ಸಿದ್ದಾರ್ಥ್ ಶೋಧಕ್ಕೆ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.30- ನಿಗೂಢವಾಗಿ ನಾಪತ್ತೆಯಾಗಿರುವ ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣರವರ ಅಳಿಯ ಸಿದ್ದಾರ್ಥ್ ಅವರ ಪತ್ತೆಗಾಗಿ ಕೇಂದ್ರ ಸರ್ಕಾರ ತುರ್ತು ನೆರವು ನೀಡಬೇಕೆಂದು ಗೃಹ ಸಚಿವ ಅಮಿತ್ ಷಾ ರಾಜ್ಯ ಸಂಸದರ ನಿಯೋಗ ಮನವಿ ಮಾಡಿದೆ.

ನವದೆಹಲಿಯಲ್ಲಿ ಇಂದು ಅಮಿತ್ ಷಾ ಅವರನ್ನು ಭೇಟಿ ಮಾಡಿದ ಸಂಸದರಾದ ಶೋಭಾ ಕರಂದ್ಲಾಜೆ, ನಳೀನ್‍ಕುಮಾರ್ ಕಟೀಲ್, ಪಿ.ಸಿ.ಗದ್ದಿಗೌಡರ್, ಭಗವಂತ ಕೂಬಾ ಸೇರಿದಂತೆ ಮತ್ತಿತರರು ಮನವಿ ಮಾಡಿದ್ದಾರೆ.

ಸೇನಾ ನೆರವು, ಹೆಲಿಕಾಪ್ಟರ್ ಬಳಕೆ, ನುರಿತ ಈಜು ತಜ್ಞರು ಸೇರಿದಂತೆ ಎಲ್ಲ ರೀತಿಯ ನೆರವು ನೀಡಬೇಕೆಂದು ಮನವಿ ಪತ್ರದಲ್ಲಿ ಕೋರಿದರು. ಇದಕ್ಕೆ ಸ್ಪಂದಿಸಿರುವ ಅಮಿತ್ ಷಾ ಸಿದ್ದಾರ್ಥ್ ಶೋಧ ಕಾರ್ಯಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.

ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಜೊತೆ ಮಾತನಾಡಿ, ಸೇನಾಪಡೆಯ ಹೆಲಿಕಾಪ್ಟರ್, ಸೇನೆ ಸೇರಿದಂತೆ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.

Facebook Comments