ಹಾವು ಕಚ್ಚಿ 6 ಮಂದಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬಾಂಡಾ/ಚಿತ್ರಕೂಟ (ಉ.ಪ್ರ.), ಸೆ.8-ಉತ್ತರ ಪ್ರದೇಶದ ಬಾಂಡಾ ಮತ್ತು ಚಿತ್ರಕೂಟ್ ಜಿಲ್ಲೆಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ವಿಷಸರ್ಪಗಳು ಕಚ್ಚಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ.

ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದ ಬಾಂಡಾ ಜಿಲ್ಲೆಯ ಗಿರಿವನ್ ಪಟ್ಟಣದ 27 ವರ್ಷ ಯುವಕ ಮತ್ತು ಆತನ ಪತ್ನಿ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಿನೀತ್ ಸಚಿನ್ ತಿಳಿಸಿದ್ದಾರೆ.

ಇದೇ ಜಿಲ್ಲೆ ಸಂಗಾರ ಮತ್ತು ಸಿಂಗ್‍ಪುರ್ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಕೃಷಿಕ ಮತ್ತು ರೈತ ಮಹಿಳೆಗೆ ಹಾವು ಕಚ್ಚಿದ್ದು, ಇಂದು ಬೆಳೆಗೆ ಜಿಲ್ಲಾಸ್ಪತ್ರೆಯಲ್ಲಿ ಅಸು ನೀಗಿದ್ದಾರೆ ಎಂದು ವೈದ್ಯಾಧಿಕಾರಿ ಹೇಳಿದ್ದಾರೆ.

ಚಿತ್ರಕೂಟ ಜಿಲ್ಲೆಯ 42 ವರ್ಷದ ವ್ಯಕ್ತಿ ಮತ್ತು ಕರ್ವಿ ಕೊತ್ವಾಲಿ ಪ್ರದೇಶದ 42 ವರ್ಷದ ಮಹಿಳೆ ಸಹ ವಿಷಪೂರಿತ ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಈ ಎಲ್ಲ ಆರು ಜನರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ನಂತರ ಅವರವರ ಕುಟುಂಬ ವರ್ಗದವರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ.

Facebook Comments