ಮೋದಿ ಸಂದರ್ಶನ ಮಾಡಿದ ಅಕ್ಷಯ್ ವಿಲನ್: ಸಿದ್ದಾರ್ಥ್

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಏ.26- ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಾಲಿವುಡ್ ಖ್ಯಾತನಟ ಅಕ್ಷಯ್‍ಕುಮಾರ್ ವಿಶೇಷ ಸಂದರ್ಶನ ಮಾಡಿರುವ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿರುವ ಬೆನ್ನಲ್ಲೇ ತಮಿಳು ನಟ ಸಿದ್ದಾರ್ಥ್ ಅಪಸ್ವರ ಎತ್ತಿದ್ದಾರೆ.

ಅಕ್ಷಯ್ ಕುಮಾರ್, ಮೋದಿ ಅವರ ಸಂದರ್ಶನ ನಡೆಸಿದ್ದರು. ಪ್ರಧಾನಿ ಮೋದಿ ವಿರುದ್ಧ ಆಗಾಗ ಟೀಕೆಗಳನ್ನು ಮಾಡುವ ಕಾಲಿವುಡ್ ನಟ ಸಿದ್ದಾರ್ಥ್ ಅಕ್ಷಯ್ ಕುಮಾರ್‍ರನ್ನು ವಿಲನ್ ಎಂದು ಜರಿದ್ದಾರೆ.

ಪ್ರಧಾನಿ ಮೋದಿ ಮತ್ತು ಅಕ್ಷಯ್ ಕುಮಾರ್ ಸಂದರ್ಶನ ರಾಜಕೀಯೇತ್ತರ ಮಾತುಕತೆಯಾಗಿತ್ತು. ತಮ್ಮ ಬಾಲ್ಯ, ಶಿಕ್ಷಣ, ರಾಜಕೀಯ ನಾಯಕರ ಜತೆ ತಮ್ಮ ಸ್ನೇಹ ಹೀಗೆ ಹಲವಾರು ಸಂಗತಿಗಳನ್ನು ಅಕ್ಷಯ್ ಎದುರು ಮೋದಿ ಹಂಚಿಕೊಂಡಿದ್ದರು.

ಇದಕ್ಕೆ ಕಿಡಿಕಾರಿರುವ ಸಿದ್ಧಾರ್ಥ್ ತಮ್ಮ ಟ್ವೀಟರ್‍ನಲ್ಲಿ ನೇರವಾಗಿ ಅಕ್ಷಯ್ ಕುಮಾರ್ ಸಂದರ್ಶನ ಅತ್ಯಂತ ಕಳಪೆಯಾಗಿತ್ತು. ಅವರ ಸಂವಾದ ನಡೆಸಿದ ರೀತಿ ಸರಿ ಇರಲಿಲ್ಲ ಅ್ಯಕ್ಷನ್ ಸ್ಟಾರ್ ಎಂದು ಕೊಚ್ಚಿಕೊಳ್ಳುವ ಅಕ್ಷಯ್ ಕುಮಾರ್ ಮೌಲ್ಯ ಅರಿಯದ ವಿಲನ್ ಎಂದು ಟೀಕಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ