ನಿಗದಿತ ಸಮಯದಲ್ಲಿ ಶಿರಸಿ ಮೇಲ್ಸೇತುವೆ ಕಾಮಗಾರಿ ಪೂರ್ಣ: ಮೇಯರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.6-ನಿಗದಿತ ಸಮಯದಲ್ಲಿ ಸಿರ್ಸಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.ಸಿರ್ಸಿ ಮೇಲ್ಸೇತುವೆ (ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ) ರಸ್ತೆ ದುರಸ್ತಿ ಕಾಮಗಾರಿಯನ್ನು ಆಯುಕ್ತ ಅನಿಲ್ ಕುಮಾರ್, ಮತ್ತಿತರ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗದಿತ ಸಮಯದಲ್ಲಿ ಕೆಲಸವನ್ನು ಪೂರ್ಣಗೊಳಿಸುವ ಉದ್ದೇಶದಿಂದ ಸಿರ್ಸಿ ಮೇಲ್ಸೇತುವೆ, ದಾಸಪ್ಪ ಆಸ್ಪತ್ರೆ ಹಾಗೂ ಸ್ಮಾರ್ಟ್ ಪಾರ್ಕಿಂಗ್ ಸ್ಥಳ ಪರಿಶೀಲನೆ ಮಾಡಿದ್ದೇವೆ ಎಂದು ಹೇಳಿದರು.

ಮೈಸೂರು ರಸ್ತೆ ಸಿರ್ಸಿ ವೃತ್ತದ ಮೇಲ್ಸೇತುವೆ ಒಂದು ಪಾಶ್ರ್ವವನ್ನು ನಿಗದಿತ ವೇಳೆಗೆ ಮುಗಿಸಿಕೊಡಬೇಕು ಎಂದು ಗುತ್ತಿಗೆದಾರರಿಗೆ ಆದೇಶಿಸಿದ್ದೇವೆ. ಸಂಚಾರಿ ಪೊಲೀಸರು 4 ದಿನದೊಳಗಾಗಿ ಪರ್ಯಾಯ ಸಂಚಾರಿ ಮಾರ್ಗ ಕಲ್ಪಿಸಿಕೊಡಲಿದ್ದಾರೆ. ಕಾಮಗಾರಿ ಪ್ರಾರಂಭಿಸಿದ 30 ದಿನದೊಳಗಾಗಿ ಮುಗಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿ ಪಾಲಿಕೆಯ ಖಾಲಿ ಜಾಗದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಜೊತೆಗೆ ದಾಸಪ್ಪ ಆಸ್ಪತ್ರೆಯನ್ನು ಸರ್ಕಾರ ಹಾಗೂ ಶಾಸಕರ ಅನುದಾನದಲ್ಲಿ ನವೀಕರಣ ಮಾಡಲು ಕ್ರಮವಹಿಸಲಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ನವೀಕರಣ ಮಾಡಲು ಎಷ್ಟು ಹಣ ವೆಚ್ಚವಾಗದಲಿದೆ ಎಂಬುದರ ಬಗ್ಗೆ ವಿಸ್ತೃತ ಯೋಜನಾ ವರದಿ(ಡಿ.ಪಿ.ಆರ್) ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ನಗರದ 85 ಕಡೆ ಸೆಂಟ್ರಲ್ ಪಾರ್ಕಿಂಗ್ ಸರ್ವೀಸಸ್ ಸಂಸ್ಥೆ ಜೊತೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಯಲ್ಲಿ ಸ್ಮಾರ್ಟ್ ಪಾರ್ಕಿಂಗ್ ಮಾಡುವ ಸಲುವಾಗಿ ಪಾಲಿಕೆ ಆಯುಕ್ತರ ಜೊತೆ ಕಸ್ತೂರು ಬಾ ರಸ್ತೆ ಸ್ಥಳ ಪರಿಶೀಲನೆ ಮಾಡಲಾಯಿತು. ಗುತ್ತಿಗೆ ಪಡೆದಿರುವ ಸಂಸ್ಥೆಗೆ ಕಸ್ತೂರು ಬಾ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಪಾರ್ಕಿಂಗ್ ನಿಲುಗಡೆ ಪ್ರಾರಂಭಿಸುವಂತೆ ಈ ವೇಳೆ ಗೌತಮ್‍ಕುಮಾರ್ ಸೂಚನೆ ನೀಡಿದರು.

ಸಿರ್ಸಿ ಮೇಲ್ಸೇತುವೆಯ ಒಂದು ಪಾಶ್ರ್ವಕ್ಕೆ ಈಗಾಗಲೇ ಡಾಂಬರೀಕಣ ಮಾಡಲಾಗಿದ್ದು, ಮತ್ತೊಂದು ಪಾಶ್ರ್ವದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲು ಸಂಚಾರಿ ಪೆÇಲೀರು 4 ದಿನದೊಳಗಾಗಿ ಅನುಮತಿ ನೀಡಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ತಿಳಿಸಿದರು. ಅವರು ಅನುಮತಿ ನೀಡಿದ ಬಳಿಕ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಕಾಮಗಾರಿ ಪ್ರಾರಂಭಿಸುವ ವೇಳೆ ದುರಸ್ತಿ ಕಾಮಗಾರಿ ನಡೆಸುವ ಬಗ್ಗೆ ಹಾಗೂ ವಾಹನಗಳ ಮಾರ್ಗ ಬದಲಾವಣೆ ಬಗ್ಗೆ ನಾಮಫಲಕಗಳನ್ನು ಅಳವಡಿಸಿ. ಕಾಮಗಾರಿ ನಡೆಯುವ ಮಾರ್ಗದಲ್ಲಿ ಬ್ಯಾರಿಕೇಡ್ ಅಳವಡಿಸಿ, ರಾತ್ರಿ ವೇಳೆ ದೀಪಗಳನ್ನು ಅಳವಡಿಸಬೇಕು. ಯಾರಿಗಾದರೂ ಸಮಸ್ಯೆ ಆದರೆ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅನಿಲ್‍ಕುಮಾರ್ ತಿಳಿಸಿದರು.

ಈ ವೇಳೆ ಶಾಸಕ ಉದಯ್ ಬಿ ಗರುಡಾಚಾರ್, ಬಿಬಿಎಂಪಿ ಜೆಡಿಎಸ್ ಪಕ್ಷದ ನಾಯಕರಾದ ನೇತ್ರಾ ನಾರಾಯಣ್, ಪಾಲಿಕೆ ವಿಶೇಷ ಆಯುಕ್ತರಾದ ರವಿಕುಮಾರ್ ಸುರಪುರ, ಲೋಕೇಶ್, ಜಂಟಿ ಆಯುಕ್ತ ವೀರಭದ್ರಸ್ವಾಮಿ, ಚಿದಾನಂದ್, ಮುಖ್ಯ ಅಭಿಯಂತರುಗಳಾದ ಪ್ರಸಾದ್, ಮುದ್ದುರಾಜ್, ವಿಶ್ವನಾಥ್, ಅಧೀಕ್ಷಕ ಅಭಿಯಂತರರಾದ ಲೋಕೇಶ್,ಬಸವರಾಜ್ ಕಬಾಡೆ, ಜಂಟಿ ಪೊಲೀಸ್ ಆಯುಕ್ತ(ಸಂಚಾರ)ರಾದ ಡಾ. ರವಿಕಾಂತೇಗೌಡ, ಸಂಚಾರಿ ಪೊಲೀಸರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments