ಕಾಂಗ್ರೆಸ್ ಅಧಿಕಾರಕ್ಕಾಗಿ ಹುಟ್ಟಿಕೊಂಡ ಪಕ್ಷವಲ್ಲ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಕಾಂಗ್ರೆಸ್ ಪಕ್ಷ ಯಾವತ್ತು ಅಧಿಕಾರಕ್ಕಾಗಿ ಹುಟ್ಟಿಕೊಂಡ ಪಕ್ಷವಲ್ಲ. ಪಕ್ಷ ಎಂದರೆ ಇದೊಂದು ಚಳುವಳಿ ಹಾಗೂ ಆಂದೋಲನ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷರು ಕಾರ್ಯಾಧ್ಯಕ್ಷರು ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಪಕ್ಷ ಇದು. ಇಂದು ಪಕ್ಷಕ್ಕೆ ಒಂದಿಷ್ಟು ಹಿನ್ನಡೆ ಆಗಿರಬಹುದು ಆದರೆ ಹೊತ್ತಿ ವ್ಯಾಪಕ ಮಟ್ಟದಲ್ಲಿ ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಎಂದರೆ ಇದೊಂದೇ. ಪಕ್ಷಕ್ಕೆ ಒಂದಿಷ್ಟು ಹಿನ್ನಡೆಯಾಗಿದೆ ಎಂದರೆ ಅದು ವೈಫಲ್ಯ ಎಂದು ಹೇಳಲಾಗದು.

ಶೇಕಡಾವಾರು ಮತ ಗಳಿಕೆಯಲ್ಲಿ ನಾವು ಸಾಕಷ್ಟು ಉತ್ತಮ ಸ್ಥಿತಿಯಲ್ಲಿದ್ದೇವೆ. ದಿನದಿಂದ ದಿನಕ್ಕೆ ನಮಗೆ ಜನರ ಬೆಂಬಲ ಹೆಚ್ಚಾಗುತ್ತಿದೆ. ಆದರೆ ಶಾಸಕರ ಹಣದ ವಿಚಾರದಲ್ಲಿ ನಮಗೆ ಕೊರತೆ ಎದುರಾಗಿತ್ತು. ನಾವು ಸಾಕಷ್ಟು ಉತ್ತಮ ಕೆಲಸವನ್ನು ಮಾಡಿದ್ದೆವು. ಮಂತ್ರಿಮಂಡಲದ ಸದಸ್ಯರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು.

ಶೇಕಡ ನೂರರಷ್ಟು ಭರವಸೆಯನ್ನು ಈಡೇರಿಸಿದೆ ಸರ್ಕಾರ ನಮ್ಮದಾಗಿತ್ತು. ಆದರೂ ಅಪಪ್ರಚಾರದಿಂದ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ತಂತ್ರಗಾರಿಕೆಯಿಂದ ನಾವು ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ನಾವು ಅಂದು ಮಾಡಿರುವ ಕಾರ್ಯಕ್ರಮಗಳನ್ನು ಜನ ಇಂದು ನೆನೆಯುತ್ತಿದ್ದಾರೆ.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಆಹಾರ ಭದ್ರತಾ ಕಾಯ್ದೆ ತಂದರು. ಉದ್ಯೋಗ ಕ್ರಾಂತಿ ಮಾಡಿದ್ದರು. ದೂರದೃಷ್ಟಿ ಇಟ್ಟುಕೊಂಡು ಇಂತಹ ಕಾರ್ಯಕ್ರಮ ತಂದಿದ್ದರಿಂದ ಇಂದು ಕೋವಿಡ್ ಆತಂಕದ ನಡುವೆಯೂ ಜನ ಸಮರ್ಥವಾಗಿ ಬದುಕಲು ಸಾಧ್ಯವಾಗಿದೆ ಎಂದರು.

ಇದೊಂದು ವಿನೂತನ ಹಾಗೂ ವಿಶಿಷ್ಟ ಕಾರ್ಯಕ್ರಮ. ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು, 20 ಲಕ್ಷ ಕಾರ್ಯಕರ್ತರು ಈ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ. ಇಡೀ ರಾಜ್ಯಕ್ಕೆ ಒಂದು ಹೊಸ ಸಂದೇಶವನ್ನು ರವಾನೆ ಮಾಡಲಾಗಿದೆ. ಶಿವಕುಮಾರ ಅಧ್ಯಕ್ಷರಾಗಿ ನೇಮಕವಾಗಿ ನಾಲ್ಕು ತಿಂಗಳು ಕಳೆದಿದೆ. ಕೊರೊನಾ ಇದ್ದ ಕಾರಣ ಕಾರ್ಯಕ್ರಮ ನಡೆಯುವುದು ವಿಳಂಬವಾಗಿದೆ.

ಸಾವಿರಾರು ಜನರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಲು ಸಾಧ್ಯವಾಗಿಲ್ಲ. ಮೂರು ಕಾರ್ಯಧ್ಯಕ್ಷರ ಜೊತೆ ಡಿಕೆ ಶಿವಕುಮಾರ್ ಅಧ್ಯಕ್ಷರಾಗಿ ಇಂದು ಪದಗ್ರಹಣ ಮಾಡಿದ್ದಾರೆ. ಇದನ್ನು ಪ್ರತಿಜ್ಞಾ ದಿನವಾಗಿ ನಾವೆಲ್ಲ ಆಚರಣೆ ಮಾಡಿದ್ದೇವೆ. ಮತ್ತೊಮ್ಮೆ ಸಂವಿಧಾನದ ಪೀಠಿಕೆ ಯನ್ನು ಪುನರುಚ್ಛಾರ ಮಾಡಿದ್ದೇವೆ.

ಪಕ್ಷದ ತತ್ವ ಸಿದ್ಧಾಂತವನ್ನು ಪುನರುಚ್ಛಾರ ಮಾಡಿದ್ದೇವೆ. ಕಾರ್ಯಕರ್ತರಲ್ಲಿ ಹೊಸ ಹುರುಪನ್ನು ಮೂಡಿಸಲು ಪ್ರಯತ್ನ ನಡೆದಿದೆ. ಡಿಕೆಶಿ ನನ್ನ ಮಂತ್ರಿಮಂಡಲದಲ್ಲಿ ಕಾರ್ಯನಿರ್ವಹಿಸಿದವರು. ಕ್ರಿಯಾಶೀಲ ಹಾಗೂ ದಣಿವರಿಯದ ವ್ಯಕ್ತಿ. ಶಿವಕುಮಾರ್ ನೇತೃತ್ವದಲ್ಲಿ ಅವರ ಜೊತೆಗೂಡಿ ಕಾರ್ಯ ಅಧ್ಯಕ್ಷರು ಹಾಗೂ ಎಲ್ಲಾ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯವನ್ನು ಹಾಗೂ ಹೊಸರೂಪವನ್ನು ನೀಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.

ಕೋವಿಡ್ ಸಂಪೂರ್ಣ ನಿವಾರಣೆ ಮಾಡಲು ಸಾಧ್ಯವಿಲ್ಲ. ಕಾರಣ ಇದಕ್ಕೆ ಔಷಧಿ ಇಲ್ಲ. ಆದರೆ ಒಂದಿಷ್ಟು ನಿಯಂತ್ರಣ ಮಾಡಬಹುದಿತ್ತು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂಪೂರ್ಣ ವಿಫಲರಾಗಿದ್ದಾರೆ. ಅಗತ್ಯ ಸಿದ್ಧತೆ ಮಾಡಿಕೊಳ್ಳದೆ ಲಾಕ್ಡೌನ್ ಘೋಷಿಸಿದ್ದರಿಂದ ಸಮಸ್ಯೆಗಳು ಸೃಷ್ಟಿಯಾದವು.

ಬಡವರು ಹಾಗೂ ಕಾರ್ಮಿಕರ ಕೈಗೆ ಹಣವನ್ನು ನೀಡದ್ದರಿಂದ ಲಕ್ಷಾಂತರ ಮಂದಿ ಕಷ್ಟಕ್ಕೆ ಸಿಲುಕಬೇಕಾಗಿ ಬಂತು. ನರೇಂದ್ರ ಮೋದಿ ಅಗತ್ಯವಿರುವವರಿಗೆ ಸಕಾಲಕ್ಕೆ ಹಣ ಬಿಡುಗಡೆ ಮಾಡಲಿಲ್ಲ, ಆಮೇಲೆ ಸುಳ್ಳು ಹೇಳುವ ಕಾರ್ಯ ಮಾಡಿದರು. ನರೇಂದ್ರ ಮೋದಿ ಅಂತಹ ಹಿಪೊಕ್ರೆಟಿಕ್ ಪಾಲಿಟಿಕ್ಸ್ ಮಾಡುವ ವ್ಯಕ್ತಿ ಇನ್ನೊಬ್ಬರಿಲ್ಲ. ಸುಳ್ಳು ಹೇಳುವುದು ಸುಳ್ಳು ಭರವಸೆ ನೀಡುವ ಯಾವ ಪ್ರಧಾನಿಯನ್ನು ದೇಶ ಇದುವರೆಗೂ ಕಂಡಿಲ್ಲ.

ಅವರ ವೈಫಲ್ಯಗಳ ಪಟ್ಟಿಯನ್ನೇ ಬೇಕಾದರೂ ಮಾಡಬಹುದು. 20 ಲಕ್ಷ ಕೋಟಿಯಲ್ಲಿ 1.7 ಲಕ್ಷ ಕೋಟಿ ಕೋಟಿ ಮಾತ್ರ ನಗದು ಹರಿವು ಒಳಗೊಂಡಿದೆ. ದೇಶದ ಜಿಡಿಪಿಯ ಶೇ.1 ರಷ್ಟು ಮೊತ್ತವನ್ನು ಕೂಡ ಪರಿಹಾರವಾಗಿ ನೀಡಿಲ್ಲ. ಅನೇಕ ರಾಷ್ಟ್ರಗಳು ಶೇಕಡಾ 20ರಿಂದ 30ರಷ್ಟು ಮೊತ್ತವನ್ನು ಪರಿಹಾರದ ರೂಪವಾಗಿ ನೀಡಿದ್ದಾರೆ. ಆದರೆ ಇದರಲ್ಲಿ ಕೂಡ ರಾಜಕೀಯ ಮಾಡುವ ಕಾರ್ಯವನ್ನು ಮೋದಿ ಮಾಡಿದ್ದಾರೆ. ತಬ್ಲಿಗಿ ಗಳಿಂದ ಕೊರೊನಾ ಹಬ್ಬಿದೆ ಎನ್ನುತ್ತಾರೆ.

ಆದರೆ ಈಗ ಯಾವ ತಬ್ಲಿಗೆ ಗಳಿಂದ ಹರಡುತ್ತಿದೆ. ಎಲ್ಲಾ ಕಡೆ ಕೋಮುವಾದವನ್ನು ಬಿತ್ತುವುದೇ ಇವರ ಕಾರ್ಯವಾಗಿದೆ. ಇವರ ಕುತಂತ್ರವನ್ನು ಬಯಲು ಮಾಡುವುದು ಹಾಗೂ ಜನರ ಮುಂದೆ ಸತ್ಯವನ್ನು ಹೇಳುವುದು ಕಾಂಗ್ರೆಸ್ ಕಾರ್ಯವಾಗಬೇಕಿದೆ ಎಂದು ಸಲಹೆ ಇತ್ತರು.

ದೇಶದ ಆರ್ಥಿಕ ಸ್ಥಿತಿ ಇಷ್ಟೊಂದು ತಲ ಮಟ್ಟಕ್ಕೆ ಯಾವತ್ತೂ ಹೋಗಿರಲಿಲ್ಲ. ಇಂಧನ ಬೆಲೆ ಏರಿಕೆ ಮಾಡಲಾಗಿದೆ. ಜನ ಈ ಬೆಲೆ ಏರಿಕೆಯನ್ನು ಹೇಗೆ ಸಹಿಸಿಕೊಂಡಿದ್ದಾರೆ ಎಂದು ಅಚ್ಚರಿಯಾಗುತ್ತದೆ. ಹಿಂದೆಲ್ಲ ಉಗ್ರ ಪ್ರತಿಭಟನೆ ಮಾಡುತ್ತಿದ್ದ ಜನ ಮೌನವಾಗಿದ್ದಾರೆ. ಇಂದು ದೇಶ ಉಳಿಸಲು ಕಾಂಗ್ರೆಸ್ ಉಳಿಸಲು ಹೋರಾಟ ಮಾಡಬೇಕಾಗಿದೆ. ಈ ಪಕ್ಷ ಉಳಿಯುತ್ತದೆ. ಇದಕ್ಕಿಂತ ಮೊದಲು ಇದರ ತತ್ವ ಸಿದ್ಧಾಂತವನ್ನು ಉಳಿಸಿಕೊಳ್ಳುವ ಪ್ರಯತ್ನ ನಾವೆಲ್ಲ ಸೇರಿ ಮಾಡಬೇಕಾಗಿದೆ.

ಕಾರ್ಯಕರ್ತರು ನಾಯಕರು ಒಗ್ಗಟ್ಟಾಗಿ ಈ ಕಾರ್ಯ ಮಾಡಬೇಕಾಗಿದೆ. ಸುಳ್ಳು ಹೇಳುವ ಹಾಗೂ ಆರೆಸ್ಸೆಸ್ ಕಾರ್ಯ ಕ್ರಮಗಳನ್ನು ಜಾರಿಗೆ ತರುವ ಹಾಗೂ ಜನರಿಗೆ ದ್ರೋಹ ಮಾಡುವ ಪ್ರಧಾನಿ ಈ ದೇಶದಲ್ಲಿ ಇಂದು ಇದ್ದಾರೆ. ಎಲ್ಲಿಯವರೆಗೆ ಬಿಜೆಪಿ ಅಧಿಕಾರದಲ್ಲಿ ಇರುತ್ತದೆ ಹಿಂದೆ ಕುಳಿತು ಆರೆಸ್ಸೆಸ್ ಎಲ್ಲಿಯವರೆಗೆ ಚಾಲನೆ ಮಾಡುತ್ತದೆ ಅಲ್ಲಿಯವರೆಗೆ ಯಾರಿಗೂ ನ್ಯಾಯ ಸಿಗಲು ಸಾಧ್ಯವಿಲ್ಲ.

ಯಾಕೆಂದರೆ ಇವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಹೀಗಾಗಿ ಜನರ ಬಗ್ಗೆ ಕಾಳಜಿ ಇಲ್ಲ. ಜನರ ಬಗ್ಗೆ ಬದ್ಧತೆ ಇಲ್ಲದ ಪಕ್ಷ ಬಿಜೆಪಿಯನ್ನು ಕಿತ್ತೊಗೆಯಬೇಕು ಹಾಗೂ ಕಾಂಗ್ರೆಸ್ಸನ್ನು ಬಲಗೊಳಿಸುವ ಕಾರ್ಯ ಆಗಬೇಕಿದೆ. ಒಂದು ಧರ್ಮವನ್ನು ಇನ್ನೊಂದು ಧರ್ಮದ ಮೇಲೆ ಎತ್ತಿ ಕಟ್ಟುವ ಮೂಲಕ ದೇಶ ಒಡೆಯುವ ಕಾರ್ಯವನ್ನು ಮನಸ್ಸು ಒಡೆಯುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ.

ಜನರ ಮಧ್ಯ ಭಾವನಾತ್ಮಕ ವಿಚಾರ ಬಿತ್ತುವ ಕಾರ್ಯ ಬಿಟ್ಟು ಬಿಜೆಪಿ ಬೇರೆ ಏನನ್ನೂ ಮಾಡಿಲ್ಲ. ಕೋಮುವಾದ ವಿಚಾರವನ್ನು ಬಿಟ್ಟರೆ ಬೇರೆ ಯಾವ ಕಾರ್ಯವನ್ನು ಮಾಡಿಲ್ಲ. ಜನರ ಸಮಸ್ಯೆ ಬಗೆಹರಿಸುವ ಯಾವ ಕಾರ್ಯವನ್ನು ಬಿಜೆಪಿ ಮಾಡಿಲ್ಲ. ರಾಜ್ಯದಲ್ಲಿ ಕೂಡ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದೆ ಎಂದು ಲೇವಡಿ ಮಾಡಿದರು.

ಬಿಜೆಪಿಯಿಂದ ಸಾಮರಸ್ಯತೆ, ಐಕ್ಯತೆ ಸಾಧ್ಯವಿಲ್ಲ.‌ಮೋದಿ‌ಎಲ್ಲಾ ಪ್ರಧಾನಿಗಳಿಗಿಂತ ಹೆಚ್ಚು ದೇಶ ಸುತ್ತಿದರು. ನೆರೆಯ ಯಾವ ದೇಶವಾದರು ಭಾರತದ ಜೋತೆ ಇದೆಯಾ. ಗಡಿ ವಿಷಯದಲ್ಲಿ ಸುಳ್ಳು ಹೇಳುವ ಪ್ರಧಾನಿ ಒಂದು ಕ್ಷಣ ಅಧಿಕಾರದಲ್ಲಿ ಮುಂದುವರೆಲು ಸಾಧ್ಯ ಇಲ್ಲ.

ಕೊರೊನಾ ರೋಗವಸಮುದಾಯಕ್ಕೆ ಹಬ್ಬಿದೆ. ನವೆಂಬರ್ ವರೆಗೂ ಹೆಚ್ಚಾಗುತ್ತಲೆ ಇರುತ್ತದೆ. ಎಲ್ಲಾ ಇಲಾಖೆಯಲ್ಲೂ ಭ್ರಷ್ಠಚಾರ ನಡೆಯುತ್ತಿದೆ. ಅನುದಾನ ಪಡೆಯಲು ಶಾಸಕರು ಲಂಚ ಕೊಡಬೇಕಿದೆ. ಹಿಂದೆಂದು ಈ ರೀತಿ ಆಗಿರಲಿಲ್ಲ. ಬಿಜೆಪಿ ಮಾಜಿ‌ ಶಾಸಕರೊಬ್ಬರು ತಾವು ಶೇ.5ರಷ್ಟು ಲಂಚ ಕೊಟ್ಟು ಅನುದಾನ ತಂದಿದ್ದಾಗಿ ನನ್ನ ಬಳಿ ಹೇಳಿದರು ಎಂದು ಹೇಳಿದರು.

ದೇಶಕ್ಕೆ ಬಿಜೆಪಿ ಕೊಡುಗೆ ಏನು. ಗಾಂಧಿ‌ಕೊಂದ ಪಕ್ಷದವರು. ಗಾಂಧಿ‌ಕೊಂದ ಆರೋಪಿಯಲ್ಲಿ ಒಬ್ಬರಾಗಿರುವ ಸಾವರ್ಕರ್ ಹೆಸರನ್ನು ಬೆಂಗಳೂರಿನ ರಸ್ತೆ ಇಡಲು ಹೊರಡಿದ್ದಾರೆ.ಕೊರೊನಾ ಬಂದ ಮೇಲೆ ಪ್ರಧಾನಿ‌ಮನೆಯಿಂದ ಹೊರಗೆ ಬಂದಿಲ್ಲ‌.‌ಎಷ್ಟು ಜೀವ ಭಯ ಇದೆ ಇವರಿಗೆ. ಇಂತಹವರಿಂದ ತ್ಯಾಗ ನಿರೀಕ್ಷೆ ಸಾಧ್ಯ ಇಲ್ಲ.

ಒಂದು ವರ್ಷಕ್ಕೆ ಚುನಾವಣೆ ಬರಲ್ಲ. ಕಳ್ಳರು ಅಷ್ಟು ಬೇಗ ಬಿಟ್ಟುಕೊಡಲ್ಲ. ನಮಗಿನ್ನು ಸಮಯ ಇದೆ.ಬೂತ್ ಮಟ್ಟದಿಂದ ಕೆಡರ್ ಬೇಸ್ ನಾಯಕತ್ವ ಕಟ್ಟೋಣ. ನಾವೇಲ್ಲಾ ನಿಮ್ಮ ಜೊತೆಗಿದ್ದೇವೆ.ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತೆ ಮೋದಿ ದೇಶನಾ ಇನ್ನೂ‌ ಹಾಳು ಮಾಡುತ್ತಾರೆ.

Facebook Comments

Sri Raghav

Admin