ಬಿಜೆಪಿಯ ಹೊಣೆಗೇಡಿತನದಿಂದ ರಾಜ್ಯಕ್ಕೆ ಆದಾಯ ನಷ್ಟ : ಸಿದ್ದರಾಮಯ್ಯ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ, ಅ.13- ಬಿಜೆಪಿಯ ಸ್ಥಳೀಯ ನಾಯಕರ ಗುಲಾಮಗಿರಿ ಮತ್ತು ಹೊಣೆಗೇಡಿತನದಿಂದ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣಕಾಸಿನಲ್ಲಿ ಭಾರೀ ಅನ್ಯಾಯವಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಎಸ್‍ಟಿ ಜಾರಿಗೆ ಬಂದಾಗ ಒಪ್ಪಂದವಾದ ಪ್ರಕಾರ ತೆರಿಗೆ ವಸೂಲಿಯಲ್ಲಾಗುವ ನಷ್ಟವನ್ನು ಭರಿಸಲು ಕೇಂದ್ರ ಸರ್ಕಾರ ಪರಿಹಾರ ರೂಪದಲ್ಲಿ ಹಣ ಪಾವತಿಸಬೇಕಿದೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರಕ್ಕೆ ವರದಿ ನೀಡಿ ರಾಜ್ಯದಲ್ಲಿ ಶೇ.14ರಷ್ಟು ತೆರಿಗೆ ನಷ್ಟವಾಲಿದೆ ಎಂದು ತಿಳಿಸಿದ್ದೇವೆ. ಅದರ ಪ್ರಕಾರ ಕೇಂದ್ರ ಸರ್ಕಾರ 2022ರವರೆಗೆ ನಷ್ಟ ಪರಿಹಾರ ಪಾವತಿಸಬೇಕಿದೆ. ಆದರೆ ಕಳೆದ ವರ್ಷ ಮತ್ತು ಈ ವರ್ಷ ನಷ್ಟ ಪರಿಹಾರ ನೀಡಿಲ್ಲ. ಸಾಲ ತೆಗೆದುಕೊಳ್ಳಿ, ಸೆಸ್ ಹಾಕಿ ಹಣ ವಸೂಲಿ ಮಾಡಿ ಸಾಲ ಮರು ಪಾವತಿ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಒಪ್ಪಂದದಲ್ಲಿ ಈ ರೀತಿಯ ಅಂಶಗಳಿವೆಯೇ ಎಂದು ಪ್ರಶ್ನಿಸಿದರು.

ಹದಿನಾಲ್ಕನೇ ಹಣಕಾಸು ಆಯೋಗದಲ್ಲಿ ಶೇ.4.71ರಷ್ಟು ಪಾಲು ರಾಜ್ಯಕ್ಕೆ ಸಿಗುತ್ತಿತ್ತು. 15ನೇ ಆಯೋಗದ ಶಿಫಾರಸ್ಸಿನಲ್ಲಿ ಹಣಕಾಸಿನ ಹಂಚಿಕೆ ಶೇ.3.4ರಷ್ಟಾಗಿದೆ. ಮರು ಹಂಚಿಕೆಯಲ್ಲಿ ಶೇ.1.04ರಷ್ಟು ಕಡಿಮೆಯಾಗಿದೆ. ಈ ಮೊದಲು ರಾಜ್ಯಕ್ಕೆ 35 ಸಾವಿರ ಕೋಟಿ ಜಿಎಸ್‍ಟಿ ಪಾಲು ಸಿಗುತ್ತಿತ್ತು. ಹಂಚಿಕೆಯಲ್ಲಿ ಕಡಿಮೆಯಾಗಿದ್ದರಿಂದ 20 ಸಾವಿರ ಕೋಟಿ ರೂ.ನಷ್ಟು ಆದಾಯ ಕಡಿಮೆಯಾಗಿದೆ. ನಮ್ಮಲ್ಲಿ ವಸೂಲಿಯಾಗುವ ತೆರಿಗೆಯಲ್ಲಿನ ಪಾಲು ಮತ್ತು ಕೇಂದ್ರ ಸರ್ಕಾರದ ಸಹಾಯಧನ ಸೇರಿ ರಾಜ್ಯಕ್ಕೆ ವಾರ್ಷಿಕ ಸುಮಾರು 90 ಸಾವಿರ ಕೋಟಿ ರೂ. ದೊರೆಯುತ್ತಿತ್ತು. ಈಗ ಅದು 40 ಸಾವಿರ ಕೋಟಿಗೆ ಇಳಿದಿದೆ ಎಂದು ವಿವರಿಸಿದರು.

ಪಾಲು ಹಂಚಿಕೆಯಲ್ಲಿ ಕಡಿಮೆಯಾಗಿದ್ದರಿಂದ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತ ಪಡಿಸಿದಾಗ 15ನೇ ಹಣಕಾಸು ಆಯೋಗ ಮಧ್ಯಂತರ ವರದಿ ನೀಡಿ 5495 ಕೋಟಿ ರೂಪಾಯಿ ವಿಶೇಷ ನೆರವು ನೀಡಲು ಶಿಫಾರಸ್ಸು ಮಾಡಿತ್ತು. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅದನ್ನು ಕೊಡಲ್ಲ ಎಂದು ಬಿಟ್ಟರು. ರಾಜ್ಯದ 25 ಮಂದಿ ಸಂಸದರು, ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾರು ಬಾಯಿ ಬಿಡಲಿಲ್ಲ. ಪ್ರಧಾನಿ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ನಮ್ಮ ಪಾಲು ನಮಗೆ ಕೊಡಿ ಎಂದು ಕೇಳಲಿಲ್ಲ. ಹಾಗಿದ್ದ ಮೇಲೆ ಇವರೆಲ್ಲಾ ಏಕೆ ಇರಬೇಕು ಎಂದು ಪ್ರಶ್ನಿಸಿದೆ.

ರಾಜ್ಯದ ಬಿಜೆಪಿ ನಾಯಕರ ಗುಲಾಮಗಿರಿ ಹಾಗೂ ಹೊಣೆಗೇಡಿತನದಿಂದ ಕರ್ನಾಟಕಕ್ಕೆ ಆರ್ಥಿಕವಾಗಿ ಭಾರೀ ಅನ್ಯಾಯವಾಗುತ್ತಿದೆ. ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ, ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರಾದ ಮೇಲೆಯೇ ಅನ್ಯಾಯ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

# ನಿರ್ಲಕ್ಷ್ಯ ಸರ್ಕಾರ:
ಕಲಬುರಗಿ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಪದೇ ಪದೇ ಭೂ ಕಂಪನವಾಗುತ್ತಿದೆ. ಜನ ಭಯಭೀತರಾಗಿದ್ದಾರೆ. ಹಲವಾರು ಮನೆಗಳು ಬಿರುಕು ಬಿಟ್ಟಿವೆ. ಜನ ಬೀದಿಯಲ್ಲಿದ್ದಾರೆ. ಸರ್ಕಾರದ ಪರವಾಗಿ ಜಿಲ್ಲಾಧಿಕಾರಿ ಭೇಟಿ ನೀಡಿಲ್ಲ, ಸ್ಥಳೀಯ ಶಾಸಕರು ಮತ್ತು ಸಂಸದರು ಆತಂಕಕ್ಕೆ ಒಳಗಾದ ಜನರನ್ನು ಭೇಟಿ ಮಾಡಿ ಸಾಂತ್ವಾನ ಹೇಳುವ ಪ್ರಯತ್ನ ಮಾಡಿಲ್ಲ. ನಾನು ನಿನ್ನೆ ಅಲ್ಲಿಗೆ ಭೇಟಿ ನೀಡಿದ ಮೇಲೆ ಜಿಲ್ಲಾಧಿಕಾರಿ ಹೋಗಿದ್ದಾರೆ. ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಕಷ್ಟದಲ್ಲಿರುವಾಗ ಜನರಿಗೆ ನೆರವಾಗುವುದು ಸರ್ಕಾರದ ಕರ್ತವ್ಯ ಅದನ್ನು ಮಾಡದಿದ್ದ ಮೇಲೆ ಸರ್ಕಾರ ಏಕಿರಬೇಕು ಎಂದು ಪ್ರಶ್ನಿಸಿದರು.

ಜನರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಇನ್ನಿತರ ಕೆಲಸಗಳನ್ನು ಸರ್ಕಾರ ಮಾಡಬೇಕಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ತಮ್ಮ ಸಕ್ಕರೆ ಕಾರ್ಖಾನೆ ನೋಡಿಕೊಳ್ಳಲೇ ಸಮಯ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಎಂದರೆ ಏನು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಹೇಳಿ ಕೆಲಸ ಮಾಡಿಸಬೇಕು. ನಿರಾಣಿ ಅವರು ಈವರೆಗೂ ಸ್ಥಳಕ್ಕೆ ಬಂದಿಲ್ಲ. ಬೆಂಗಳೂರಿನಲ್ಲಿ ಕುಳಿತು ಹೇಳಿದರೆ ಅಧಿಕಾರಿಗಳು ಮಾತು ಕೇಳುತ್ತಾರೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

# ರಾಜಕೀಯ ನಿವೃತ್ತಿಯ ಸವಾಲು:
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಬಗ್ಗೆ ಏಕವಚನದಲ್ಲಿ, ತಮ್ಮ ಹುದ್ದೆಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ವಿಪಕ್ಷ ನಾಯಕನ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾರೆ ಎಂದು ಜನರಿಗೆ ಗೋತ್ತಾಯಿತು. ಇದು ಶಿಷ್ಠಚಾರದ ಉಲ್ಲಂಘನೆಯಾಗಿದೆ. ಸಮ್ಮಿಶ್ರ ಸರ್ಕಾರವನ್ನು ಕೆಡವಲು 17 ಮಂದಿ ಶಾಸಕರನ್ನು ನಾನು ಬಿಜೆಪಿಗೆ ಕಳುಹಿಸಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್‍ನ ಮೂರು ಮಂದಿ ಶಾಸಕರು ಬಿಜೆಪಿಗೆ ಹೋಗಿದ್ದಾರೆ, ಅವರನ್ನು ನಾನೇ ಕಳುಸಿದ್ದನಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕುಮಾರಸ್ವಾಮಿ ಮಾಡುವ ಆರೋಪಗಳಿಗೆ ನಾನು ಸುಮಾರು 10 ಬಾರಿ ಸ್ಪಷ್ಟನೆ ನೀಡಿದ್ದೇನೆ. ಇನ್ನು ಮುಂದೆ ಅವರು ಏನೇ ಹೇಳಿದರು ನಾನು ಉತ್ತರ ನೀಡಲ್ಲ. ಇದು ಕೊನೆ ಬಾರಿ ಎಂದ ಸಿದ್ದರಾಮಯ್ಯ, ಸರ್ಕಾರ ಪತನಗೊಳಿಸುವ ಆಗಿದ್ದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲೇ ನಾನು ಒಪ್ಪುತ್ತಿರಲಿಲ್ಲ. ಸರ್ಕಾರ ಬಿದ್ದು ಹೋಗಿದ್ದು ನನ್ನಿಂದ ಅಲ್ಲ, ಅದಕ್ಕೆ ಕುಮಾರಸ್ವಾಮಿ ನೇರ ಕಾರಣ. ಮುಖ್ಯಮಂತ್ರಿ ಮಂತ್ರಿಯಾಗಿದ್ದ ಅವರು ಸ್ಟಾರ್ ಹೊಟೇಲ್‍ನಲ್ಲಿ ಕುಳಿತು ಆಡಳಿತ ನಡೆಸುತ್ತಿದ್ದರು. ಯಾವ ಮುಖ್ಯಮಂತ್ರಿಯೂ ಹೊಟೇಲ್‍ನಲ್ಲಿ ಕುಳಿತು ಸರ್ಕಾರ ನಡೆಸಲಲ್ಲ. ಅಲ್ಲಿ ಶಾಸಕರನ್ನು, ಸಚಿವರನ್ನು ಒಳಗೆ ಬಿಡುತ್ತಿರಲಿಲ್ಲ. ಇದರಿಂದ ಶಾಸಕರು ಅಸಮಾದಾನಗೊಂಡಿದ್ದರು.

ಇಲ್ಲಿ ರಾಜಕೀಯ ಚಟುವಟಿಕೆ ಏರುಪೇರಾದಾಗ ಕುಮಾರಸ್ವಾಮಿ ಅಮೆರಿಕಕ್ಕೆ ಹೋಗಿ ಕುಳಿತ್ತಿದ್ದರು. ಇಲ್ಲಿ ಆಪರೆಷನ್ ಕಮಲ ನಡೆಯುತ್ತಿದೆ ಶಾಸಕರು ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆ ಬೇಗ ಬನ್ನಿ… ಎಂದು ನಾನೇ ಕರೆ ಮಾಡಿ ಹೇಳಿದೆ. ಏನು ಆಗಲ್ಲ, ಸರ್ ಬರುತ್ತೇನೆ.. ಎಂದು ಹೇಳಿ 9 ದಿನ ಅಲ್ಲೆ ಕುಳಿತು ಕೊಂಡರು. ವಿಶ್ವಾಸ ಮತ ಯಾಚನೆ ವೇಳೆ ಭಾಷಣ ಮಾಡಿದ ಕುಮಾರಸ್ವಾಮಿ ನನ್ನ ವಿರುದ್ಧ ಯಾಕೆ ಮಾತನಾಡಲಿಲ್ಲ. ಈಗ ಹೇಳುವುದನ್ನು ಆಗ ಏಕೆ ಹೇಳಲಿಲ್ಲ. ಯಾವತ್ತು ನಾಲಿಗೆ ಒಂದೇ ಇರಬೇಕು ಎಂದು ತಿರುಗೇಟು ನೀಡಿದರು.

ರಾಜಕಾರಣದಲ್ಲಿ ಬೆದರಿಕೆ ಹಾಕುವರು, ಎಚ್ಚರಿಕೆ ನೀಡುವವರನ್ನು ತುಂಬಾ ಜನರನ್ನು ನೋಡಿದ್ದೇನೆ. ಅದಕ್ಕೆಲ್ಲಾ ಹೆದರಲ್ಲ, ಕುಮಾರಸ್ವಾಮಿಗಿಂತ ಮೊದಲು 1971ರಲ್ಲೇ ನಾನು ರಾಜಕಾರಣಕ್ಕೆ ಬಂದವನು. ಜನರನ್ನು ನನ್ನ ವಿರುದ್ಧ ಎತ್ತಿಕಟ್ಟಲು ಕುಮಾರಸ್ವಾಮಿ ಈ ರೀತಿ ಮಾತನಾಡುತ್ತಿದ್ದಾರೆ. ನನ್ನ ಬಗ್ಗೆ ಅವರಿಗೆ ಭಯ ಇದೆ. ಅದಕ್ಕಾಗಿ ನನ್ನ ಗುರಿಯಾಗಿಸಿಕೊಂಡು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಆದಾಯ ತೆರಿಗೆ ದಾಳಿ ನಡೆಸಲು ನಾನೇನು ಪ್ರಧಾನಿನಾ ? ಯಡಿಯೂರಪ್ಪ ಬಿಜೆಪಿಯವರು, ಮೋದಿನೂ ಬಿಜೆಪಿಯವರು. ಅವರು ನನ್ನ ಕೇಳಿ ಆದಾಯ ತೆರಿಗೆ ದಾಳಿ ಮಾಡುತ್ತಾರಾ ಎಂದು ಕುಮಾರಸ್ವಾಮಿ ಅವರು ಮಾಡಿದ ಆರೋಪಗಳನ್ನು ತಳ್ಳಿ ಹಾಕಿದ ಸಿದ್ದರಾಮಯ್ಯ, ನಾನು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ ಎಂದು ಹೇಳಿರುವುದು ಆಧಾರ ರಹಿತ. ಒಂದು ವೇಳೆ ನಾನು ಇತ್ತೀಚೆಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದನ್ನು ಸಾಬೀತು ಪಡಿಸಿದರೆ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ

Facebook Comments