ನೋ ಡೌಟ್, ಮೈತ್ರಿ ಸರ್ಕಾರ 4 ವರ್ಷ ಅಧಿಕಾರ ನಡೆಸುತ್ತೆ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.22-ರಾಜ್ಯ ಸಮ್ಮಿಶ್ರ ಸರ್ಕಾರ ಮುಂದಿನ ನಾಲ್ಕು ವರ್ಷಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸಲಿದೆ. ಈ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ.

ಬೇರೆಯವರಿಗೆ ಈ ಬಗ್ಗೆ ಆಗಾಗ್ಗೆ ಏಕೆ ಅನುಮಾನ ಮೂಡುತ್ತಿದೆ ಎಂಬುದು ನನಗೆ ತಿಳಿಯುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಟ್ವಿಟರ್‍ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸಮ್ಮಿಶ್ರ ಸರ್ಕಾರ ಮುಂದಿನ ನಾಲ್ಕು ವರ್ಷ ಸ್ಥಿರವಾಗಿರಲಿದೆ ಎಂದಿದ್ದಾರೆ. ರಾಹುಲ್ ಗಾಂಧಿ ಅವರನ್ನು ಇತ್ತೀಚೆಗೆ ನಾನು ಭೇಟಿ ಮಾಡಿದಾಗ ಪಕ್ಷ ಸಂಘಟನೆಯ ಬಗ್ಗೆ ಮಾತುಕತೆ ನಡೆಸಿದ್ದೇನೆ.

ಆದರೆ ಮಾಧ್ಯಮಗಳಲ್ಲಿ ಈ ಬಗ್ಗೆ ಇಲ್ಲಸಲ್ಲದ ಊಹೋಪೋಹಗಳು ಪ್ರಕಟಣೆಗೊಂಡಿದೆ. ಇಂತಹ ಕಟ್ಟುಕಥೆಯ ವರದಿಗಳು ಪತ್ರಿಕೋದ್ಯಮಕ್ಕೆ ಮಾರಕ ಎಂದು ಹೇಳಿದ್ದಾರೆ.

ಮಧ್ಯಂತರ ಚುನಾವಣೆ ಪ್ರಶ್ನೆಯೇ ಇಲ್ಲ : ದೇಶಪಾಂಡೆ : ಮಧ್ಯಂತರ ಚುನಾವಣೆ ಎದುರಾಗುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಆರ್.ವಿ.ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುವ ಪ್ರಮೇಯವಿಲ್ಲ.

ಅಂತಹ ಪರಿಸ್ಥಿತಿ ಎದುರಾದರೆ ರೀತಿಯಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು. ಚುನಾವಣೆಯಲ್ಲಿ ಸೋಲು- ಗೆಲುವು ಸಾಮಾನ್ಯ. ಯಾರು ಆಡಳಿತ ನಡೆಸಬೇಕು ಎಂದು ಮತದಾರರು ನಿರ್ಣಯಿಸುತ್ತಾರೆ.

ಸೋಲಿನ ಬಗ್ಗೆ ಪಕ್ಷವು ಪರಾಮರ್ಶಿಸಬೇಕು. ಎಲ್ಲಿ ತಪ್ಪಾಗಿದೆ ಎಂದು ವಿಶ್ಲೇಷಿಸಿ ಸರಿಯಾದ ಹೆಜ್ಜೆ ಹಾಕಬೇಕು ಎಂದು ಹೇಳಿದರು. ಹುಬ್ಬಳ್ಳಿ- ಧಾರವಾಡದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಕನಿಷ್ಠ ವಾರಕ್ಕೊಮ್ಮೆಯಾದರು ನೀರು ಸರಬರಾಜು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

Facebook Comments

Sri Raghav

Admin