SMART ಫೋನ್‍ಗಳ UGLY ಮುಖಗಳ ಬಗ್ಗೆ ತಿಳಿಯಿರಿ

ಈ ಸುದ್ದಿಯನ್ನು ಶೇರ್ ಮಾಡಿ

Smart

ಇದು ಮಾಡರ್ನ್ ಯುಗ ಒಂದು ವರ್ಷದ ಮಗುವಿನಿಂದ ಹಿಡಿದು ನಾಳೆಯೋ ನಾಡಿದ್ದೋ ಸಾಯುವ ಮುದುಕನವರೆಗೂ ಸ್ಮಾರ್ಟ್ ಫೋ ನ್ ಕಡ್ಡಾಯ ಎಂಬಂತಹ ಸ್ಥಿತಿಯಲ್ಲಿದ್ದೇವೆ. ಆದರೆ ವಿಷಯ ಅದಲ್ಲ. ಕೆಲ ವರ್ಷಗಳ ಹಿಂದೆ ಯಾರದೋ ಒಬ್ಬನ ಬಳಿ ಒಂದು ಬೇಸಿಕ್ ಸೆಟ್ ಇದೆ ಎಂದರೆ ಅದೇ ದೊಡ್ಡಸ್ತಿಕೆ ವಿಷಯವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಸ್ಮಾರ್ಟ್ ಫೋನ್ ಇಲ್ಲ ಅಂದರೆ ಅವರೆಲ್ಲ ಗುಗ್ಗುಗಳು ಎಂಬಂತಾಗಿದೆ.  ವಾಸ್ತವಾಂಶ ಯಾರಿಗೂ ಗೊತ್ತಿಲ್ಲ. ಈ ಸ್ಮಾರ್ಟ್‍ಫೋನ್‍ಗಳು ಸದ್ದಿಲ್ಲದೆ ನಮ್ಮ ಸ್ಮಾರ್ಟ್‍ಲೈಫ್‍ಗೆ ಸ್ಲೋ ಪಾಯಸನ್ ಆಗುತ್ತಿವೆ. ಮಾರ್ಕೆಟ್‍ಗೆ ಬರುತ್ತಿರುವ ಸ್ಮಾಟ್‍ಫೋನ್‍ಗಳು ಒಂದೇ ಬಾರಿಗೆ ಸಾಯಲು ಬಿಡದ ನಿಧಾನವಾಗಿ ಜೀವನದಿಂದ ಗೇಟ್‍ಪಾಸ್ ಕೊಡುವ ಕೆಲಸ ಮಾಡುತ್ತಿವೆ. ಮಗುವಿನಿಂದ ಹಿಡಿದು ಮುದುಕನವರೆಗೂ ದೈಹಿಕ ಶಕ್ತಿಯನ್ನೇ ಉಡುಗಿಸುವ  ಶಕ್ತಿ ಈ ಸ್ಮಾಟ್ ಫೋ ನ್‍ಗಳಿಗಿವೆ. ರಾತ್ರಿಯೆಲ್ಲ ನಿದ್ದೆಗೆಟ್ಟು, ಚಾಟಿಂಗ್ ಮತ್ತು ಆ್ಯಪ್ಸ್‍ಗಳಲ್ಲೇ ಕಾಲ ಕಳೆಯುವವರನ್ನು ಶಕ್ತಿಹೀನರನ್ನಾಗಿ ಮಾಡಬಲ್ಲವು ಈ ಸ್ಮಾರ್ಟ್‍ಫೋನ್‍ಗಳು.

ಆಸ್ಪತ್ರೆಗಳಲ್ಲಿ ವೈದ್ಯರು ಚಿಕಿತ್ಸೆ ನೀಡಲಾರದಂಥ ಭಯಾನಕ ಕಾಯಿಲೆಗಳನ್ನು ಈ ಫೋ ನ್‍ಗಳು ನೀಡುತ್ತಿವೆ ಎಂದರೆ ನಂಬಲು ಸಾಧ್ಯವೇ? ಹೌದು ಈ ಫೋ ನ್‍ಗಳು ಎಷ್ಟು ಸ್ಮಾರ್ಟ್ ಆಗುತ್ತಿವೆಯೋ ಅಷ್ಟೇ ಪ್ರಮಾಣದಲ್ಲಿ ದುಷ್ಪರಿಣಾಮಗಳು ಹೆಚ್ಚುತ್ತಿವೆ. ಆದರೆ ಯಾರೊಬ್ಬರು ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಇಡೀ ದಿನದ ಜೀವನವು ಫೋ ನ್‍ನಿಂದಲೇ ಅಂತ್ಯಗೊಳ್ಳುವ ಕಾಲ ಇದಾಗಿದೆ. ಮನೆಯಲ್ಲಿನ ಒಂದು ವರ್ಷದ ಚಿಕ್ಕಮಗು ಅಪ್ಪನ ಸ್ಮಾರ್ಟ್ ಫೋ ನಲ್ಲಿನ ಮಿಕ್ಕಿ ಮೌಸ್ ವಿಡಿಯೋ ನೋಡದೆ ಮಲಗುವುದಿಲ್ಲ. ಹಾಗೂ ಶಾಲೆಗೆ ಹೋಗುವ 6ನೇ ತರಗತಿಯ ಹುಡುಗ ಗೇಮ್ ಆಡದೆ ಶಾಲೆಗೆ ಹೋಗುವುದಿಲ್ಲ ಎಂಬಂತಹ ಸ್ಥಿತಿಗೆ ನಾವೆಲ್ಲರೂ ಕಲಿಸಿಬಿಟ್ಟಿದ್ದೇವೆ.  ತಡರಾತ್ರಿಯಾದರೂ ನಿದ್ದೆಯನ್ನು ನಿಗ್ರಹಿಸಿ ಗೇಮ್ಸ್‍ನಲ್ಲಿ ಹೈ ಸ್ಕೋರ್ ಮಾಡುವ ಹುಚ್ಚು ಗೀಳಿನ ಜೊತೆಗೆ ಸಾಂಪ್ರದಾಯಿಕ ಕ್ರೀಡೆಗಳು ಸಹ ಕಣ್ಮರೆಯಾಗುತ್ತಿವೆ.

ಮಕ್ಕಳು, ಯುವಕರು ಎಷ್ಟರ ಮಟ್ಟಿಗೆ ಅಡಿಕ್ಟ್ ಆಗಿದ್ದಾರೆ ಎಂದರೆ ಎಫ್‍ಬಿ ಮತ್ತು ವಾಟ್ಸಪ್‍ಗಳಿಲ್ಲದೇ ದಿನ ದೂಡಲು ಹೆಣಗಾಡುತ್ತಾರೆ. ಚಾಟಿಂಗ್‍ನಲ್ಲಿ ವರ್ಷಪೂರ್ತಿ ಕಳೆಯುವ ಮಹಾನುಭಾವರಿದ್ದಾರೆ. ಊಟ, ತಿಂಡಿ, ನಿದ್ರೆ ಎಲ್ಲ ಬಿಟ್ಟು ಗೆಳೆಯರ ಜೊತೆ ನಾನ್ ಸ್ಟಾಪ್ ಚಾಟಿಂಗ್ ನಡೆಸುತ್ತಿದ್ದಾರೆ. ಇದರಿಂದ ನಾವು ಯಾವ ರೀತಿಯಲ್ಲಿ ಮಾನಸಿಕ ಮತ್ತು ದೈಹಿಕ ದೌರ್ಬಲ್ಯತೆಗೆ ಒಳಗಾಗುತ್ತಿದ್ದೇವೆ ಎಂಬುದು ವೈದ್ಯರಿಗೆ ಇರಲಿ ಜನರಿಗೆ ಅರಿಯದೇ ಹೋಗುತ್ತದೆ.   ಭಾರತವು ವಿಶ್ವದಲ್ಲೇ ಮೂರನೆಯ ಅತಿ ಹೆಚ್ಚು ಸ್ಮಾರ್ಟ ಫೋ ನ ಹೊಂದಿರುವವವರ ಹಾಗೂ ಮಾರುಕಟ್ಟೆ ಬೆಳವಣಿಗೆಯಲ್ಲಿ ಪ್ರಥಮ ಸ್ಥಾನ ಹೊಂದಿರುವ ದೇಶ ನಮ್ಮದು. ಆದರೆ ಸ್ಮಾರ್ಟ ಫೋ ನ್‍ನ ಅತಿಯಾದ ಸಹವಾಸ ಮತ್ತು ಗೀಳಿನಿಂದಾಗಿ ಆರೋಗ್ಯದ ಮೇಲೆ ಪರಿಣಾಮವಾಗುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ನಿಮಗೆ ಶಾಕ್ ಆಗದೇ ಇರದು.

ನಿದ್ದೆಗೆಡಿಸುವ ‘ಸ್ಮಾರ್ಟ್’ ಫೋ ನ್

ತಾರುಣ್ಯದಲ್ಲಿ ಮನುಷ್ಯನಿಗೆ 8 ರಿಂದ 9 ಗಂಟೆ ನಿದ್ರೆಯ ಅಗತ್ಯ ಇದೆ. ಫೇಸ್‍ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಅತಿಯಾದ ವ್ಯಾಮೋಹ, ಮಲಗುವಾಗಲೂ ಕಿವಿಗೆ ಹಾಕಿಕೊಂಡು ಹಾಡುಗಳನ್ನು ಕೇಳುವ ಚಟ, ಇವುಗಳಿಂದಾಗಿ ನಿದ್ರೆಯ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಇದು ಮನುಷ್ಯನ ಸ್ಮರಣ ಸಾಮಥ್ರ್ಯವನ್ನು ಕುಂಠಿತಗೊಳಿಸುವುದಲ್ಲದೆ ನಿದ್ರಾಹೀನತೆ, ಖಿನ್ನತೆ ಮುಂತಾದ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಬೆರಳುಗಳ ಶಕ್ತಿ ಕಿತ್ತುಕೊಳ್ಳುವ ಟಚ್‍ಸ್ಕ್ರೀನ್

ಕೈಬೆರಳು ಮಾನವ ದೇಹದ ಅತ್ಯಮೂಲ್ಯ ಅಂಗಗಳಲ್ಲಿ ಒಂದು. ಮಾನವ ಇಂದು ಈ ಪ್ರಪಂಚದಲ್ಲಿ ಇತರ ಪ್ರಾಣಿಗಳಿಗಿಂತ ಉನ್ನತ ಸ್ತರದ ಜೀವನ ನಡೆಸುತ್ತಿರಲು ಈ ಕೈ ಬೆರಳುಗಳೇ ಕಾರಣ. ನಮ್ಮ ನರವ್ಯೂಹದ ಪ್ರತಿಯೊಂದು ಮುಖ್ಯನರದ ಅಂತಿಮ ಗಮ್ಯಸ್ಥಾನ ಬೆರಳುಗಳು. ಕೇವಲ ಸ್ಪರ್ಶ ಮಾತ್ರ ದಿಂದ ಕಣ್ಣು ನೋಡಲಾಗದ್ದನ್ನು ಗ್ರಹಿಸುವ ಸಾಮಥ್ರ್ಯ ಬೆರಳಿಗಿದೆ. ವೈಜ್ಞಾನಿಕವಾಗಿ ಹೇಳಬೇಕೆಂದರೆ ಅಂಗೈಯಲ್ಲಿನ್ನ ವಿಶೇಷ ಜೀವಕೋಶಗಳು ತನ್ನದೇ ಆದ ಶಕ್ತಿಹೊಂದಿದ್ದು ಕೇವಲ ಸ್ಪರ್ಷದಿಂದ ಕಣ್ಣುಗಳು ಗುರುತಿಸದ್ದನ್ನು ಗುರುತಿಸಬಲ್ಲವು. ಆ ಕೋಶಗಳನ್ನು ಈ ಸ್ಮಾರ್ಟ್‍ಫೋನ್‍ನಿಂದ ಹೊರಡುವ ರೇಡಿಯೇಷನ್‍ಗಳು ಕೊಂದು ಹಾಕುತ್ತವೆ ಎನ್ನಲಾಗುತ್ತೆ.

ಸ್ಮಾರ್ಟ ಫೋ ನ್‍ನ ಪರದೆಯ ಮೇಲೆ ನಿರಂತರವಾಗಿ ಹರಿಯುತ್ತಿರುವ ಸಣ್ಣ ಪ್ರಮಾಣದ ವಿದ್ಯುತ್ ನಮ್ಮ ಕೈ ಬೆರಳುಗಳ ಸಂಪರ್ಕಕ್ಕೆ ಬರುವುದರಿಂದ ಮೆದುಳಿನ ಮೇಲೆ ಅನಾಹುತಗಳನ್ನು ಸೃಷ್ಟಿಸುವ ಸಾಮಥ್ರ್ಯ ಹೊಂದಿವೆ. ಅಷ್ಟೇ ಅಲ್ಲದೆ ಇದು ನೋವು, ಸೆಳೆತ ಹಾಗು ಇತರ ಚಲನೆಯ ತೊಂದರೆಗಳಿಗೂ ಕಾರಣವಾಗಬಹುದು.   ಇನ್ನು ಸ್ಮಾರ್ಟ ಫೋ ನ ಗಳ ಬಳಕೆಯ ಸಂದರ್ಭದಲ್ಲಿನ ನಮ್ಮ ದೇಹ ಭಂಗಿಗಳೂ ಹಲವು ತೊಂದರೆಗಳಿಗೆ ಕಾರಣವಾಗಿವೆ. ಬೆರಳುಗಳನ್ನು ನಿಯಂತ್ರಿಸುವ ನರ, ಸ್ನಾಯು, ಮೂಳೆ ಹಾಗು ಅದರ ಸಂಧಿಗಳು ಅತಿಯಾದ ಘರ್ಷಣೆಗಳನ್ನು ಸಹಿಸಬೇಕಾಗಿವೆ. ಹಸ್ತ, ಮೊಣಕೈ ಹಾಗೂ ಕೈಗಂಟುಗಳು ಅತಿಯಾದ ಒತ್ತಡದಿಂದ ಬಳಲುತ್ತವೆ. ಇದರಿಂದ ಅನೇಕ ಖಾಯಿಲೆಗಳು ಸೃಷ್ಠಯಾಗಬಹುದು.
ಕೈ ಹಾಗೂ ಕಾಲು ಬೆರಳುಗಳ ನಿರ್ದಿಷ್ಟ ಪ್ರದೇಶಗಳ ಮೇಲೆ ಒತ್ತಡ ನೀಡುವ ಮೂಲಕ ಹಲವು ರೋಗಗಳನ್ನು ಗುಣಪಡಿಸುವ ಪದ್ಧತಿ ನಮ್ಮಲ್ಲಿ ಎಷ್ಟೋ ಹಿಂದಿನ ಕಾಲದಿಂದಲೂ ಇದೆ. ಹಾಗಿದ್ದ ಮೇಲೆ ಅಲ್ಲಿ ಸ್ಮಾರ್ಟ ಫೋ ನಿನ ದುರ್ಬಳಕೆಯು ದೇಹದ ಮೇಲೆ ವಿಪರೀತ ಪರಿಣಾಮ ಉಂಟುಮಾಡುವುದು ಸ್ವಾಭಾವಿಕವಲ್ಲವೇ!

ಸ್ಮಾರ್ಟ್ ಕುರುಡರಾಗುತ್ತೀರಿ ಹುಷಾರ್

ಮಾನವನ ಕಣ್ಣಿನ ಸ್ವಾಭಾವಿಕ ನೋಡುವ ವಿಧಾನವೆಂದರೆ, ಯಾವುದಾದರೂ ವಸ್ತುವಿನ ಮೇಲೆ ಬೆಳಕಿನ ಕಿರಣಗಳು ಬಿದ್ದಾಗ ಅವುಗಳನ್ನು ಆ ವಸ್ತುವು ಹೀರುವುದರಿಂದ ಹಾಗೂ ಅದರ ಪ್ರತಿಫಲನದಿಂದ ಉಂಟಾಗುವ ಕಿರಣಗಳು ನಮ್ಮ ಕಣ್ಣಿನ ಮೇಲೆ ಬೀಳುವುದರಿಂದ. ಈ ಪ್ರಕ್ರಿಯೆಯಲ್ಲಿ ನಮ್ಮ ಅಕ್ಷಿಪಟಲದ ಮೇಲೆ ಬೀಳುವ ಬೆಳಕಿನ ಶಕ್ತಿಯು ಅಲ್ಪ ಪ್ರಮಾಣದ್ದಾಗಿರುತ್ತದೆ. ಆದರೆ ವಿದ್ಯುನ್ಮಾನ ಪರದೆಗಳನ್ನು ವೀಕ್ಷಿಸುವಾಗ ಈ ಕಿರಣಗಳು ನೇರವಾಗಿ ಅಕ್ಷಿಪಟಲದ ಮೇಲೆ ಬೀಳುವುದರಿಂದ ಹೆಚ್ಚು ಪ್ರಮಾಣದ ಶಕ್ತಿಪಾತ ಕಣ್ಣಿನ ಮೇಲಾಗುತ್ತದೆ. ಫೋ ನಿನಲ್ಲಿ ಚಲನಚಿತ್ರ ವೀಕ್ಷಣೆ ಕಣ್ಣು ಹಾಗೂ ಕಿವಿ ಎರಡಕ್ಕೂ ಹಾನಿಕಾರಕ. ಹಾಗಾಗಿ ಚಾಳೀಸು ಬರಲು ಇನ್ನು 40 ವರ್ಷ ಕಾಯಬೇಕಿಲ್ಲ!  ಎಡೆಬಿಡದೆ ನಿರಂತರವಾಗಿ ಪರದೆ ಸ್ಮಾಟ್‍ಫೋನ್ ಅಥವಾ ಕಂಪ್ಯೂಟರ್ ನೋಡುವುದರಿಂದ ಕಣ್ರೆಪ್ಪೆಯನ್ನು ಬಡಿಯುವ ಗತಿ ನಿಧಾನವಾಗುತ್ತದೆ. ಇದರಿಂದ ಕಣ್ಣಿನ ಹೊರಭಾಗದ ದ್ರವ ಆರಿಹೋಗಿ ಅನೇಕ ಕಣ್ಣಿನ ತೊಂದರೆಗಳು ಕಾಣಿಸುತ್ತವೆ.

ಕಿವಿಯ ಮೇಲಿನ ದುಷ್ಪರಿಣಾಮಗಳು

ಕಿವಿಯ ಸ್ವಾಭಾವಿಕ ಕೇಳುವ ವಿಧಾನಕ್ಕೆ ವಿಪರೀತವಾಗಿ ಇಂದು ನಾವು ಸ್ಮಾರ್ಟ ಫೋ ನ್‍ಗಳು ತೊಂದರೆಯನ್ನುಂಟುಮಾಡುತ್ತಿವೆ. ಹಾಡುಗಳನ್ನು ಕೇಳುವ ಭರದಲ್ಲಿ ಕಿವಿಯ ಒಳಗಡೆ ಸಾಧನವನ್ನು ತುರುಕಿಸಿ ಕಿವಿಗೆ ಕೇಳುವಂತೆ ಬಲವಂತ ಪಡಿಸುತ್ತಿದ್ದೇವೆ. ನೆನಪಿರಲಿ ಉತ್ತಮವಾದ ಸಂಗೀತಕ್ಕೆ ಅದ್ಭುತವಾದ ಸಾಮಥ್ರ್ಯವಿದೆ. ಇಂತಹ ಸಂಗೀತ ಮನುಷ್ಯನ ವೈಖರಿಯಿಂದ ಹೊರಡಬೇಕೆ ವಿನಃ ಧ್ವನಿವರ್ಧಕಕ್ಕೆ ಈ ಶಕ್ತಿ ಇಲ್ಲ. ಇಂತಹ ಕರ್ಕಶವಾದ ಹಾಡುಗಳನ್ನು ಆಲಿಸಲು ಎಲ್ಲೆಂದರಲ್ಲಿ ಕಿವಿಗೆ ಸಿಕ್ಕಿಸಿಕೊಂಡು ತಿರುಗುತ್ತಿರುವವರು ಇನ್ನು 15-20 ವರ್ಷಗಳ ನಂತರ ಶ್ರವಣ ಸಾಧನ ಹಾಕಿಕೊಂಡು ತಿರುಗುವಂತಾದರೆ ಆಶ್ಚರ್ಯವೇನಿಲ್ಲ!

ಸ್ಮಾರ್ಟ್‍ಫೋನ್‍ಗಳು ಮಕ್ಕಳನ್ನು ಡಲ್ ಆಗಿಸುತ್ತವೆ

ಹಟ ಮಾಡುತ್ತದೆ ಎಂಬ ಕಾರಣಕ್ಕೆ ನಿಮ್ಮ ಮಕ್ಕಳಿಗೆ ಸ್ಮಾರ್ಟ ಫೋ ನ ನೀಡುವ ಮುನ್ನ ಒಮ್ಮೆ ಯೋಚಿಸಿ. ಸ್ಮಾರ್ಟ ಫೋ ನ ಬಳಕೆಯಿಂದ ನಿಮ್ಮ ಮಕ್ಕಳು ಕಡಿಮೆ ಸ್ಮಾರ್ಟ ಆಗಬಹುದು. ಟಚ ಸ್ಕ್ರೀನ ಮೊಬೈಲ್‍ನಲ್ಲಿ ಗೇಮ ಆಡುವ ಮಕ್ಕಳ ಬುದ್ಧಿ ಮಟ್ಟ ಕುಸಿಯುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.  ಬಹಳಷ್ಟು ಫೋ ಷಕರು ತಮ್ಮ ಮಕ್ಕಳಿಗೆ ಗೊಂಬೆ ಅಥವಾ ಆಟದ ಸಾಮಾನುಗಳ ಬದಲು ಸ್ಮಾರ್ಟ ಫೋ ನ ನೀಡುತ್ತಿದ್ದಾರೆ. ಸ್ಮಾರ್ಟ ಫೋ ನ ಬಳಸುವುದರಿಂದ ಅವರ ಶೈಕ್ಷಣಿಕ ಚಟುವಟಿಕೆಗೆ ಸಹಾಯವಾಗುತ್ತದೆ ಎಂಬ ತಪ್ಪು ತಿಳುವಳಿಕೆಯಿಂದ ಮಕ್ಕಳ ಭವಿಷ್ಯವನ್ನು ಪೋಷಕರೇ ಹಾಳುಮಾಡುತ್ತಿದ್ದಾರೆ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಸಮಯ ಮತ್ತು ಆರೋಗ್ಯವನ್ನು ತಿನ್ನುವ ಸ್ಮಾಟ್‍ಗೇಮ್ಸ್

ಸ್ಮಾರ್ಟಫೋ ನ್‍ನ ಇನ್ನಿತರ ಅಡ್ಡ ಪರಿಣಾಮಗಳಲ್ಲಿ ಪ್ರಮುಖವಾದದ್ದು ಅದರಲ್ಲಿ ಆಡಬಹುದಾದ ಆಟಗಳು. ಇವು ಮನುಷ್ಯನ ಅಮೂಲ್ಯ ಸಮಯವನ್ನು ತಿನ್ನುವುದಲ್ಲದೆ ಕ್ರಮೇಣ ಚಟಕ್ಕೆ ಕಾರಣವಾಗಬಹುದು. ಮಕ್ಕಳು ಕ್ರಮೇಣವಾಗಿ ವ್ಯಾಯಾಮವನ್ನು ನೀಡುವ ಆಟೋಟಗಳಿಂದ ವಿಮುಖರಾಗುತ್ತಿದ್ದಾರೆ. ಇದು ಅವರ ಬೌದ್ಧಿಕ ಹಾಗೂ ಮಾನಸಿಕ ವಿಕಾಸಕ್ಕೆ ಮಾರಕವಾಗಿದೆ. ವಸ್ತುಗಳ ಮೇಲೆ ಗಮನ ಕೇಂದ್ರಿಕರಿಸುವಲ್ಲಿ ಹಾಗೂ ವಿಷಯಗಳ ಬಗ್ಗೆ ಏಕಾಗ್ರತೆ ಹೊಂದುವಲ್ಲಿ ಸೋಲುತ್ತಿದ್ದಾರೆ. ಒಟ್ಟಿನಲ್ಲಿ ಸ್ಮಾರ್ಟ ಫೋ ನಿನ ಅತಿಯಾದ ವ್ಯಾಮೋಹ ಹಾಗೂ ಅವಲಂಬನೆ ಒಂದು ಚಟವಾಗಿ ಪರಿವರ್ತನೆಗೊಂಡು ದುವ್ರ್ಯಸನವಾಗಿ ಬೆಳೆಯುತ್ತಿರುವುದು ನಮ್ಮ ಸಮಾಜದ ದುರಂತ. ಕೆಲವೇ ವರ್ಷಗಳಲ್ಲಿ ಇದಕ್ಕೆಂದೇ ವಿಶೇಷ ಮಾನಸಿಕ ಚಿಕಿತ್ಸಾಲಯಗಳನ್ನು ತೆರೆಯಬೇಕಾಗಿ ಬರಬಹುದು.

  • ಸ್ಮಾಟ್‍ಫೋನ್‍ಗಳು ಮನೋ ಸಂವೇದನೆಯನ್ನೇ ಹಾಳುಗೆಡವುತ್ತದೆ. ಇದರಿಂದ ಖಿನ್ನತೆ, ನಿದ್ರಾಹೀನತೆಗೆ ಕಾರಣವಾಗುತ್ತದೆ.
  • ಒಂದು ಸಮೀಕ್ಷೆಯ ಐಫೋ ನ, ಬ್ಲಾಕ್ ಬೆರಿಗಳಂಥ ಸ್ಮಾರ್ಟ್ ಫೋ ನ್‍ಗಳ ಬಳಕೆಯಿಂದ ಸೆಕ್ಸ ಲೈಫ್‍ಗೂ ಹೊಡೆತಕೊಡುತ್ತದೆ ಎನ್ನುವು ಈಗಾಗಲೇ ಸಾಬೀತಾಗಿದೆ.
  • ಸ್ಮಾರ್ಟ್  ಫೋನ್‍ಗಳಲ್ಲಿ ವಾಟ್ಸ್‍ಪ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಭಾರತದಲ್ಲಿ ವ್ಯಾಪಕವಾಗಿ ಹೆಚ್ಚುತ್ತಿದ್ದು ಇದರಿಂದ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವೊಂದನ್ನು ಸಮೀಕ್ಷೆ ಬಹಿರಂಗಪಡಿಸಿದೆ.
  • ಸ್ಮಾರ್ಟ್ ಫೋ ನ್ ನೊಂದಿಗೆ ತಲ್ಲೀನರಾಗಿರುವುದರಿಂದ ಬುದ್ಧಿಶಕ್ತಿಯ ಉಪಯೋಗವೇ ಆಗದೆ ಕ್ರಮೇಣ ಯೋಚನೆಗಳ ಹರಿವೂ ನಿಧಾನಗೊಳ್ಳುತ್ತದೆ. ಒಂದು ದಿನ ನಿಂತುಹೋಗಬಹುದು ಎಂದು ಎನ್ನಲಾಗಿದೆ.
  • ಪ್ಲೇಸ್ಟೋರ್‍ನಿಂದ ಕೆಲವು ಅಪ್ಲಿಕೇಶನ ಗಳನ್ನು ಡೌನ್‍ಲೋಡ್ ಮಾಡಿಕೊಳ್ಳುವಾಗ ಜಾಗರೂಕರಾಗಿರಿ. ಕೆಲವೊಂದು ಅಪ್ಲಿಕೇಶನ್‍ಗಳು ನಿಮ್ಮ ಖಾಸಗಿ ವಿವರಗಳಿಗೆ ಕನ್ನ ಹಾಕಬಹುದು ಎಚ್ಚರ..!
    ಸ್ಮಾಟ್ ಫೋನ್‍ಗೇಮ್ಸ್‍ಗಳಲ್ಲಿ ಹೆಚ್ಚು ಹೆಸರುವಾಸಿಯಾಗಿರುವ ಕ್ಯಾಂಡಿಕ್ರಷ್ ಗೇಮ್ ಮನಸ್ಥಿತಿ ಹಾಗೂ ದೇಹಸ್ಥಿತಿಯನ್ನು ಹಾಳು ಮಾಡುತ್ತದೆಯಂತೆ.
    ಸ್ಮಾರ್ಟಫೋ ನ್‍ಗಳ ಅತೀ ಬಳಕೆ ಕಾಲೇಜು ವಿದ್ಯಾರ್ಥಿಗಳಲ್ಲಿ ಅಥವಾ ಯುವಜನರಲ್ಲಿ ಫಿಟ್ನೆಸ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನಲಾಗಿದೆ.
  • ಅನೇಕ ಜನರು ಅದರಲ್ಲೂ ಮಹಿಳೆಯರು ದಿನದಲ್ಲಿ ಎರಡು ತಾಸಿಗಿಂತಲೂ ಹೆಚ್ಚಿನ ಅವಧಿಯನ್ನು ಸ್ಮಾರ್ಟ್‍ಫೆÇೀನ ಮತ್ತು ಟ್ಯಾಬ್ಲೆಟ್‍ನಲ್ಲಿ ಕಳೆಯುತ್ತಿರುತ್ತಾರೆ. ಇದರ ಫಲಿತಾಂಶವೆಂದರೆ ದೇಹದ ಚರ್ಮದಲ್ಲಿ ಅಕಾಲಿಕವಾಗಿ ಸುಕ್ಕು ಉಂಟಾಗುತ್ತದೆ.

 

Facebook Comments

Sri Raghav

Admin