‘ನಾಳೆ ಬಿಜೆಪಿಯವರೇ ಯಡಿಯೂರಪ್ಪ ವಿರುದ್ಧ ಮತ ಹಾಕ್ತಾರೆ..!’ ಸಿದ್ದರಾಮಯ್ಯ ಬಾಂಬ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜು. 28- ನಾಳೆ ವಿಶ್ವಾಸ ಮತ ಯಾಚನೆಯಲ್ಲಿ ಬಿಜೆಪಿಯವರೆ ಯಡಿಯೂರಪ್ಪ ವಿರುದ್ಧ ಮತ ಹಾಕಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನಾಳೆ ವಿಶ್ವಾಸಮತ ಯಾಚಿಸಲಿದ್ದಾರೆ. ನನ್ನ ಪ್ರಕಾರ ಅವರಿಗೆ ಬೆಂಬಲವಿಲ್ಲ, ಅವರು ವಿರುದ್ಧ ಅವರ ಪಕ್ಷದವರೇ ಮತ ಹಾಕಬಹುದು ಎಂದು ಮಾರ್ಮಿಕವಾಗಿ ನುಡಿದರು.

221ರಲ್ಲಿ 111 ಎಲ್ಲಿದೆ ಎಂದು ಪ್ರಶ್ನಿಸಿದವರು ಈ ಬಗ್ಗೆ ನೀವು ಅವರನ್ನೇ ಕೇಳಬೇಕು ಎಂದು ಹೇಳಿದರು. ಸ್ಪೀಕರ್ ಪ್ರೆಸ್‍ಮೀಟ್ ಕುರಿತಂತೆ ಅವರು ಪ್ರೆಸ್‍ಮೀಟ್ ಕರೆದಿದ್ದಾರಾ.. ಏಕೆ ಕರೆದಿದ್ದಾರೆ.. ಎಂದು ಮಾಧ್ಯಮದವರನ್ನೇ ಮರು ಪ್ರಶ್ನಿಸಿದರು. ನಾನು ಇಲ್ಲಿದ್ದೇನೇ ನನಗೆನೂ ಗೊತ್ತು. ನಿಮಗೇನಾದರೂ ಗೊತ್ತಾ.. ಎಂದರು.

ಅತೃಪ್ತತರ ಕರೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆಸಿದ ಅವರು, ಪದೇ ಪದೇ ಅದೇ ವಿಚಾರ ಪ್ರಸ್ತಾಪ ಬೇಡ ಕರೆ ಮಾಡಿಲ್ಲ ಎಂದು ಹೇಳುವವರು ನನಗೆ ಕರೆ ಮಾಡಿಲ್ಲ ಎಂದರು.
ಬಿ ಫಾರಂ ಮೇಲೆ ಗೆದ್ದವರೆ ಹೊರಗೆ ಹೋಗಿದ್ದಾರೆ. ಇನ್ನೂ ಇವರನ್ನು ಏನು ಕೇಳಬಹುದು.. ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಗ್ಗೆ ಮುಂದೆ ನೋಡೋಣ ಕೆಎಮ್‍ಎಫ್‍ನಲ್ಲಿ ಜೆಡಿಎಸ್-ಕಾಂಗ್ರೆಸ್-ಬಿಜೆಪಿ ಎಂಬ ಪಕ್ಷ ಬೇಧವಿಲ್ಲ ಎಂದರು. ಮಗನ ಮೂರನೇ ವರ್ಷದ ಪುಣ್ಯತಿಥಿಗಾಗಿ ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.

Facebook Comments

Sri Raghav

Admin