ಚುನಾವಣಾ ಕಣದಲ್ಲಿ ಕಾಂಚಾಣ ಕುಣಿತ : ಮತದಾರರ ಅಕೌಂಟ್‌ಗೆ ಹಣ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.23- ರಾಜ್ಯದ ಗಮನ ಸೆಳೆದಿರುವ ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಝಣ ಝಣ ಕಾಂಚಾಣದ ಸದ್ದು ಎಲ್ಲೆಡೆ ಜೋರಾಗಿ ಕೇಳಿ ಬರುತ್ತಿದೆ. ಮತದಾರರನ್ನು ಓಲೈಸಿಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳು ಎಗ್ಗಿಲ್ಲದೆ ಹಣ, ಹೆಂಡ ಸೇರಿದಂತೆ ನಾನಾ ರೀತಿಯ ಆಮಿಷಗಳನ್ನು ಎರಡೂ ಕ್ಷೇತ್ರಗಳಲ್ಲಿ ಒಡ್ಡುತ್ತಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ತಮ್ಮ ಶಕ್ತಾನುಸಾರ ಮತದಾರರನ್ನು ಹಣದ ಆಮಿಷದ ಮೂಲಕವೇ ಮತದಾರರನ್ನು ಖರೀದಿಸಲು ಪೈಪೋಟಿಗಿಳಿದಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. ಅದರಲ್ಲೂ ಆಡಳಿತ ಪಕ್ಷ ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯಾಗಿರುವುದರಿಂದ ಒಂದೊಂದು ಮತಕ್ಕೆ 2ರಿಂದ 2500 ರೂ. ಹಣವನ್ನು ಹಂಚಿಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಬಿಜೆಪಿಗೆ ಸವಾಸೇರು ಎನ್ನುವಂತೆ ಕಾಂಗ್ರೆಸ್ ಕೂಡ ಹಣ ಹಂಚಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಪ್ರತಿ ಮತಕ್ಕೆ ಒಂದರಿಂದ 1500 ರೂ. ಆಮಿಷವೊಡ್ಡಲಾಗುತ್ತಿದೆ. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಜೆಡಿಎಸ್ ಕೊಂಚ ಹಣ ಹಂಚಿಕೆಯಲ್ಲಿ ಹಿಂದೆ ಬಿದ್ದಿದ್ದು, ಆಯ್ದ ಮತದಾರರಿಗೆ ಮಾತ್ರ ಹಣ ವಿತರಣೆಯಾಗುತ್ತದೆ.

# ಮತದಾರರ ಖಾತೆಗೆ ಹಣ..!
ಚುನಾವಣಾ ಆಯೋಗ ಚಾಪೆ ಕೆಳಗೆ ತೂರಿದರೆ ರಂಗೋಲಿ ಕೆಳಗೆ ತೂರುವ ಚಾಕಚಕ್ಯತೆಯನ್ನು ಅರಿತಿರುವ ರಾಜಕೀಯ ಪಕ್ಷಗಳ ನೇರವಾಗಿ ಹಣ ಹಂಚಿದರೆ ಸಿಕ್ಕಿ ಬೀಳಬಹುದೆಂಬ ಭೀತಿಯಿಂದ ಹಣ ಹಂಚಲು ತಮ್ಮದೇ ಆದ ಮಾರ್ಗೋಪಾಯವನ್ನು ಕಂಡುಕೊಂಡಿದ್ದಾರೆ.ಹಣವನ್ನು ಬಹಿರಂಗವಾಗಿ ಹಂಚಿಕೆ ಮಾಡಿದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿ ಸಿಕ್ಕಿಬೀಳಬಹುದೆಂಬ ಕಾರಣಕ್ಕಾಗಿ ಮತದಾರರ ಖಾತೆಗಳಿಗೆ ನೇರವಾಗಿಯೇ ಬ್ಯಾಂಕ್ ಮೂಲಕ ಹಣ ಜಮೆ ಮಾಡಲಾಗುತ್ತಿದೆ.

ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯನ್ನು ಪಡೆಯುತ್ತಿರುವ ವಿವಿಧ ಪಕ್ಷಗಳ ಮುಖಂಡರು ಬ್ಯಾಂಕ್ ಮೂಲಕ ಹಣವನ್ನು ಖಾತೆದಾರರಿಗೆ ಹಾಕುತ್ತಿದ್ದಾರೆ.ಈ ಹಿಂದೆಯೂ 2018 ಮತ್ತು ಉಪಚುನಾವಣೆ ಸಂದರ್ಭದಲ್ಲಿ ಯಾವ ತಂತ್ರವನ್ನು ಅನುಸರಿಸಲಾಗಿತ್ತೋ ಅದೇ ತಂತ್ರವನ್ನು ಈಗಲೂ ಅನುಸರಿಸಲಾಗುತ್ತಿದೆ ಎಂದು ಮತದಾರರೇ ನೇರವಾಗಿ ಆರೋಪ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಮತದಾನಕ್ಕೆ ಎರಡು ದಿನ ಇರುವಾಗ ಕ್ಷೇತ್ರದಲ್ಲಿ ಹಣ, ಹೆಂಡ ಸದ್ದು ಮಾಡುತ್ತಿತ್ತು. ಆದರೆ ಈಗ ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್ ಫೆÇೀನ್‍ಗಳು ಇರುವ ಕಾರಣ ಹಣ ಹಂಚಲು ಹಿಂದೇಟು ಹಾಕುತ್ತಿದ್ದಾರೆ. ಹಿಗಾಗಿಯೇ ಬ್ಯಾಂಕ್ ಖಾತೆಗಳ ಮೂಲಕವೇ ಹಣ ಜಮೆ ಮಾಡಲಾಗುತ್ತಿದೆ.
ಈ ಉಪಚುನಾವಣೆಯಲ್ಲಿ ಹೆಂಡ ಹಂಚಿಕೆ ಕಡಿಮೆಯಾಗುತ್ತಿದ್ದು, ಬಹುತೇಕ ಮತದಾರರು ನಗದು ಹಂಚಿಕೆ ಕಡೆ ಹೆಚ್ಚು ಗಮನ ಕೊಟ್ಟಿದ್ದಾರೆ.

# ಸರ್ಕಾರಿ ವಾಹನಗಳಲ್ಲೇ ಹಣ ರವಾನೆ:
ಖಾಸಗಿ ವಾಹನಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿರುವುದರಿಂದ ಸರ್ಕಾರಿ ವಾಹನಗಳಲ್ಲೇ ವ್ಯವಸ್ಥಿತವಾಗಿ ಹಣವನ್ನು ಹಂಚಿಕೆ ಮಾಡಲಾಗುತ್ತಿದೆ.ಯಾವುದೇ ಪಕ್ಷ ಆಡಳಿತದಲ್ಲಿದ್ದಾಗ ಖಾಸಗಿ ವಾಹನಗಳಿಗಿಂತ ಸರ್ಕಾರಿ ವಾಹನಗಳಲ್ಲೇ ನಂಬಿಗಸ್ಥ ಅಕಾರಿಗಳ ಮೂಲಕ ತಲುಪಿಸಬೇಕಾದವರಿಗೆ ಹಣವನ್ನು ರವಾನೆ ಮಾಡಲಾಗುತ್ತದೆ.

ಈಗ ಹಾನಗಲ್ ಮತ್ತು ಸಿಂಧಗಿಯಲ್ಲೂ ಎಲ್ಲ ಪಕ್ಷಗಳು ಇದೇ ತಂತ್ರವನ್ನು ಮಾಡುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಿತಿಗೆ ಹೋಲಿಸಿದರೆ ಬಿಜೆಪಿ ಅಬ್ಬರ ಜೋರಾಗಿದೆ ಎಂಬುದು ಮತದಾರರ ಅಭಿಪ್ರಾಯ.

Facebook Comments

Sri Raghav

Admin