ಸಿನಿಮಾ ಸ್ಟೈಲಲ್ಲಿ ಡೈಲಾಗ್ ಹೊಡೆದ ಸಿದ್ದು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.6- ಆನೆ ನಡೆದಿದ್ದೇ ದಾರಿ ಎಂಬ ಡೈಲಾಗ್ ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಗಮನ ಸೆಳೆದರು. ಇಂದು ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ದುನಿಯಾವಿಜಿ ಅಭಿನಯ ಹಾಗೂ ನಿರ್ದೇಶನದ ಸಲಗ ಚಿತ್ರದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ಸಿದ್ದರಾಮಯ್ಯ, ಆನೆ ನಡೆದಿದ್ದೆ ದಾರಿ, ಒಂಟಿ ಸಲಗ ಅಪಾಯಕಾರಿ. ಆದರೆ ಈ ಸಲಗ ಪರೋಪಕಾರಿಯಾಗಿರಲಿ ಎಂದರು.

ವಿಜಿಯ ಎರಡು ಸಿನಿಮಾವನ್ನು ನಾನು ನೋಡಿದ್ದೇನೆ. ಜನರಿಗೆ ಸಂದೇಶ ಹಾಗೂ ಮನರಂಜನೆ ನೀಡುವಂತಹ ಸಿನಿಮಾಗಳು ಕೊಡಲಿ ಎಂದು ಚಿತ್ರತಂಡಕ್ಕೆ ಶುಭಕೋರಿದರು. ನಾನು ಚಿಕ್ಕದಿನಿಂದಲು ಸಿನಿಮಾಗಳನ್ನು ನೋಡುತ್ತ ಬಂದಿದ್ದೇನೆ. ಆಗ ಸಂದೇಶ ಸಾರುವ ಸಿನಿಮಾಗಳು ಬರುತ್ತಿತ್ತು.

ಆದರೆ ಈಗ ಅಂತಹ ಮೌಲ್ಯಯುತ ಚಿತ್ರಗಳು ಈಗ ಕಣ್ಮರೆಯಾಗುತ್ತಿವೆ. ಈಗಿನ ಯುವನಿರ್ಮಾಪಕ, ನಿರ್ದೇಶಕರು ಸಮಾಜಕ್ಕೆ ಸಂದೇಶ ಸಾರುವ ಚಿತ್ರಗಳನ್ನು ನಿರ್ಮಿಸುವಂತಾಗಲಿ ಎಂದು ಕಿವಿ ಮಾತು ಹೇಳಿದರು.

ಸಿನಿಮಾರಂಗಕ್ಕೂ ಮಾಜಿ ಸಿಎಂ ಸಿದ್ದರಾಮಯ್ಯಗೂ ನಿಕಟ ನಂಟಿದೆ. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಕನ್ನಡ ಚಿತ್ರರಂಗಕ್ಕೂ ಹಲವು ಕೊಡುಗೆಗಳನ್ನು ನೀಡಿದ್ದು ಅಲ್ಲದೆ ಕನ್ನಡ ನಾಡಿನ ಸಿನಿಮಾಗಳಿಗೆ ಏಳ್ಗಿಗೆ ಶ್ರಮಿಸುತ್ತಾ ಬಂದಿದ್ದಾರೆ.

ಈ ಸಲಗ ಚಿತ್ರವನ್ನು ಟಗರು ಚಿತ್ರ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿದ್ದು, ಚರಣ್‍ರಾಜ್ ಸಂಗೀತವನ್ನು ನೀಡಲಿದ್ದಾರೆ.  ದುನಿಯಾವಿಜಿ ಕಥೆ, ಚಿತ್ರಕಥೆ ಬರೆದು, ನಿರ್ದೇಶನ ಮಾಡುವುದರ ಜೊತೆಗೆ ಅಭಿನಯಿಸಲು ಮುಂದಾಗಿರುವುದು ವಿಶೇಷ.

ಇಂದು ಬೆಳ್ಳಿಗೆ ನಡೆದ ಮುಹೂರ್ತ ಸಮಾರಂಭಕ್ಕೆ ಕಿಚ್ಚ ಸುದೀಪ್ ಆಗಮಿಸಿ ಚಿತ್ರಕ್ಕೆ ಚಾಲನೆ ನೀಡಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin