ವಿವಿಪ್ಯಾಟ್‍ನಲ್ಲಿತ್ತು ಬುಸ್‍ಬುಸ್ ನಾಗ..!

ಈ ಸುದ್ದಿಯನ್ನು ಶೇರ್ ಮಾಡಿ

ಕಣ್ಣೂರು(ಕೇರಳ), ಏ.23-ಕೇರಳದ ಕಣ್ಣೂರು ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಇಂದು ಮತದಾನದ ವೇಳೆ ಅಸಾಮಾನ್ಯ ಅತಿಥಿಯ ದರ್ಶನದಿಂದ ಮತದಾರರು ಮತ್ತು ಸಿಬ್ಬಂದಿ ಹೆದರುವಂತಾಯಿತು. ಹಾವು ಕಾಣಿಸಿಕೊಂಡಿದ್ದರಿಂದ ಕೆಲಕಾಲ ಮತದಾನಕ್ಕೆ ಅಡಚಣೆಯಾಯಿತು.

ಈ ಕ್ಷೇತ್ರ ಮಯ್ಯಿಲ್ ಕಂಡಕ್ಕಲ್ ಪ್ರದೇಶದ ವಿವಿಪ್ಯಾಟ್(ಮತ ತಾಳೆ ನೋಡುವ) ಯಂತ್ರದೊಳಗೆ ಬುಸ್‍ಬುಸ್ ನಾಗಪ್ಪ ಅಡಗಿ ಕುಳಿತಿದ್ದ.
ವಿವಿ ಪ್ಯಾಟ್ ಸ್ಲಿಪ್ ನೋಡಲು ಹೋದ ಚುನಾವಣಾ ಸಿಬ್ಬಂದಿಗೆ ಈ ಸರ್ಪದ ದರ್ಶನವಾಗಿ ಬೆಚ್ಚಿ ಬಿದ್ದರು.

ಇದರಿಂದ ಬೂತ್‍ನಲ್ಲಿದ್ದ ಇತರ ಸಿಬ್ಬಂದಿ ಮತ್ತು ಮತದಾರರು ಅಲ್ಲಿಂದ ಜಾಗ ಖಾಲಿ ಮಾಡಿದರು. ಇದರಿಂದ ಕೆಲಕಾಲ ಮತದಾನಕ್ಕೆ ಅಡ್ಡಿಯಾಯಿತು. ನಂತರ ಸ್ಥಳೀಯರು ವಿವಿಪ್ಯಾಟ್‍ನಿಂದ ನಾಗಪ್ಪನನ್ನು ಹೊರ ಹಾಕಿದರು. ಬಳಿಕ ಮತದಾನ ಮುಂದುವರಿಯಿತು.

ಕಣ್ಣೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದೆ ಪಿ.ಕೆ.ಶ್ರೀಮತಿ (ಸಿಪಿಐ-ಎ-ಎಲ್‍ಡಿಎಫ್), ಕೆ. ಸುರೇಂದ್ರನ್ (ಕಾಂಗ್ರೆಸ್-ಯುಡಿಎಫ್) ಮತ್ತು ಸಿ.ಕೆ. ಪದ್ಮನಾಭ(ಬಿಜೆಪಿ-ಎನ್‍ಡಿಎ) ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಇದ್ದು, ಭರ್ಜರಿ ಮತದಾನವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin