ನಾಳೆ ಮಸ್ಕಿಯಲ್ಲಿ ಸಿಂಗರ್ ಮಂಗ್ಲಿ ಹವಾ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.12- ಇತ್ತೀಚೆಗೆ ಟಾಲಿವುಡ್‍ನಲ್ಲಿ ಭಾರೀ ಧೂಳೆಬ್ಬಿಸಿರುವ ಕಣ್ಣೆ ಅದರಿಂದೆ ಹಾಡಿನ ಖ್ಯಾತ ಗಾಯಕಿ ಮಂಗ್ಲಿ ನಾಳೆ ಮಸ್ಕಿಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ. ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರವಾಗಿ ನಾಳೆ ಕ್ಷೇತ್ರದ ವಿವಿಧೆಡೆ ಮಂಗ್ಲಿ ಅವರು ರೋಡ್ ಶೋ ನಡೆಸಿ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ.

ಮಸ್ಕಿ ಪಟ್ಟಣ ಹಾಗೂ ಕೆಲವು ತಾಂಡಗಳಲ್ಲಿ ಪ್ರಚಾರ ನಡೆಸಲಿರುವ ಅವರು, ಬಿಜೆಪಿಯ ಗುರುತು ಕಮಲಕ್ಕೆ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡುವರು. ಕನ್ನಡದ ಡಿ ಬಾಸ್ ಎಂದೇ ಖ್ಯಾತಿಯಾಗಿರುವ ದರ್ಶನ್ ಅಭಿನಯದ ರಾಬರ್ಟ್ ಚಿತ್ರವು ತೆಲುಗಿನಲ್ಲಿ ಬಿಡುಗಡೆಯಾಗುವ ಸಂದರ್ಭದಲ್ಲಿ ಮಂಗ್ಲಿ ಹಾಡಿದ್ದ ಕಣ್ಣೆ ಅದರಿಂದೆ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದೀಗ ಎಲ್ಲೆಡೆ ಅವರ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದು, ನಾಳೆ ಮಸ್ಕಿಗೆ ಆಗಮಿಸುತ್ತಿರುವುದನ್ನು ಅಭಿಮಾನಿಗಳು ಕಾತುರದಿಂದ ನೋಡುತ್ತಿದ್ದಾರೆ.

Facebook Comments