ನಿಷೇಧಿತ ಸಿಖ್ ಸಂಘಟಣೆಗಳ ವಿರುದ್ಧ UAPA ಕೇಸ್
ನವದೆಹಲಿ, ಜ.28: ಗಣರಾಜ್ಯೋತ್ಸವ ದಿನದಂದು ರಾಜಧಾನಿ ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಕಿಸಾನ್ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ನಿಷೇಧಿತ ಸಿಖ್ ಸಂಘಟನೆ (ಎಸ್ಎಫ್ಜೆ) ಭಾಗವಹಿಸಿ ಹಿಂಸಾಚಾರಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಎಸ್ಎಫ್ಜೆ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆ (ಯುಎಪಿಎ) ಮತ್ತು ದೇಶದ್ರೋಹ ಸಮರ್ಥನೆ ರೆಫ್ರೆಂಡಮ್-2020ರ ಅಡಿಯಲ್ಲಿ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ರೈತ ಪ್ರತಿಭಟನಾಕಾರರ ನಡುವೆ ಸೇರಿಕೊಂಡು ಮಾರಕಾಸ್ತ್ರಗಳನ್ನು ಜಳಪಿಸುವ ಮೂಲಕ ಪ್ರತ್ಯೇಕ ಸಿಖ್ ರಾಜ್ಯಕ್ಕೆ ಒತ್ತಾಯಿಸಿರುವ ಘಟನೆ ನಡೆದಿದೆ. ಎಸ್ಎಫ್ಜೆ ವಿರುದ್ಧ ಪೊಲೀಸರು ಜ.8, 2021 ರಂದು ಕೇಸು ದಾಖಲಿಸಿದ್ದಾರೆ.
ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಇಂಟೆಲಿಜೆನ್ಸ್ ಏಜೆನ್ಸಿ ಮಾಹಿತಿ ಪ್ರಕಾರ ಎಸ್ಎಫ್ಜೆ ಬೆಂಬಲಿತ ಸಿಖ್ಖರು ದೆಹಲಿಯಲ್ಲಿ ನಡೆಯಲಿರುವ ರೈತರ ಟ್ರ್ಯಾಕ್ಟರ್ ಪ್ರತಿಭಟನೆಯಲ್ಲಿ ಸೇರಿಕೊಂಡು ದಾಂಧಲೆ ಸೃಷ್ಟಿಸುವುದಾಗಿದೆ ಎಂಬ ಮಾಹಿತಿ ಪೊಲೀಸರಿಗೆ ವರದಿ ಪ್ರಕಾರ ಅವರ ಯೋಜನೆ ಪೊಲೀಸ್ ವಿಶೇಷ ಘಟಕ ಎಂದು ತಿಳಿದುಬಂದಿದೆ.