ರೇಷ್ಮೆ ಬೆಳೆದು ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳು

ಈ ಸುದ್ದಿಯನ್ನು ಶೇರ್ ಮಾಡಿ

Silk-Worm

ಚನ್ನಪಟ್ಟಣ, ಜು.11-ರೇಷ್ಮೆ ಬೆಳೆಯ ಬೆಲೆ ಕುಸಿತದಿಂದ ರೇಷ್ಮೆ ಬೆಳೆ ನಂಬಿ ಬದುಕು ನಡೆಸುತ್ತಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ರೇಷ್ಮೆ ಮಾರುಕಟ್ಟೆಯಲ್ಲಿ ಕಳೆದ 2 ತಿಂಗಳಿಂದ ರೇಷ್ಮೆ ಗೂಡಿನ ಬೆಲೆ ಸಂಪೂರ್ಣ ಕುಸಿತವಾಗಿದ್ದು, ಕಳೆದ 2 ತಿಂಗಳ ಹಿಂದೆ ರೈತನೊಬ್ಬ ಬೆಳೆದ ರೇಷ್ಮೆ ಗೂಡಿಗೆ ಪಟ್ಟಣದ ಮಾರುಕಟ್ಟೆಯಲ್ಲಿ 515 ರೂ ಬೆಲೆ ಪಡೆದಿದ್ದಾನೆ. ಆದರೆ ಅದೇ ರೈತ ಈ ದಿನ ತಂದಿದ್ದ ರೇಷ್ಮೆ ಬೆಳೆಗೆ ಮಾರುಕಟ್ಟೆಯಲ್ಲಿ ಸಿಕ್ಕ ಬೆಲೆ ಕೇವಲ 210 ರೂ. ಗಳು ಮಾತ್ರ. ಆ ರೈತನ ರೇಷ್ಮೆ ಕೃಷಿ ಚಟುವಟಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ಉತ್ತಮ ಬೆಳೆಯನ್ನು ತೆಗೆದಿದ್ದರೂ ಸಹ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿಲ್ಲ.

ರೇಷ್ಮೆ ಮಾರುಕಟ್ಟೆಯಲ್ಲಿನ ಇ-ಹರಾಜು ಪ್ರಕ್ರಿಯೆಯಲ್ಲಿ ಇಂದಿನ ದರ ಕನಿಷ್ಟ 150 ರೂ ಬೆಲೆ ನಿಗಧಿಯಾಗಿದ್ದು, ಗರಿಷ್ಟ 252 ರೂ. ಮಾರಾಟವಾಗಿದೆ. ಈ ಬೆಲೆ ರೈತರು ರೇಷ್ಮೆ ಬೆಳೆಗೆ ಹಾಕಿರುವ ಬಂಡವಾಳವನ್ನು ಹಿಂದಿರುಗಿಸುವುದಿಲ್ಲ ಎಂದು ರೇಷ್ಮೆ ಬೆಳೆಗಾರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Facebook Comments

Sri Raghav

Admin