ಪಾಕಿಸ್ತಾನ ಕಳ್ಳ ಸಾಗಣೆದಾರರ ಒಳ ನುಸುಳುವಿಕೆ ಯತ್ನ ವಿಫಲ, ಭಾರೀ ಪ್ರಮಾಣದ ಡ್ರಗ್ಸ್, ಶಸ್ತ್ರಾಸ್ತ್ರ ವಶ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.20-ಕಾಶ್ಮೀರ ಪ್ರಾಂತ್ಯದ ಇಂಡೋ-ಪಾಕ್ ಗಡಿ ಭಾಗಗಳಲ್ಲಿ ಒಂದೆಡೆ ಪಾಕಿಸ್ತಾನ ಸೈನಿಕರು ಮತ್ತು ಅವರ ಬೆಂಬಲಿತ ಉಗ್ರಗಾಮಿಗಳ ಉಪಟಳ ತೀವ್ರವಾಗಿದ್ದರೆ, ಇನ್ನೊಂದಡೆ ಮಾದಕವಸ್ತು ಕಳ್ಳಸಾಗಣೆದಾರರ ಒಳನುಸುಳುವಿಕೆ ಯತ್ನಗಳೂ ಮುಂದುವರಿದಿವೆ.

ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ (ಐಬಿ) ಬಳಿ ಪಾಕಿಸ್ತಾನದಿಂದ ಭಾರತದೊಳಗೆ ನುಸುಳುವ ಕಳ್ಳಸಾಗಣೆದಾರರ ಯತ್ನವೊಂದು ವಿಫಲವಾಗಿದ್ದು, ಭಾರೀ ಪ್ರಮಾಣದ ಮಾದಕ ವಸ್ತುಗಳು ಮತ್ತು ಶಸ್ತ್ರಾಸ್ತ್ರಗಳನ್ನು ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಯೋಧರು ವಶಪಡಿಸಿಕೊಂಡಿದ್ದಾರೆ.

ಜಮ್ಮುವಿನ ಆರ್.ಎಸ್.ಪುರ ವಲಯದ ಅರ್ನಿಯಾ ಪ್ರದೇಶದಲ್ಲಿ ಪಾಕಿಸ್ತಾನದ ಮಾದಕ ವಸ್ತು ಕಳ್ಳಸಾಗಣೆದಾರರು ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದರು ಎಂದು ಬಿಎಸ್‍ಎಫ್ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕತ್ತಲಲ್ಲಿ ಗಡಿಯೊಳಗೆ ನುಸುಳಲು ಐಬಿ ಬಳಿ ಪಾಕಿಸ್ತಾನ ಕಡೆಯಿಂದ ಕೆಲವರು ಯತ್ನಿಸುತ್ತಿರುವುದನ್ನು ಬುಧ್ವರ್ ಮತ್ತು ಬುಲ್ಲೆಚಕ್ ಗಡಿ ಔಟ್‍ಪೆಪೋಸ್ಟ್‍ನ ಯೋಧರು ಗಮನಿಸಿದರು. ತಕ್ಷಣ ಬಿಎಸ್‍ಎಫ್ ಯೋಧರು ನುಸುಳುಕೋರರ ಮೇಲೆ ಗುಂಡು ಹಾರಿಸಿ ಅವರನ್ನು ಹಿಮ್ಮೆಟ್ಟಿಸಿದರು.

ಒಳನುಸುಳುವಿಕೆ ವಿಫಲಗೊಂಡ ನಂತರ ಆ ಪ್ರದೇಶವನ್ನು ಯೋಧರು ಇಂದು ಮುಂಜನೆ ಶೋಧಿಸಿದಾಗ ಲಕ್ಷಾಂತರ ರೂ.ಗಳ ಮËಲ್ಯದ ಮಾದಕವಸ್ತುಗಳು ಇದ್ದ 58 ಪೊಟ್ಟಣಗಳು ಮತ್ತು ಎರಡು ಪಿಸ್ತೂಲ್‍ಗಳು, ಬುಲೆಟ್‍ಗಳು ಪತ್ತೆಯಾದರು.

ಕೆಲವು ದಿನಗಳ ಹಿಂದಷ್ಟೆ ಕಾಶ್ಮೀರ ಕಣಿವೆಯ ಅಂತಾರಾಷ್ಟ್ರೀಯ ಗಡಿ ಬಳಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಗೆ ಪಾಕಿಸ್ತಾನಿ ಕಳ್ಳಸಾಗಣೆದಾರರ ಯತ್ನವನ್ನು ಬಿಎಸ್‍ಎಫ್ ವಿಫಲಗೊಳಿಸಿತ್ತು.

Facebook Comments