ಹಾವುಗಳಿಂದ ಹೈರಾಣಾದ ಚಿಕ್ಕಬಳ್ಳಾಪುರ ಜನ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಮೇ 7- ನಗರದಲ್ಲಿ ನನರನ್ನು ಕಾಡುತಿರುವ ಡೆಡ್ಲಿ ಕೊರೊನ ಒಂದು ಕಡೆಯಾದರೆ ಇನ್ನೊಂದಡೆ ವಿಷಪೂರಿತ ಹಾವುಗಳ ಕಾಟ ಜನರನ್ನು ಹೈರಾಣಾಗಿಸಿದೆ.

ಕಳೆದ ವಾರ ನಗರದ 20ನೇ ವಾರ್ಡಿನಲ್ಲಿ ಒಂದೆ ಕಡೆ 8-10 ಹಾವುಗಳು ಜನವಸತಿ ಪ್ರದೇಶದಲ್ಲಿ ಜನರ ನಿದ್ದೆ ಕೆಡಿಸಿದ್ದು, ಮಟ ಮಟ ಮದ್ಯಾಹ್ನ ಒಂದು ಗಂಟೆ ಸುಮಾರಿನಲ್ಲಿ ಎರಡು ಹಾವುಗಳು ನಗರದ ಐ.ಡಿ.ಎಸ್.ಎಂ.ಟಿ. ಲೇ-ಔಟ್ ನ ಜನವಸತಿ ಪ್ರದೇಶದಲ್ಲಿ ಒಂದು ಗಮನಟೆಗೂ ಅಧಿಕ ಸಮಯ ಸರಸದಲ್ಲಿ ತೊಡಗಿದ್ದ ಹಾವುಗಳು ನಂತರ ಮನೆಗಳ ಸಮೀಪದ ಕಾಂಪೌಂಡ್ ಹತ್ತಿರ ನುಸುಳಿದವು ಈ ಹಾವುಗಳನ್ನು ನೋಡುತ್ತಲೇ ಇದ್ದ ಜನ ಆತಂಕಗೊಂಡಿದ್ದರು ಇದೇ ಸಮಯದಲ್ಲಿ ಅಲ್ಲಿಯ ನಾಗರೀಕ SI ರಮೇಶ್ ಅವರು ಕಂದವಾರದ ಸೈಯದ್ ಖಾಸಿಂ (ಸ್ನೇಕ್ ಬಾಬು) ಅವರಿಗೆ ದೂರವಾಣಿಯಲ್ಲಿ ವಿಷಯ ಮುಟ್ಟಿಸಿದರು ತಕ್ಷಣ ಸ್ಥಳಕ್ಕೆ ಆಗಮಿಸಿದ ಬಾಬು ಬೃಹತ್ ಗಾತ್ರದ ಕೇರೆ ಹಾವೊಂದನ್ನು ಹಿಡಿಯುವಲ್ಲಿ ಯಶಸ್ವಿಯಾದರು.

ಇನ್ನೊಂದು ಹಾವಿಗೆ ಹುಡುಕಾಟ ನಡೆಸಿದರೂ ಹಾವು ಸಿಗಲಿಲ್ಲ ಆಕಸ್ಮಾತ್ ಕಾಣಿಸಿದರೆ ತಕ್ಷಣ ದೂರವಾಣಿಯಲ್ಲಿ ತಿಳಿಸಿ ಎಷ್ಟೊತ್ತಿಗಾದರೂ ಬಂದು ಹಾವು ಹಿಡಿದು ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡುತ್ತೇನೆ ದಯಮಾಡಿ ಯಾರೂ ಹಾವುಗಳನ್ನು ಕೊಲ್ಲುವ ಪ್ರಯತ್ನ ಮಾಡಬೇಡಿ ಅವುಗಳು ನಮ್ಮನ್ನು ಏನೂ ಮಾಡವು ಎಂದು ನೆರೆದ ಜನರಲ್ಲಿ ಮನವಿ ಮಾಡಿ ಹಿಡಿದ ಹಾವನ್ನು ಕಣಿವೆ ಪ್ರದೇಶದ ಸುರಕ್ಷಿತ ಜಾಗಕ್ಕೆ ಬಿಟ್ಟರು.
ಹಾವು ಹಿಡಿಯುವುದಕ್ಕೆ ಭಾಷ, ಬಾಬಾಜಾನ್ ನೆರವಾದರು.

Facebook Comments

Sri Raghav

Admin