ಎಐಸಿಸಿ ಅಧ್ಯಕ್ಷರಾಗ್ತಾರಾ ಸಿದ್ದರಾಮಯ್ಯ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.20- ಮುಖ್ಯಮಂತ್ರಿಯಾಗಿ ಐದು ವರ್ಷ ಯಶಸ್ವಿ ಆಡಳಿತ ನೀಡಿದ ಹಿರಿಯ ರಾಜಕಾರಣಿ ಸಿದ್ದರಾಮಯ್ಯ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸುವ ಪ್ರಸ್ತಾವನೆ ಚರ್ಚೆಗೆ ಬಂದಿದೆ.

ಹಾಲಿ ಅಧ್ಯಕ್ಷರಾದ ಸೋನಿಯಾಗಾಂ ಅವರು ಅನಾರೋಗ್ಯ ಸಮಸ್ಯೆಯಿಂದಾಗಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಆಗುತ್ತಿಲ್ಲ.

ರಾಹುಲ್‍ಗಾಂ ಈಗಾಗಲೇ ಅಧ್ಯಕ್ಷರಾಗಿ ವೈಫಲ್ಯ ಅನುಭವಿಸಿದ್ದು, ಮತ್ತೆ ಅಧ್ಯಕ್ಷಗಾದಿಗೇರಲು ಹಿಂದೇಟು ಹಾಕುತ್ತಿದ್ದಾರೆ.ಗಾಂ ಕುಟುಂಬದ ಹೊರತಾದ ವ್ಯಕ್ತಿಯನ್ನು ಈ ಬಾರಿ ಎಐಸಿಸಿ ಉದ್ದೆಗೆ ಪರಿಗಣಿಸುವುದಾಗಿ ಹೇಳುವ ಮೂಲಕ ಪ್ರಿಯಾಂಕ ವಾದ್ರಾ ಕೂಡ ಅಧ್ಯಕ್ಷರಾಗಲು ನಿರಾಕರಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಉದ್ದೆ ಅತ್ಯಂತ ಪ್ರಮುಖ ಹಾಗೂ ಜವಾಬ್ದಾರಿ ಹುದ್ದೆಯಾಗಿದ್ದು, ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಸವಾಲಿನ ಜವಾಬ್ದಾರಿ ಕೂಡ ಆಗಿದೆ.

ಬೇರೆ ಬೇರೆ ರಾಜ್ಯಗಳಲ್ಲಿರುವ ಪ್ರಭಾವಿ ನಾಯಕರು, ಪ್ರಮುಖ ಮುಖಂಡರು ಅಧ್ಯಕ್ಷಗಾದಿಗೇರಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಕರ್ನಾಟಕದ ಪ್ರಮುಖ ನಾಯಕರ ಹೆಸರುಗಳೇ ಎಐಸಿಸಿ ಗಾದಿಗೆ ಪದೇ ಪದೇ ಕೇಳಿಬರುತ್ತಿದೆ.

ಈ ಮೊದಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿತ್ತು. ಆದರೆ ಕೊನೆ ಕ್ಷಣದಲ್ಲಿ ಖರ್ಗೆ ಅವರಿಗೆ ಅವಕಾಶ ತಪ್ಪಿತ್ತು.

ಲೋಕಸಭೆ ಚುನಾವಣೆಯಲ್ಲಿ ಅವರು ಸೋಲು ಕಂಡ ಬಳಿಕ ಎಐಸಿಸಿ ಅಧ್ಯಕ್ಷೆ ಸೋನಿಯಗಾಂ ಅವರೇ ಖುದ್ದು ಆಸಕ್ತಿ ವಹಿಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ್ದಾರೆ.

ಖರ್ಗೆ ಅವರ ಹೆಸರು ಕೂಡ ಮತ್ತೊಮ್ಮೆ ಎಐಸಿಸಿ ಅಧ್ಯಕ್ಷ ಪಟ್ಟಕ್ಕೆ ಕೇಳಿ ಬರುತ್ತಿದೆ. ಆದರೆ, ಸಿದ್ದರಾಮಯ್ಯ ಅವರ ಹೆಸರು ಪ್ರಮುಖವಾಗಿ ಚರ್ಚೆಗೆ ಬಂದಿದೆ.

ಜನತಾ ಪರಿವಾರದಲ್ಲಿ ಪ್ರಭಾವಿ ನಾಯಕರಾಗಿ ಬೆಳೆದು 2006ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದ ಸಿದ್ದರಾಮಯ್ಯ ಅವರು, ರಾಜ್ಯದಲ್ಲಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲೂ ಪ್ರಭಾವಿಯಾಗಿ ಗುರುತಿಸಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ವಿಷಯದಲ್ಲಿ ಅತ್ಯಂತ ಕರಾರುವಕ್ಕಾಗಿ ಹಾಗೂ ನಿಷ್ಟುರವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಸಿದ್ದರಾಮಯ್ಯಪದೇ ಪದೇ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಯೋಜನಾಬದ್ಧವಾಗಿ ಮತ್ತು ಪ್ರತಿಬದ್ದ ತಾತ್ವಿಕ ಸಂಘರ್ಷದಲ್ಲಿ ಬಿಜೆಪಿ ವಿರುದ್ಧ ಕರಾರುವಕ್ಕಾದ ಎದುರಾಳಿ ಎಂದರೆ ಅದು ಸಿದ್ದರಾಮಯ್ಯ ಮಾತ್ರ ಎಂದು ಜನಜನಿತವಾಗಿದೆ.

ಹೀಗಾಗಿ ಬಿಜೆಪಿಯ ಭ್ರಮಾ ಲೋಕದ ರಾಜಕೀಯ ಮರುಳಾಟಕ್ಕೆ ಸಿದ್ದರಾಮಯ್ಯ ಸೂಕ್ತ ಪ್ರತ್ಯುತ್ತರ ಕೊಡಬಲ್ಲರು ಎಂಬ ನಿರೀಕ್ಷೆಯಲ್ಲಿ ಎಐಸಿಸಿ ಅಧ್ಯಕ್ಷಗಾದಿಗೆ ಇವರ ಹೆಸರನ್ನು ಪ್ರಸ್ತಾಪಿಸಲಾಗಿದೆ.

ರಾಷ್ಟ್ರಮಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ದಿಗ್ವಿಜಯ್‍ಸಿಂಗ್, ಪ್ರಿಯಾಂಕವಾದ್ರಾ, ಮಧುಸೂದನ್ ಮಿಸ್ತ್ರಿ ಸೇರಿದಂತೆ ಅನೇಕರ ಹೆಸರುಗಳು ಎಐಸಿಸಿ ಅಧ್ಯಕ್ಷಗಾದಿಗೆ ಕೇಳಿ ಬಂದಿದೆ. ಅವರಲ್ಲಿ ಪ್ರಮುಖವಾಗಿ ಸಿದ್ದರಾಮಯ್ಯ ಅವರ ಹೆಸರು ಚರ್ಚೆಯಾಗುತ್ತಿದೆ.

ಸೋನಿಯಗಾಂ ಅವರು ಅಧ್ಯಕ್ಷಗಾದಿಯಿಂದ ಇಳಿದಿದ್ದಾರೆ. ಗಾಂ ಕುಟುಂಬೇತರ ನಾಯಕರ ಹೆಸರು ಪರಿಶೀಲನೆಗೆ ಬಂದರೆ ಸಿದ್ದರಾಮಯ್ಯ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳು ದಟ್ಟವಾಗಿವೆ.

Facebook Comments

Sri Raghav

Admin