ಬೇಸಿಗೆಯ ಚರ್ಮದ ಸಮಸ್ಯೆಗೆ ಇಲ್ಲಿದೆ ಪರಿಹಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೇಸಿಗೆ ಬಂತು ಅಂದರೆ ಸಾಕು ಸಾಕಷ್ಟು ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಫಂಗಸ್​ ಇನ್​ಫೆಕ್ಷನ್ಸ್​ನಂತಹ ಸಮಸ್ಯೆಗಳು ಹೆಚ್ಚಾಗಿ ನಮ್ಮನ್ನ ಕಾಡುತ್ತಿರುತ್ತದೆ. ಇನ್ನು ಆಯ್ಲಿ ಸ್ಕಿನ್ ಪ್ರಾರಂಬ ಕೂಡ ಬೇಸಿಗೆಯಲ್ಲೇ ಹೆಚ್ಚಾಗಿ ಕಂಡು ಬರುವುದರಿಂದ ಮೊಡವೆ ಸಮಸ್ಯೆಗಳು ಕೂಡಾ ಹೆಚ್ಚಾಗಿರುತ್ತದೆ.

ಹಾಗಾದ್ರೆ ಬೇಸಿಗೆಯಲ್ಲಿ ಚರ್ಮದ ರಕ್ಷಣೆ ಹೇಗಿರಬೇಕು ಎಂಬುದಕ್ಕೆ ಇಲ್ಲಿವೆ ಕೆಲವು ಸಾತಳ ಪರಿಹಾರಗಳು. ಬೇಸಿಗೆಯಲ್ಲಿ ದಿನಕ್ಕೆ ಎರಡು ಮೂರು ಬಾರಿ ಕಡಲೆ ಹಿಟ್ಟಿನಿಂದ ಮುಖ ತೊಳೆದರೆ ಮೊಡವೆಗಳಿಂದ ದೂರವಿರಬಹುದು.

ಚರ್ಮ ಒಣಗಿ ಸುಕ್ಕು ಕಟ್ಟುವುದನ್ನು ತಡೆಗಟ್ಟಲು ಪ್ರತಿದಿನ ಎರಡು ಬಾರಿ ಒಂದು ಬಟ್ಟಲು ಮೊಸರಿಗೆ ಅರ್ಧ ಚಮಚ ಸಕ್ಕರೆ, ಅರ್ಧ ಚಮಚ ಉಪ್ಪು ಸೇರಿಸಿ ಕುಡಿಯಬೇಕು. ಕಾಫಿ – ಟೀಗಳಿಗಿಂತ ಜ್ಯೂಸನ್ನು ಸೇವಿಸಿದರೆ ದೇಹವನ್ನು ತಂಪಾಗಿಡಬಹುದು.  ಸಾಧ್ಯವಾದಷ್ಟು ಕಾಟನ್ ಉಡುಪನ್ನೇ ಧರಿಸಿ. ಇದರಿಂದ ದೇಹದ ಉಷ್ಣವನ್ನು ತಡೆಯಬಹುದು.

ಕೂದಲನ್ನು ಬಿಚ್ಚಿ ಬಿಡುವುದರಿಂದ ಬೆವರುವುದು ಜಾಸ್ತಿಯಾಗುತ್ತದೆ. ಕೂದಲನ್ನು ಪೋನಿಟೈಲ್ ಅಥವಾ ಜಡೆ ಹೆಣೆಯಿರಿ. ಸಂಜೆಯ ತಿಂಡಿಗೆ ಕರಿದ ಪದಾರ್ಥಗಳಿಗಿಂತ ಫ್ರೂಟ್ ಸಾಲಡ್, ವೆಜಿಟೇಬಲ್ ಸಾಲಡ್ ಗಳನ್ನು ತಿನ್ನುವುದು ಒಳ್ಳೆಯದು.

ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಹಿತಕರವೆನಿಸಿದರೂ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದು. ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ. ಹಾಗೇ ಹೋಗಲೇ ಬೇಕಾದರೆ ಕ್ಯಾಪ್, ಸ್ಕಾರ್ಫ್ ಧರಿಸಿ ಇಲ್ಲವೇ ಕೊಡೆಯನ್ನು ಬಳಸುವುದು ಉತ್ತಮ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ