ಕೃಷಿ ಹೊಂಡಕ್ಕೆ ಬಿದ್ದು ಅಕ್ಕ-ತಂಗಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ, ನ.1- ಕೃಷಿ ಹೊಂಡಕ್ಕೆ ಬಿದ್ದು ಅಕ್ಕ-ತಂಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ವೇಲಗಲಬುರ್ರೆ ಗ್ರಾಮದಲ್ಲಿ ನಡೆದಿದೆ. ಚೈತ್ರಾ (23)ಹಾಗೂ ಅಮೃತ (21) ಮೃತಪಟ್ಟ ಅಕ್ಕ-ತಂಗಿ. ತೋಟದಲ್ಲಿ ಚೋಳದ ಸೆಪ್ಪೆ ಕುಯ್ಯಲು ಹೋಗಿ ಕೈ-ಕಾಲು ತೊಳೆಯಲು ಅಲ್ಲೇ ಇದ್ದ ಕೃಷಿ ಹೊಂಡದ ಬಳಿ ಹೋಗಿದ್ದಾರೆ.

ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments