2 ಗಂಟೆಗೂ ಹೆಚ್ಚು ಜೊತೆಗಿದ್ದರೂ ಪರಸ್ಪರ ಮುಖ ನೋಡದ ಸಿದ್ದು – ವಿಶ್ವನಾಥ್

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಕೆ.ಆರ್.ನಗರ, ಸೆ.25- ಕಳೆದ 2 ವರ್ಷಗಳಿಂದ ರಾಜಕೀಯವಾಗಿ ಪರಸ್ಪರ ದೂರವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಒಂದೇ ವೇದಿಕೆಯಲ್ಲಿ 2 ಗಂಟೆಗೂ ಹೆಚ್ಚು ಒತ್ತು ಕೂತಿದ್ದರೂ ಪರಸ್ಪರ ಮಾತನಾಡದೆ ಮುಖವನ್ನು ನೋಡದ ಘಟನೆ ನಡೆಯಿತು.  ಕೆ.ಆರ್.ನಗರದಲ್ಲಿ ಸಂಗೊಳ್ಳಿ ರಾಯಣ್ಣ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಬ್ಬರು ನಾಯಕರು ಬಹುದಿನಗಳ ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರಿಂದ ಇಬ್ಬರು ಮಾತನಾಡಬಹುದು ಎಂದು ಜನತೆ ನಿರೀಕ್ಷಿಸಿದ್ದರು ಆದರೆ ಅದು ಸುಳ್ಳಾಯಿತು.

ಮಾಜಿ ಮುಖ್ಯಮಂತ್ರಿಗಳು ಸಭೆಗೆ ಆಗಮಿಸುವ ಮುನ್ನ ಎಚ್.ವಿಶ್ವನಾಥ್ ಮಾತನಾಡಿ, ವೇದಿಕೆಯಲ್ಲಿ ಆಸಿನರಾಗಿದ್ದರು. ನಂತರ ಬಂದ ಸಿದ್ದರಾಮಯ್ಯನವರು ಮಾತು ಆರಂಭಿಸಿದ್ದಾಗ ವೇದಿಕೆಯಲ್ಲಿ ಆಸನರಾಗಿದ್ದ ಯಾರ ಹೆಸರನ್ನು ಹೇಳದೆ ನೇರವಾಗಿ ಭಾಷಣ ಆರಂಭಿಸಿದರು. ಆನಂತರವು ಇಬ್ಬರು ಮಾತನಾಡಲಿಲ್ಲ.

# ಅಪಪ್ರಚಾರದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲಿಲ್ಲ :ಸಿದ್ದು 
ಕೆ.ಆರ್.ನಗರ, ಸೆ.25- ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ವರ್ಗದ ಬಡವರಿಗಾಗಿ ಮಾಡಿದ್ದ ಜನಪರ ಕೆಲಸಗಳು ವಿಪಕ್ಷಗಳ ಅಪಪ್ರಚಾರದಿಂದ ಹಿಂದೆ ಹೋದುದ್ದರಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಆಗಲಿಲ್ಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಪಟ್ಟಣದ ಕಾಗಿನೆಲೆ ಕನಕಗುರು ಪೀಠದ ಆವರಣದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ನಿರ್ಮಾಣ ಮಾಡಿರುವ ಸಂಗೊಳ್ಳಿರಾಯಣ್ಣ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷ ಸೋತಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ, ಜನರಿಗೆ ಉತ್ತಮ ಕಾರ್ಯಕ್ರಮ ನೀಡಿದ್ದೇನೆ ಎಂಬ ತೃಪ್ತಿ ಇದೆ ಎಂದರು.

ಡಿ.ದೇವರಾಜು ಅರಸು ನಂತರ 5 ವರ್ಷಗಳ ಕಾಲ ಸಂಪೂರ್ಣವಾಗಿ ಅಧಿಕಾರ ನಡೆಸಿದ ಮತ್ತು ಜನಪರವಾದ ಕೆಲಸ ಮಾಡಿದ ತೃಪ್ತಿ ಇದ್ದು , ಅಧಿಕಾರ ಶಾಶ್ವತವಲ್ಲ ಕಾಲ ಚಕ್ರ ಉರುಳಿದಂತೆ, ಮೇಲಿದ್ದವರು ಕೆಳಗೆ ಇಳಿಯಲೇ ಬೇಕು ಕೆಳಗಿದ್ದವರು ಮೇಲೇರಬೇಕು ಎಂದು ಮಾರ್ಮಿಕವಾಗಿ ನುಡಿದರು.
ರಾಜ್ಯದ ಹಿಂದುಳಿದ ವರ್ಗಗಳ 11 ಮಹಾನೀಯರ ಜಯಂತಿಗಳನ್ನು ಆಚರಣೆ ಮಾಡುವಂತೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಇದರ ಜತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಅನುಕೂಲಕ್ಕೆ ಹೊಸ ಕಾಯ್ದೆ ಜಾರಿಗೆ ತಂದು 5 ವರ್ಷಗಳ ಅವಧಿಯಲ್ಲಿ 89 ಸಾವಿರ ಕೋಟಿ ರೂ.ಗಳನ್ನು ಆ ಸಮುದಾಯದ ಅಭಿವೃದ್ದಿಗಾಗಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್ ವಿರುದ್ದ ಕಡಿಮೆ ಅಂತರದಿಂದ ಸೋಲು ಕಂಡಿರುವ ಜಿ.ಪಂ. ವಿಪಕ್ಷ ನಾಯಕ ಡಿ.ರವಿಶಂಕರ್ ಅವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸಲಿದ್ದು , ಆತನ ಮುಂದಿನ ರಾಜಕೀಯ ಬೆಳವಣಿಗೆಗೆ ತಾಲೂಕಿನ ಜನತೆ ಬೆಂಬಲ ನೀಡಬೇಕು ಎಂದು ಸಿದ್ದರಾಮಯ್ಯ ಕೋರಿದರು.

ಗಾವಡಗೆರೆ ಗುರುಲಿಂಗ ಜಂಗಮ ದೇವರ ಮಠದ ನಟರಾಜ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಶಿವಾನಂದಪುರಿಸ್ವಾಮೀಜಿ, ಕಾಗಿನೆಲೆ ತಿಂಥಣಿ ಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಿ ಆರ್ಶಿವಚನ ನೀಡಿದರು.  ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಸಚಿವರಾದ ಆರ್.ಶಂಕರ್, ಪುಟ್ಟರಂಗಶೆಟ್ಟಿ, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ಸಿ.ಎಚ್.ವಿಜಯಶಂಕರ್, ಶಾಸಕ ಅನಿಲ್‍ಚಿಕ್ಕಮಾಧು, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಜಿ.ಪಂ. ವಿಪಕ್ಷ ನಾಯಕ ಡಿ.ರವಿಶಂಕರ್, ಸದಸ್ಯರಾದ ಅಚ್ಚುತಾನಂದ, ಅಮಿತ್.ವಿ.ದೇವರಹಟ್ಟಿ, ನಾಗರತ್ನ, ತಾ.ಪಂ. ಅಧ್ಯಕ್ಷ ಹೆಚ್.ಟಿ.ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ಯೋಗೀಶ್, ಸದಸ್ಯರಾದ ಜಿ.ಎಸ್.ಮಂಜುನಾಥ್, ಮಹದೇವ್ ಸೇರಿದಂತೆ ಸಮಾಜದ ಮುಖಂಡರು ಮತ್ತು ಚುನಾಯಿತ ಸದಸ್ಯರು ಹಾಜರಿದ್ದರು.

Facebook Comments

Sri Raghav

Admin