ತರ ರಾತ್ರೋರಾತ್ರಿ ರಾಷ್ಟ್ರಪತಿ ಆಳ್ವಿಕೆಯನ್ನು ರಾಜ್ಯಪಾಲರನ್ನು ಬಳಸಿಕೊಂಡು ಅಧಿಕಾರ ಹಿಡಿದಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು. ಇನ್ನೂ ಬಿಜೆಪಿಯವರು ಮಾತು ಎತ್ತಿದ್ದರೆ ಸಾಕು ಆಪರೇಷನ್ ಕಮಲ ಮಾಡುತ್ತೇವೆ ಎಂದು ಹೇಳುತ್ತಾರೆ. ಅವರು ಹಣ, ಅಕಾರ ದುರುಪಯೋಗಪಡಿಸಿಕೊಂಡು ಈ ರೀತಿ ಮಾಡುತ್ತಿದ್ದಾರೆ.

ಇದರಿಂದಾಗಿ ಪ್ರಜಾಪ್ರಭುತ್ವ ಉಳಿಯೋದು ಕಷ್ಟ. ಅಲ್ಲದೇ ಕಾಂಗ್ರೆಸ್ ಶಾಸಕರು ಯಾರು ಬಿಜೆಪಿಗೆ ಹೋಗುವ ಪ್ರಸಂಗವೇ ಇಲ್ಲ. ಕಾರಣ ಹೋಗುವವರು ಈಗಾಗಲೇ ಹೋಗಿದ್ದಾರೆ. ಜೊತೆಗೆ ಕಾಂಗ್ರೆಸ್ ಜೊತೆಗೆ ಬಿಜೆಪಿಯ ಹಲವಾರು ಶಾಸಕರು ಸಂಪರ್ಕದಲ್ಲಿದ್ದು ಯಾರು ಕೂಡಾ ಅವರನ್ನು ಕರೆಯೋದಿಲ್ಲ. ಈ ರೀತಿಯ ಕೆಲಸ ಕಾಂಗ್ರೆಸ್ ಮಾಡಲ್ಲಾ ಎಂದು ಸಿದ್ದರಾಮಯ್ಯ ತಿಳಿಸಿದರು.

Facebook Comments