‘ಗೋಡ್ಸೆ ಪ್ರಥಮ ಹಿಂದೂ ಉಗ್ರ’ ಎಂದಿದ್ದ ಕಮಲ್‌ ಮೇಲೆ ಚಪ್ಪಲಿ ಎಸೆತ

ಈ ಸುದ್ದಿಯನ್ನು ಶೇರ್ ಮಾಡಿ

ಮಧುರೈ, ಮೇ 16- ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಸ್ವಾತಂತ್ರ್ಯ ಭಾರತದ ಪ್ರಥಮ ಭಯೋತ್ಪಾದಕ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಖ್ಯಾತ ನಟ ಹಾಗೂ ರಾಜಕಾರಣಿ ಕಮಲಹಾಸನ್ ಅವರ ಮೇಲೆ ಚಪ್ಪಲಿ ಎಸೆದಿರುವ ಘಟನೆ ನಿನ್ನೆ ರಾತ್ರಿ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.

ಈ ಸಂಬಂಧ ಬಿಜೆಪಿ ಮತ್ತು ಹನುಮಾನ್ ಸೇನೆಯ 11 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಧುರೈ ವಿಧಾನಸಭಾ ಕ್ಷೇತ್ರದ ತಿರುಪ್ಪಾನ್‍ಡ್ರೂಂ ಪ್ರದೇಶದಲ್ಲಿ ನಿನ್ನೆ ರಾತ್ರಿ ಕಮಲಹಾಸನ್ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾಗ ಅವರ ಮೇಲೆ ಬಿಜೆಪಿ ಹಾಗೂ ಹನುಮಾನ್ ಸೇನೆಯ ಕಾರ್ಯಕರ್ತರು ಚಪ್ಪಲಿಗಳನ್ನು ತೂರಿದ್ದಾರೆ.

ಆದರೆ ಈ ಚಪ್ಪಲಿಗಳು ಕಮಲಹಾಸನ್ ಮೇಲೆ ಬೀಳದೆ ವೇದಿಕೆ ಮುಂದೆ ಹಾಗೂ ಸಭಿಕರ ಮೇಲೆ ಬಿದ್ದವು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು 11 ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡು ಕ್ರಮ ಜರುಗಿಸಿದ್ದಾರೆ.

ಕಮಲ್ ಸ್ಪಷ್ಟೀಕರಣದೇಶದ ಪ್ರಥಮ ಭಯೋತ್ಪಾದಕ ನಾಥೂರಾಮ್ ಗೋಡ್ಸೆ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಮಕ್ಕಳ್ ನಿಧಿ ಮಯುಮ್ (ಎಂಎನ್‍ಎಂ) ಸಂಸ್ಥಾಪಕ ಕಮಲಹಾಸನ್, ನಾನು ಇತಿಹಾಸದ ಸತ್ಯ ಸಂಗತಿಯನ್ನು ಹೇಳಿದ್ದೇನೆ, ಯಾರನ್ನೂ ನೋಯಿಸುವ ಉದ್ದೇಶ ನನ್ನದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ಭಾಷಣದ ಪೂರ್ಣ ಅಂಶಗಳನ್ನು ಪರಿಗಣಿಸದೆ ವಿನಾಕಾರಣ ಈ ಹೇಳಿಕೆಯನ್ನು ವಿವಾದವಾಗಿ ಪರಿವರ್ತಿಸಲಾಗಿದೆ. ನನಗೆ ಹಿಂದೂಗಳು ಅಥವಾ ಮುಸ್ಲಿಮರ ಬಗ್ಗೆ ದ್ವೇಷವಿಲ್ಲ ವಾಸ್ತವ ಸಂಗತಿಯನ್ನು ನಾನು ಉದಾಹರಣೆಯಾಗಿ ಹೇಳಿದ್ದೇನೆ ಅಷ್ಟೇ.

ಈ ವಿಷಯದಲ್ಲಿ ನಾನು ಯಾರೊಂದಿಗೂ ತರ್ಕ ಮಾಡುವ ಉದ್ದೇಶ, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಕಮಲ್ ಹೇಳಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ