ತುಂಬಾ ಗೊರಕೆ ಹೊಡೀತೀರಾ..? ಎಚ್ಚರ, ಜೀವಕ್ಕೆ ಅಪಾಯ ಆಗಬಹುದು..!

ಈ ಸುದ್ದಿಯನ್ನು ಶೇರ್ ಮಾಡಿ

ಜನರು ನಿದ್ರೆಯಲ್ಲಿದ್ದಾಗ ಗೊರಕೆ ಬರುವುದು ಸಾಮಾನ್ಯ. ಇದಕ್ಕೆ ಯಾರೂ ಹೆಚ್ಚು ತಕೆ ಕೆಡಿಸಿಕೊಳ್ಳುವುದಿಲ್ಲ. ಗೊರಕೆ ಬಂದರೇನು ಮಹಾ, ಇದರಿಂದ ಹೆಚ್ಚೆಂದರೆ ಸಮೀಪದಲ್ಲಿ ಮಲಗಿದವರ ನಿದ್ರೆ ಹಾಳಾಗಬಹುದಷ್ಟೇ ಹೊರತು ಆರೋಗ್ಯಕ್ಕೇನೂ ಅಪಾಯವಿಲ್ಲ ಎಂದು ಎಲ್ಲರೂ ಭಾವಿಸುತ್ತಾರೆ.

ಆದರೆ ಈಗ ಹೊಸದಾಗಿ ಬಿಡುಗಡೆಯಾಗಿರುವ ಸಂಶೊಧನಾ ವರದಿಯೊಂದು ಹೇಳಿದಂತೆ ಗೊರಕೆಯು ಭವಿಷ್ಯದ ಆರೋಗ್ಯ ಸಮಸ್ಯೆಯ ಸೂಚಕವಾಗಿದೆ.

ನಿದ್ರೆಯು ನಮ್ಮ ಕೆಲಸದ ಶಕ್ತಿ, ಮಾನಸಿಕ ಸಾಮರ್ಥ್ಯ, ಸಾಮಾನ್ಯ ಆರೋಗ್ಯದ ಮೇಲೆ ಪ್ರಭಾವ ಬೀರುವ ಜೀವನದ ಪ್ರಮುಖ ಭಾಗವಾಗಿದೆ. ನಿದ್ರೆಯು ಆರೋಗ್ಯಕರ, ಆರೋಗ್ಯಕರವಾದ ನಿದ್ರೆಯ ಅಭ್ಯಾಸ ಒಟ್ಟಾರೆ ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತದೆ.

#ಮದ್ಯ ಸೇವನೆ: ಗೊರಕೆಗೆ ಮುಖ್ಯ ಕಾರಣ ಮದ್ಯ. ಮಲಗುವ ಮುಂಚೆ ಮದ್ಯ ಸೇವಿಸುವುದು ಗೊರಕೆಗೆ ಕಾರಣವಾಗುತ್ತದೆ. ಮದ್ಯ ಮನುಷ್ಯನಿಗೆ ನಿದ್ರೆ ಬರಿಸುತ್ತದೆ. ಅಲ್ಲದೇ ಗಂಟಲಿನ ಮಾಂಸ ಖಂಡಗಳನ್ನು ವಿಶ್ರಾಂತಿಗೆ ತಳ್ಳುತ್ತದೆ. ಇದರಿಂದ ಮೂಗು ಹಾಗೂ ಬಾಯಿಯ ಮೂಲಕ ಗಾಳಿಯು ಒಳ ಹೋಗಲು ಅಡೆತಡೆ ಉಂಟಾಗಿ ಶಬ್ದ ಉಂಟಾಗುತ್ತದೆ.

#ಸ್ಥೂಲಕಾಯ: ಮಕ್ಕಳಲ್ಲಿ ಮುಖ್ಯವಾಗಿ ಮಾಂಸಗ್ರಂಥಿ ರಚನೆಯಲ್ಲಾದ ವ್ಯತ್ಯಾಸವು ಸಹ ಗೊರಕೆಗೆ ಕಾರಣವಾಗುತ್ತದೆ. ಸ್ಥೂಲಕಾಯವಿರುವ ಜನರು ಮೊದಲು ಕುತ್ತಿಗೆಯ ನೋವಿಗೆ ತುತ್ತಾಗಿ, ಬಳಿಕ ಗೊರಕೆಯ ತೊಂದರೆಗೆ ಒಳಗಾಗುತ್ತಾರೆ. ತೂಕ ಹೆಚ್ಚಳವು ಮುಖ್ಯವಾಗಿ ನಿದ್ರೆಯಲ್ಲಿ ಉಸಿರುಗಟ್ಟುವಿಕೆಯನ್ನುಂಟು ಮಾಡುತ್ತದೆ.

#ಪದೇ ಪದೇ ಮೂಗು ಕಟ್ಟುವುದು: ಪದೇ ಪದೇ ಉಸಿರುಕಟ್ಟಿಕೊಳ್ಳುವುದು, ಮೂಗು ಕಟ್ಟುವುದು ಗಂಟಲಿಗೆ ಒಂದು ನಿರ್ವಾತವನ್ನು ಸೃಷ್ಟಿಸುತ್ತದೆ. ಇದು ಮಲಗಿದಾಗ ಗೊರಕೆಯನ್ನುಂಟು ಮಾಡುತ್ತದೆ.

#ಮೂಗಿನೊಳಗಿನ ಮಾರ್ಪಾಡು: ಮೂಗಿನಲ್ಲಿ ಹೊಳ್ಳೆಗಳನ್ನು ಬೇರ್ಪಡಿಸುವ ವಿಭಾಜಕ ಭಿತ್ತಿ ವಿರೂಪವಾದರೆ, ಅದು ಮೂಗಿನ ಮೂಲಕ ಗಾಳಿಯನ್ನು ಸಾಗಲು ಬಿಡುವುದಿಲ್ಲ. ಇದು ಗೊರಕೆಗೆ ಕಾರಣವಾಗುತ್ತದೆ.

#ವಯಸ್ಸಾಗುವುದು: ವಯಸ್ಸಾಗುವುದು ಸಹ ಗೊರಕೆಗೆ ಕಾರಣವಾಗುತ್ತದೆ. ಮನುಷ್ಯನಿಗೆ ವಯಸ್ಸಾದಂತೆ ಗಂಟಲಿನ ಮಾಂಸ ಖಂಡಗಳು ವೀಕ್​ ಆಗುತ್ತವೆ. ಇದು ಅಂಗಾಂಶಗಳ ಬಾಗುವಿಕೆ ಹಾಗೂ ನಡುಗುವಿಕೆಗೆ ಕಾರಣವಾಗುತ್ತದೆ. ಇದರಿಂದ ಗಾಳಿ ಸಾಗಲು ಅಡೆತಡೆ ಉಂಟಾಗುತ್ತದೆ. ಇದು ಗೊರಕೆಗೆ ಕಾರಣವಾಗುತ್ತದೆ.

ಗೊರಕೆಗೆ ಪರಿಹಾರ ಏನು?
ಸಾಮಾನ್ಯವಾಗಿ ಗೊರಕೆಯ ಪರಿಹಾರ ಅದರ ಮೂಲ ಕಾರಣವನ್ನು ಅವಲಂಬಿಸಿರುತ್ತದೆ. ಗೊರಕೆಯನ್ನು ತಡೆಗಟ್ಟಲು ಸಹಾಯ ಮಾಡುವ ದಂತ ಫಲಕಗಳು ಇರುತ್ತವೆ. ಇವು ಕೆಳ ದವಡೆ ಮತ್ತು ನಾಲಿಗೆಗಳನ್ನು ಮುಂದಕ್ಕೆ ತರುತ್ತವೆ, ಹೀಗಾಗಿ ಹಿಂದೆ ಗಾಳಿಯ ಮಾರ್ಗ ತೆರೆದುಕೊಳ್ಳುತ್ತದೆ. ಇದು ಗಾಳಿಯ ಸಾಗುವಿಕೆಯನ್ನು ಸರಾಗವಾಗಿಸುತ್ತದೆ. ವೈದ್ಯರಿಂದ ನಿರ್ದೇಶಿಸದ ಹೊರತು ಮೂಗು ಕಟ್ಟಿರುವುದಕ್ಕೆ ಮೂರು ದಿನಗಳಿಗಿಂತಲೂ ಹೆಚ್ಚು ಕಾಲ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ.

#ಮದ್ಯ ಸೇವಿಸಿ ಮಲಗಬೇಡಿ: ಮಲಗುವ ನಾಲ್ಕು ತಾಸಿನ ಮುನ್ನ ಮದ್ಯ ಸೇವಿಸಬೇಡಿ. ಅಂದರೆ ಮದ್ಯ ಸೇವಿಸಿದ ನಾಲ್ಕು ಗಂಟೆಗಳ ಬಳಿಕ ಮಲಗಿ. ಮೂಗಿನ ತೊಂದರೆಗೆ ಸಂಬಂಧಿಸಿದಂತೆ ಮಾತ್ರೆಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ.

#ಶಸ್ತ್ರಚಿಕಿತ್ಸೆ: ನಿರ್ದಿಷ್ಟ ಮೂಗಿನ ವಿರೂಪತೆಯಿದ್ದರೆ ಅಥವಾ ಗಂಟಲಿನ ಹಿಂಭಾಗದಲ್ಲಿ ಮಿತಿಮೀರಿದ ಮೃದುವಾದ ಅಂಗಾಂಶ ಇದ್ದರೆ, ವೈದ್ಯರು ಶಸ್ತ್ರಚಿಕಿತ್ಸೆಗೆ ಸೂಚಿಸಬಹುದು.

ಗೊರಕೆಯು ನಿರುಪದ್ರವವಾಗಿದ್ದರೂ, ಇದು ಗಂಭೀರವಾದ ನಿದ್ರಾಹೀನತೆಗೆ ಕಾರಣವಾಗಲಿದೆ ಎಂದು ಅದ್ಯಯನ ಹೇಳಿದೆ.ಈ ನಿದ್ರೆ ವರ್ತನೆಯು ಹೃದಯಾಘಾತ ಅಥವಾ ಇತರ ಅಸ್ವಸ್ಥತೆಗಳಿಗೆ ಕಾರಣವಾಗಬಹುದು ಎಂದು ಅವರು ಹೇಳುತ್ತಾರೆ.ಅತಿಯಾದ ಗೊರಕೆ ಸಮಸ್ಯೆಯಿದ್ದರೆ ಅಂತಹಾ ವ್ಯಕ್ತಿಗಳು ವೈದ್ಯರ ಸಲಹೆ ಪಡೆಯಬೇಕು ಎಂದು ಸಂಶೋಧಕರು ತಿಳಿಸಿದ್ದಾರೆ.

ಇನ್ನು ನಂಬಿಕೆಯ ಹೊರತಾಗಿಯೂ ಮಲಗುವ ಮುನ್ನ ಆಲ್ಕೋಹಾಲ್ ಯುಕ್ತ ಪಾನೀಯಗಳನ್ನು ಸೇವಿಸುವುದರಿಂದ ನಿದ್ರೆಗೆಭಂಗಬರುವ ಸಾಧ್ಯತೆ ಇದೆ. ರಾಬಿನ್ಸ್ ಮತ್ತು ಅವರ ಸಹೋದ್ಯೋಗಿಗಳು ಸ್ಥಿರವಾದ ನಿದ್ರೆ ವೇಳಾಪಟ್ಟಿಯನ್ನು ರಚಿಸುವುದು ಅತ್ಯಂತ ಮುಖ್ಯವೆಂದು ಭಾವಿಸುತ್ತಾರೆ. ಕನಿಷ್ಟ ಏಳು ಗಂಟೆಗಳ ಕಾಲ ನಿದ್ರೆ ಮಾನವ ದೇಹಕ್ಕ್ವೆ ಅಗತ್ಯವಾಗಿದೆ ಎಂದು ಅವರು ಹೇಳುತ್ತಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ