ಭ್ರಷ್ಟ ಸರ್ಕಾರಕ್ಕೆ ಉಪಚುನಾವಣೆ ಎಚ್ಚರಿಕೆ ಗಂಟೆ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಅ. 16- ರಾಜ್ಯದಲ್ಲಿ ಜನ ವಿರೋ, ನಿಷ್ಕ್ರಿಯ ಹಾಗೂ ಲೂಟಿ ಹೊಡೆಯುವ ಸರ್ಕಾರ ಇದೆ. ಈ ಉಪಚುನಾವಣೆ ಭ್ರಷ್ಟ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಬೇಕು. ಈ ನಿಟ್ಟಿನಲ್ಲಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.

ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತದಾರರು ರಾಜ್ಯದ ನಿಷ್ಕ್ರಿಯ ಸರ್ಕಾರದ ವಿರುದ್ಧ ಮತ ಚಲಾಯಿಸುವ ಮೂಲಕ ಕಾಂಗ್ರೆಸ್ ಪಕ್ಷ ಬೆಂಬಲಿಸುವಂತೆ ಅವರು ಕರೆ ನೀಡಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಮುಂದಿನ ದಿನಗಳಲ್ಲಿ ಈ ಲೂಟಿಕೋರ ಸರ್ಕಾರವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಈ ಉಪಚುನಾವಣೆಯಲ್ಲಿ ಮತದಾರರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಕಳೆದ ಬಾರಿ ಜಯಚಂದ್ರ ಅವರು ಸ್ವಲ್ಪ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಮತ್ತೆ ಅವರನ್ನೇ ಪಕ್ಷ ಅಭ್ಯರ್ಥಿಯನ್ನಾಗಿ ಮಾಡಿದ್ದು, ಈ ಉಪಚುನಾವಣೆಯಲ್ಲಿ ಮತದಾರರು ಅವರ ಕೈ ಹಿಡಿಯಬೇಕು ಎಂದು ಮನವಿ ಮಾಡಿದರು.

ಸುಮಾರು ಎರಡೂವರೆ ಸಾವಿರ ಕೋಟಿ ರೂ. ಅನುದಾನವನ್ನು ಶಿರಾ ಕ್ಷೇತ್ರಕ್ಕೆ ತಂದು ಸಂಪೂರ್ಣ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಆದರೆ ಚುನಾವಣೆಯಲ್ಲಿ ಜನತೆ ಸೋಲಿಸಿದ್ದರಿಂದ ಅಭಿವೃದ್ಧಿ ಅರ್ಧಕ್ಕೆ ಮೊಟಕುಗೊಂಡಿದೆ. ಕಂಠಿತವಾಗಿರುವ ಅಭಿವೃದ್ಧಿ ಕಾರ್ಯಗಳು ವೇಗ ಪಡೆಯಲು ಜಯಚಂದ್ರರನ್ನು ಗೆಲ್ಲಿಸಬೇಕು ಎಂದರು.

ಮಾಜಿ ಡಿಸಿಎಂ ಜಿ.ಪರಮೇ ಶ್ವರ್ ಮಾತನಾಡಿ, ಶಿರಾ ತಾಲೂಕಿ ನಲ್ಲಿ ಟಿ.ಬಿ.ಜಯ ಚಂದ್ರ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳ ಸಾಧನೆಗಳು ಹೇಳುತ್ತಿವೆ.

ಶಿರಾ ತಾಲೂಕಿನಲ್ಲಿ ಶಾಶ್ವತವಾಗಿರುವ ನೂರಾರು ಕಾಮಗಾರಿಗಳನ್ನು ಕೈಗೊಂಡಿ ದ್ದಾರೆ ಇದು ರೈತರಿಗೆ ಜನಸಾಮಾನ್ಯರಿಗೆ ಕಡುಬಡವರಿಗೆ ಹೆಚ್ಚು ಅನುಕೂಲವಾಗಲಿದೆ. ಆದರೆ ಬಹುತೇಕ ಕಾಮಗಾರಿಗಳು ಅರ್ಧಕ್ಕೆ ನಿಂತು ಹೋಗಿವೆ.

ಕಾಮಗಾರಿಗಳ ಮುಂದುವರಿಯ ಬೇಕಾದರೆ ಜಯಚಂದ್ರ ಅವರು ಮತ್ತೆ ಶಾಸಕರಾಗಿಬರಲೇ ಬೇಕಾಗಿದೆ.ಶಿರಾ ತಾಲೂಕಿನ ಜನತೆ ಅವರನ್ನು ಬೆಂಬಲಿಸುವಂತೆ ಈ ಸಂದರ್ಭದಲ್ಲಿ ಅವರು ಮನವಿ ಮಾಡಿಕೊಂಡರು.
ಮಾಜಿ ಶಾಸಕ ಕೆ ಎನ್ ರಾಜಣ್ಣ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಯಾವುದೇ ನಾಯಕರುಗಳ ಜೊತೆ ಭಿನ್ನಾಭಿಪ್ರಾಯವಿಲ್ಲ ಎಂಬುದನ್ನು ಪ್ರತಿಯೊಬ್ಬರು ಜೊತೆಗೂಡಿ ಕಾರ್ಯಕರ್ತರಿಗೆ ನಮ್ಮಲ್ಲಿ ಒಗ್ಗಟ್ಟಿದೆ ಬಲವಿದೆ ಎಂಬುದನ್ನು ಕಾರ್ಯಕರ್ತರು ಬಿಂಬಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾದ ಟಿ.ಬಿ.ಜಯಚಂದ್ರ ಮಾತನಾಡಿ, ಶಿರಾ ತಾಲೂಕಿನ ಜನತೆಯ ಆಶೀರ್ವಾದ ಹಿನ್ನೆಲೆಯಲ್ಲಿ ನೂರಾರು ಕೋಟಿ ಅನುದಾನವನ್ನು ತಂದು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ, ಅದು ಪ್ರತಿಯೊಬ್ಬರಲ್ಲಿ ನೆನಪಾಗಿ ಉಳಿದಿದೆ.ಶಿರಾಕ್ಕೆ ಹೇಮಾವತಿ ನೀರು ತಂದಿದ್ದೇ ನಾನು ಅಗ ಬಿಜೆಪಿ ಪಕ್ಷದವರು ಇದಕ್ಕೆ ವಿರೋಧ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಂಸದ ಕೆ.ಎಚ್. ಮುನಿಯಪ್ಪ, ಶಾಸಕ ಜಮೀರ್ ಅಹಮದ್, ಲಕ್ಷ್ಮಿ ಹೆಬ್ಬಾಳ್ಕರ್ , ಯು.ಟಿ.ಖಾದರ್, ಸೇರಿದಂತೆ ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಜಯಚಂದ್ರರಿಗೆ ಸಾಥ್ ನೀಡಿದರು.

Facebook Comments

Sri Raghav

Admin