ಸಿದ್ದರಾಮಯ್ಯನವರ ವಿಪಕ್ಷ ನಾಯಕನ ಸ್ಥಾನ ಭದ್ರ ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.9- ಬಿಜೆಪಿ ನಿರೀಕ್ಷೆಗೂ ಮೀರಿ ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ತನ್ನ ಸರ್ಕಾರವನ್ನು ಸುಭದ್ರ ಮಾಡಿಕೊಂಡಿದ್ದರೆ ಹಲವು ಅಡ್ಡಿ ಆತಂಕಗಳ ನಡುವೆಯೂ ಸಿದ್ದರಾಮಯ್ಯ ಅವರ ವಿಪಕ್ಷ ನಾಯಕ ಸ್ಥಾನವೂ ಗಟ್ಟಿಯಾಗಿದೆ. ಒಂದು ವೇಳೆ ಕಾಂಗ್ರೆಸ್ ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದು ಬಿಜೆಪಿ ಸರ್ಕಾರ ಅತಂತ್ರಕ್ಕೆ ಸಿಲುಕಿ ಪತನಗೊಂಡಿದ್ದರೆ ಮತ್ತೆ ಪಕ್ಷದಲ್ಲಿ ಹೊಸ ಸರ್ಕಾರ ರಚನೆಯ ಪ್ರಸ್ತಾವಗಳು ಚರ್ಚೆಯಾಗುತ್ತಿದ್ದವು.

ಬಿಜೆಪಿಗೆ ಜೆಡಿಎಸ್ ಬೆಂಬಲ ಕೊಡುವುದೊ ಅಥವಾ ಮತ್ತೊಂದು ಸುತ್ತಿನ ಆಪರೇಷನ್ ಕಮಲ ನಡೆದು ಒಂದಿಷ್ಟು ವಿಪಕ್ಷ ಶಾಸಕರು ರಾಜೀನಾಮೆ ಕೊಟ್ಟಿದ್ದೇಯಾದರೆ ಬಿಜೆಪಿ ಸರ್ಕಾರ ಸುಭದ್ರವಾಗುತ್ತಿತ್ತು. ಈ ಎರಡೂ ಸಂದರ್ಭಗಳನ್ನು ಹೊರತುಪಡಿಸಿದ ಸರ್ಕಾರ ಮುಂದುವರೆಯಲು ಸಾಧ್ಯವಾಗುತ್ತಿರಲಿಲ್ಲ.

ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸರ್ಕಾರ ರಚನೆ ಪ್ರಸ್ತಾವಗಳು ಚಾಲ್ತಿಗೆ ಬರುತ್ತಿದ್ದವು. ಅಂತಹ ಸಂದರ್ಭದಲ್ಲಿ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟ ಹತ್ತಾರು ಮಂದಿ ಅಖಾಡಕ್ಕಿಳಿಯುತ್ತಿದ್ದರು. 2013ರಲ್ಲಿ ಸುಲಭವಾಗಿ ಸಿಎಂ ಸ್ಥಾನ ಗಿಟ್ಟಿಸಿದಂತೆ ಈ ಬಾರಿ ಅವಕಾಶ ಗಿಟ್ಟಿಸಿಕೊಳ್ಳಲು ಸಿದ್ದರಾಮಯ್ಯನವರಿಗೆ ಸಾಧ್ಯವಾಗುತ್ತಿರಲಿಲ್ಲ.

ಹೈಕಮಾಂಡ್ ಬೇರೆ ನಾಯಕರಿಗೆ ಬೆಂಬಲ ಸೂಚಿಸಿದ್ದರೆ ಸಿದ್ದರಾಮಯ್ಯ ಅವರು ಇರುವ ವಿಪಕ್ಷದ ನಾಯಕ ಸ್ಥಾನವನ್ನು ಕಳೆದುಕೊಂಡು ಹಿರಿಯ ನಾಯಕರಾಗಿ

Facebook Comments

Sri Raghav

Admin