ಸಿಕ್ಕಿಂನಲ್ಲಿ 24 ವರ್ಷ ಸಿಎಂ ಆಗಿದ್ದ ಚಿಮ್ಲಿಂಗ್ ಯುಗಾಂತ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ಗ್ಯಾಂಗ್ಟಕ್, ಮೇ 24- ಈಶಾನ್ಯ ಭಾರತದ ಅಷ್ಟ ಸಹೋದರಿ ರಾಜ್ಯಗಳಲ್ಲಿ ಒಂದಾದ ಸಿಕ್ಕಿಂ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ನಿನ್ನೆ ತಡರಾತ್ರಿ ಪ್ರಕಟಗೊಂಡಿದ್ದು, ಸಿಕ್ಕಿಂ ಡೆಮೊಕ್ರಾಟಿಕ್ ಫ್ರಂಟ್(ಎಸ್‍ಡಿಎಫ್) ಸೋಲು ಅನುಭವಿಸಿದೆ. ಇದರೊಂದಿಗೆ 24 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಪವನ್ ಕುಮಾರ್ ಚಿಮ್ಲಿಂಗ್ ಯುಗಾಂತ್ಯವಾಗಿದೆ.

ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ(ಎಸ್‍ಕೆಎಂ) ಗೆಲುವು ಸಾಧಿಸಿದ್ದು, ಐದು ಬಾರಿ ಸಿಕ್ಕಿಂ ಮುಖ್ಯಮಂತ್ರಿಯಾಗಿ ಸುದೀರ್ಘ ಆಡಳಿತ ನಡೆಸಿದ್ದ ಚಿಮ್ಲಿಂಗ್ ಈ ಸೋಲಿನಿಂದ ಕಂಗೆಟ್ಟು ನಿರ್ಗಮಿಸಿದ್ದಾರೆ.

2013ರಲ್ಲಿ ಅಸ್ತಿತ್ವಕ್ಕೆ ಬಂದ ಎಸ್‍ಕೆಎಂ 17 ಸ್ಥಾನಗಳನ್ನು ಗಳಿಸಿದೆ. 32 ಸದಸ್ಯ ಬಲದ ಸಿಕ್ಕಿಂನಲ್ಲಿ ಸರ್ಕಾರ ರಚಿಸಲು ಅಗತ್ಯವಾದ ಮ್ಯಾಜಿಕ್ ನಂಬರ್ (16)ಗಿಂತಲೂ ಇದು ಒಂದು ಸ್ಥಾನ ಹೆಚ್ಚಿಗೆ ಗಳಿಸಿದೆ.

ನಮ್ಚಿ ಸಿಂಗ್‍ಥಾಂಗ್ ಮತ್ತು ಪೊಕ್‍ಲಾಕ್ ಕಾಮ್‍ರಂಗ್ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಚಿಮ್ಲಿಂಗ್ ಅವೆರಡರಲ್ಲೂ ಜಯ ಸಾಧಿಸಿದ್ದಾರೆ.  ಚಿಮ್ಲಿಂಗ್ 1994ರಿಂದಲೂ 24 ವರ್ಷಗಳಿಗಿಂತ ಹೆಚ್ಚು ಅವಧಿಗೆ ಸಿಕ್ಕಿಂ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ