ಸ್ನೇಕ್ ಸಿಟಿಯಾಗುತ್ತಿದೆಯೇ ಬೆಂಗಳೂರು..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.25- ಉದ್ಯಾನ ನಗರದ ಖ್ಯಾತಿ ಪಡೆದಿರುವ ಬೆಂಗಳೂರು ಅರಣ್ಯ ನಾಶ, ಕೆರೆಗಳ ಒತ್ತುವರಿ, ವಸತಿ ಪ್ರದೇಶ ವಿಸ್ತರಣೆಯಿಂದಾಗಿ ನಿತ್ಯ ಮನೆ, ಶಾಲೆ, ಸೇರಿದಂತೆ ಎಲ್ಲಾಡೆ ಹಾವುಗಳೆ ಹೆಚ್ಚಾಗಿದ್ದು, ಸ್ನೇಕ್ಕ್ ಸಿಟಿಯಾಗುತ್ತಿರುವುದು ವಿಪರ್ಯಾಸ. ವಾತಾವರಣದಲ್ಲೂ ಸಾಕಷ್ಟು ಬದಲಾವಣೆ ಉಂಟಾಗಿ ಕೆಲ ಪ್ರಾಣಿಗಳು ದಿಕ್ಕು ತಪ್ಪಿ ಮನೆ, ಕಚೇರಿ, ರಸ್ತೆ, ಶಾಲಾಕಾಲೇಜು ಆವರಣ ಸೇರಿದಂತೆ ಎಲ್ಲೆಡೆ ಕಾಣಸಿಗುತ್ತಿವೆ.

ಅರಣ್ಯ ನಾಶ, ಕೆರೆಗಳ ಒತ್ತುವರಿಯಿಂದ ಪ್ರಾಣಿಗಳಿಗೆ ಸರಿಯಾದ ನೆಲೆ ಇಲ್ಲದೆ ಮಳೆ, ಬಿಸಿಲು, ಚಳಿಗಾಲದಲ್ಲಿ ಪ್ರಾಣಿಗಳು ಮನುಷ್ಯನಿರುವ ಕಡೆ ಬರಲು ಆರಂಭಿಸಿವೆ. ಅದರಲ್ಲಿ ಮುಖ್ಯವಾಗಿ ಉರಗಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ..

ನವೆಂಬರ್. ಡಿಸೆಂಬರ್ ತಿಂಗಳು ಹಾವುಗಳ ಸಂತಾನದ ಸಮಯ. ಹಾವುಗಳು ತಮ್ಮ ಮರಿ, ಮೊಟ್ಟೆಗಳನ್ನು ರಕ್ಷಿಸಿಕೊಳ್ಳಲು ಆಹಾರ ಹಾಗೂ ವಾಸಕ್ಕಾಗಿ ಅಲೆದಾಡುವಂತಾಇದ್ದು, ವಸ್ತುಗಳು ಶೇಖರಣೆ ಮಾಡುವ ಗೊಡೌನ್‍ಗಳು, ಕಾರು ಶೆಡ್, ಕಾರು, ಲಾರಿ, ಬೈಕುಗಳ ಇಂಜಿನ್, ಮನೆಯ ಅಡುಗೆ ಕೋಣೆಯ ಗ್ಯಾಸ್ ಸ್ಟವ್ ಬಳಿ, ಚಪ್ಪಲಿ ಸ್ಟಾಂಡ್, ಶೋಗಳ ಒಳಗೆ ,ವಾಷಿಂಗ್ ಮಿಷನ್, ಟಾಯ್ಲಟï, ಬಟ್ಟೆ ಇಡುವ ಸ್ಥಳಗಳನ್ನು ತಮ್ಮ ನೆಲೆಮಾಡಿಕೊಳ್ಳುತ್ತ್ತಿವೆ ಎಂದು ಪರಿಸರ ಪ್ರೇಮಿ ಅಭಿಪ್ರಾಯ ಪಟ್ಟಿದ್ದಾರೆ.

ಕೆ.ಆರ್.ಪುರಂ ತಾಲ್ಲೂಕು ಕಛೇರಿ ಆವರಣದಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಾಗ ಅದನ್ನು ರಕ್ಷಿಸಿ ಮಾತನಾಡಿದ ಪರಿಸರ ಮಂಜು, ಹಾವುಗಳು ಶೀತ ರಕ್ತದ ಪ್ರಾಣಿಯಾಗಿದ್ದು, ಹೆಚ್ಚು ಚಳಿ, ಮಳೆ ತಡೆಯ ಲಾರದ ಹಾವುಗಳು ಸುರಕ್ಷಿತ, ಬಿಸಿ ಉಷ್ಣತೆ ಮತ್ತು ಬೆಚ್ಚಗಿರುವ ಸ್ಥಳವನ್ನು ಹುಡುಕುವ ಹಾದಿಯಲ್ಲಿ ಮನೆ ಕಚೇರಿಗಳಿಗೆ ಹಾವುಗಳು ಬಂದರೆ ದಯಮಾಡಿ ಕೊಲ್ಲಬೇಡಿ ಎನ್ನುತ್ತಾರೆ.

ಬಿಬಿಎಂಪಿ ಅಥವಾ ಅರಣ್ಯ ಘಟಕಕ್ಕೆ ಮಾಹಿತಿ ನೀಡಿ ಹಾವುಗಳನ್ನು ರಕ್ಷಿಸಿ, ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ಹಾವುಗಳ ಉಳಿವಿಗೆ ಕೈಜೋಡಿಸಿ ಎಂದು ಉರಗ ಪ್ರೇಮಿ ಪರಿಸರ ಮಂಜು ಮನವಿ ಮಾಡಿದರು.

#ಅನುಸರಿಸಬೇಕಾದ ಕ್ರಮಗಳು:

ಇದಕ್ಕಾಗಿ ಮನೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿ. ಕತ್ತ್ತಲೆಯ ಪ್ರದೇಶದಲ್ಲಿ ನಡೆದಾಡುವಾಗ ಶೂ ಬಳಸಿ ಮತ್ತು ಟಾರ್ಚ್ ಉಪಯೋಗಿಸಿ. ಖಾಲಿ ಪ್ರದೇಶಗಳಲ್ಲಿ ಮಕ್ಕಳು ಆಟವಾಡುವಾಗ ಎಚ್ಚರವಿರಲಿ. ಹಾವುಗಳನ್ನು ಕಂಡಾಗ ಶಬ್ದ ಮಾಡದೆ ದೂರ ಸರಿದು ಸ್ಥಳೀಯ ಉರಗ ರಕ್ಷಕರಿಗೆ ಅಥವಾ ಇಲಾಖೆಗೆ ಮಾಹಿತಿ ನೀಡಿ. ವಿಷ ಹಾಗೂ ವಿಷ ರಹಿತ ಹಾವುಗಳೂ ಇವೆ. ಎಲ್ಲಾ ಹಾವು ಮನುಷ್ಯನಿಗೆ ತೊಂದರೆ ನೀಡುವುದಿಲ್ಲ ಎಂಬುದರ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವುದು.

Facebook Comments