14 ಲಕ್ಷರೂ. ಮೌಲ್ಯದ 2 ಅಪರೂಪದ ಮತ್ತು ವರ್ಣರಂಜಿತ ಪಕ್ಷಿಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲ್ಕತಾ, ಆ.14-ಪಶ್ಚಿಮ ಬಂಗಾಳದ ನಾರ್ತ್ 24 ಪರಗಣಜಿಲ್ಲೆಯ ಭಾರತ-ಬಾಂಗ್ಲಾ ದೇಶಗಡಿಯಲ್ಲಿಗಡಿ ಭದ್ರತಾ ಪಡೆ (ಬಿಎಸ್‍ಎಫ್) ಯೋಧರು 14 ಲಕ್ಷರೂ. ಮೌಲ್ಯದ ಅತ್ಯಂತ ವಿರಳ ಮತ್ತು ವರ್ಣರಂಜಿತ ಟೌಕನ್ ಪ್ರಬೇಧದ ಎರಡು ಪಕ್ಷಿಗಳನ್ನು ವಶಪಡಿಸಿಕೊಂಡಿದ್ದಾರೆ.

ಅಂಗ್ರೈಲ್ ಬಾರ್ಡರ್ ಔಟ್‍ ಪೋಸ್ಟ್ ಬಳಿ ಅರಣ್ಯ ಪ್ರದೇಶದಲ್ಲಿ ಬಿಎಸ್‍ಎಫ್‍ನ ಶೇಷ ತಂಡ ಶೋಧಕಾರ್ಯ ನಡೆಸುತ್ತಿದ್ದ ವೇಳೆ ಪಂಜರದಲ್ಲಿದ್ದ ಈ ಅಪರೂಪದ ಸುಂದರ ಪಕ್ಷಿಗಳು ಪತ್ತೆಯಾದವು.

ಶೋಧ ನಡೆಸುತ್ತಿದ್ಧಾಗ ಬಿಎಸ್‍ಎಫ್ ಸಿಬ್ಬಂದಿಗೆ ಪೊದೆಯ ಮರೆಯಲ್ಲಿ ಅಡಗಿದ್ದ ಇಬ್ಬರು ವ್ಯಕ್ತಿಗಳು ಕಂಡುಬಂದರು. ಯೋಧರನ್ನು ನೋಡಿ ಇಬ್ಬರು ವ್ಯಕ್ತಿಗಳು ಪಕ್ಷಿಗಳಿದ್ದ ಪಂಜರವನ್ನು ಬಿಟ್ಟಿ ಕಾಡಿನೊಳಗೆ ಕಣ್ಮರೆಯಾದರು.

ನಂತರ ಯೋಧರು ಪಕ್ಷಿಗಳನ್ನು ವಶಕ್ಕೆ ತೆಗೆದುಕೊಂಡು, ಅವುಗಳನ್ನು ಅಲಿಪುರದ ಮೃಗಾಲಯಕ್ಕೆಒಪ್ಪಿಸಲಾಗಿದೆ. ಒಂದು ಜೊತೆ ಕೀಲ್-ಬಿಲ್ ಟೌಕುನ್ ಪಕ್ಷಿಗಳು ಟೌಕುನ್ ಪ್ರಬೇಧದ ಲ್ಯಾಟಿನ್‍ಅಮೆರಿಕದ ಅತ್ಯಂತ ವರ್ಣರಂಜಿತ ಮತ್ತು ಅಪರೂಪದ ಪಕ್ಷಿಗಳು. ಇವುಗಳ ಮËಲ್ಯ 14 ಲಕ್ಷ ರೂ.ಗಳು ಎಂದು ರಿಯ ಅಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin