ಮುನಿರತ್ನ ತಮ್ಮ ಹಗರಣಗಳಿಂದ ರಕ್ಷಣೆ ಪಡೆಯಲು ಬಿಜೆಪಿಗೆ ಹೋಗಿದ್ದಾರೆ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.14-ರಾಜರಾಜೇಶ್ವರಿನಗರದಿಂದ ಕಾಂಗ್ರೆಸ್ ಶಾಸಕರಾಗಿದ್ದ ಮುನಿರತ್ನ ಅವರು ಹಣ ಮತ್ತುಅಧಿಕಾರದ ಆಸೆಗೆ ಹಾಗೂ ಅವರು ಮಾಡಿರುವ ಹಗರಣಗಳಿಂದ ರಕ್ಷಣೆ ಪಡೆಯಲು ಬಿಜೆಪಿಗೆ ಹೋಗಿದ್ದಾರೆ. ಅವರು ಬಿಜೆಪಿಗೆ ಹೋದ ತಕ್ಷಣ ಮತದಾರರು ಬಿಜೆಪಿಗೆ ಹೋಗುವುದಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ಕುಸುಮಾ ಬಹಳ ಸಮರ್ಥರಿದ್ದಾರೆ. ಅವರ ತಂದೆ ಈ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ನಾನು ಅಹಿಂದ ವರ್ಗದ ನಾಯಕ ಎಂದು ಹೇಳಿಕೊಳ್ಳಲು ಯಾವ ಅಂಜಿಕೆಯನ್ನು ಪಡುವುದಿಲ್ಲ. ಅವಕಾಶ ವಂಚಿತ ವರ್ಗದ ಪರವಾಗಿ ನಾವು ಆಡಳಿತ ನಡೆಸಿದ್ದೇವೆ. ನಾನು ಅಹಿಂದ ಪರವಾಗಿದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ. ನಾನು ಎಲ್ಲ ವರ್ಗಗಳ ಪರವಾಗಿದ್ದೇನೆ. ಎರಡು ಕ್ಷೇತ್ರದಲ್ಲಿ ಕಾಂಗ್ರೆಸ ಗೆಲ್ಲಲಿದೆ ಎಂದರು.

ಧಾರವಾಡದ ಯೋಗೇಶ್ ಕೊಲೆ ಪ್ರಕರಣದಲ್ಲಿ ನಿನ್ನೆ ಸಿಬಿಐ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರನ್ನು ವಿಚಾರಣೆ ನಡೆಸಿದ್ದಾರೆ. ಗೃಹ ಸಚಿವರಾಗಿದ್ದಾಗ ಅವರು ಹೇಳಿಕೆ ನೀಡಿದ್ದರು, ಯೋಗೇಶ್ ಕೊಲೆಗೂ ಪರಮೇಶ್ವರ್‍ಗೆ ಏನು ಸಂಬಂಧ ಇಲ್ಲ ಎಂದು ಹೇಳಿದರು.

ಕೆಜಿಹಳ್ಳಿ ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಗಲಭೆ ಶಮನಗೊಳಿಸಲು ಸ್ಥಳಕ್ಕೆ ಹೋಗುವಂತೆ ನಮ್ಮ ಶಾಸಕರಾಗಿದ್ದ ರಿಜ್ವಾನ್ ಅರ್ಷದ್ ಮತ್ತು ಜಮೀರ್ ಅಹಮದ್ ಖಾನ್ ಅವರನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದರು. ಹಾಗಾಗಿ ನಮ್ಮವರು ಅಲ್ಲಿಗೆ ಹೋಗಿದ್ದರು.

ಗಲಭೆಗೆ ಸರ್ಕಾರದ ವೈಪಲ್ಯ ಕಾರಣ. ತಕ್ಷಣ ಎಫ್‍ಐಆರ್ ದಾಖಲು ಮಾಡಿ ಆರೋಪಿ ನವೀನ್‍ನನ್ನು ಬಂಸಿ ಜೈಲಿಗೆ ಕಳುಹಿಸಿದ್ದರೆ ಗಲಭೆಯಾಗುತ್ತಿರಲಿಲ್ಲ. ಪೆÇಲೀಸರು ವಿಳಂಬ ಮಾಡಿದ್ದರಿಂದ ಆ ಕ್ಷಣದ ಕೋಪದಲ್ಲಿ ಗಲಭೆ ನಡೆದಿದೆ ಎಂದು ಹೇಳಿದರು.

Facebook Comments

Sri Raghav

Admin