ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ 41 ತಿಂಗಳ ಜೈಲು ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಫೆ.20 (ಪಿಟಿಐ)- ಜನಪ್ರಿಯ ತಾಲೀಮು ಪೂರಕಗಳು ಹಾಗೂ ತೂಕ ಇಳಿಸುವ ನೈಜ ಪದಾರ್ಥಗಳನ್ನು ಮರೆಮಾಚುವ ಮೂಲಕ ಅಕ್ರಮ ಮಾರಾಟದ ಅಪರಾಧದ ಮೇಲೆ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಅಮೆರಿಕದ ನ್ಯಾಯಾಲಯ 41 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಜೈಲು ಸೇರಿರುವ ವ್ಯಕ್ತಿ ಸಿತೇಶ್ ಪಟೇಲ್ (37) ಎಸ್.ಕೆ. ಲ್ಯಾಬೊರೇಟರೀಸ್ ಉಪಾಧ್ಯಕ್ಷನಾಗಿದ್ದು ಹಲವು ವರ್ಷಗಳಿಂದ ಕ್ಯಾಲಿಫೋರ್ನಿಯಾದ ಇರ್ವಿನ್‍ನಲ್ಲಿ ವಾಸಿಸುತಿದ್ದರು.

ಪಟೇಲ್, ಅಮೆರಿಕದ ಡಲ್ಲಾಸ್ ಮೂಲದ ಯುಎಸ್‍ಪ್ಲ್ಯಾಬ್ಸ್ ಕಂಪನಿಯ ಜನಪ್ರಿಯ ತಾಲೀಮು ಮತ್ತು ತೂಕ ಇಳಿಸುವ ಪೂರಕಗಳಾದ ಜ್ಯಾಕ್ 3ಡಿ ಮತ್ತು ಆಕ್ಸಿಲೆಟ್ ಪ್ರೋ ಎಂದು ಕರೆಯಲ್ಪಡುವ ಪದಾರ್ಥಗಳನ್ನು ಅಕ್ರಮವಾಗಿ ಅಭಿವೃದ್ಧಿಪಡಿಸುವಲ್ಲಿ ಹಾಗೂ ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪ್ರಕರಣದಲ್ಲಿ ಸಿಲುಕಿದ್ದರು.

ಎಸ್‍ಕೆ ಲ್ಯಾಬೊರೇಟರೀಸ್‍ನ ಮಾಜಿ ಉಪಾಧ್ಯಕ್ಷ ಸಿತೇಶ್ ಪಟೇಲ್ ಅವರಿಗೆ ಟೆಕ್ಸಾಸ್‍ನ ಫೆಡರಲ್ ನ್ಯಾಯಾಲಯವು ಶುಕ್ರವಾರ ಶಿಕ್ಷೆ ವಿಧಿಸಿದೆ ಎಂದು ಉತ್ತರ ಜಿಲ್ಲೆಯ ಆ್ಯಕ್ಟಿಂಗ್ ಯುಎಸ್ ಅಟಾರ್ನಿ ಪ್ರೀರಾಕ್ ಶಾ ಹಾಗೂ ಆ್ಯಕ್ಟಿಂಗ್ ಅಸಿಸ್ಟೆಂಟ್ ಅಟಾರ್ನಿ ಜನರಲ್ ಬಿಯಾನ್ ಬಾಯ್ನಟನ್ ಘೋಷಿಸಿದರು.

ಜನಪ್ರಿಯ ಬ್ರಾಂಡ್‍ನ ಆಹಾರ ಪದಾರ್ಥವನ್ನು ತಪ್ಪಾಗಿ ಮಾಡಿ ಅಂತರರಾಜ್ಯ ಮಾರಾಟದ್ದಲ್ಲದೆ, ಪೂರೈಸಿದ ಪಿತೂರಿಗೆ ಸಂಬಂಧಪಟ್ಟಂತೆ 2019ರಲ್ಲಿ ತಪ್ಪೋಪ್ಪಿಕೊಂಡಿದ್ದ ಪಟೇಲ್ ಮತ್ತು ಸಹಚರರ ವಿರುದ್ಧ ಕೇಸು ದಾಖಲಾಗಿತ್ತು. ಇಷ್ಟೇ ಅಲ್ಲದೆ, ಕಾನೂನು ಜಾರಿ ಮತ್ತು ನಿಯಂತ್ರಕ ಏಜೆನ್ಸಿ ಗಮನವನ್ನು ಬೇರೆಡೆ ಸೆಳೆಯಲು ಸುಳ್ಳು ಮತ್ತು ದಾರಿ ತಪ್ಪಿಸುವ ಲೇಬಲಿಂಗ್ ವಸ್ತುಗಳನ್ನು ಆಮದು ಮಾಡಿಕೊಂಡಿರುವುದಾಗಿಯೂ ಒಪ್ಪಿಕೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಟೇಲ್ ಅವರ ಹಿಂದಿನ ಕಂಪನಿ ಎಸ್‍ಕೆ ಲ್ಯಾಬೊರೇಟರೀಸ್‍ನ ಆರು ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಯುಎಸ್ ಜಿಲ್ಲಾ ನ್ಯಾಯಾಧೀಶ ಸ್ಯಾಮ್ ಎ ಲಿಂಡ್ಸೆ ಅವರು ಆರೋಪಿ ಪಟೇಲ್‍ಗೆ ಶುಕ್ರವಾರ 41 ತಿಂಗಳ ಜೈಲು ಶಿಕ್ಷೆ ಹಾಗೂ ಒಂದು ವರ್ಷದ ಮೇಲ್ವಿಚಾರಣೆ ಶಿಕ್ಷೆ ವಿಧಿಸಿದೆ.

Facebook Comments