ಕಾಶ್ಮೀರದಲ್ಲಿ ಭಾರೀ ಹಿಮಪಾತಕ್ಕೆ 12 ಮಂದಿ ದುರ್ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

Kashmir

ಶ್ರೀನಗರ, ಫೆ.9- ಕಣಿವೆ ರಾಜ್ಯ ಕಾಶ್ಮೀರದ ಕುಲ್ಗಾಮ್ ಮತ್ತು ಅನಂತನಾಗ್ ಜಿಲ್ಲೆಯಲ್ಲಿ ಭಾರೀ ಹಿಮಪಾತದಿಂದ ಏಳು ಪೊಲೀಸರೂ ಸೇರಿದಂತೆ 12 ಮಂದಿ ಬಲಿಯಾದ ದುರ್ಘಟನೆ ಸಂಭವಿಸಿದೆ.

ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ಹಿಮಪಾತ ಮುಂದುವರಿದಿದ್ದು, ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಕುಲ್ಗಾಮ್ ಜಿಲ್ಲೆಯ ಜವಹರ್ ಸುರಂಗ ಮಾರ್ಗದ ಬಳಿ ಪೊಲೀಸ್ ಚೌಕಿ ಮೇಲೆ ಹಿಮಪಾತವಾಗಿ ಏಳು ಮಂದಿ ಪೊಲೀಸರು ನಾಪತ್ತೆಯಾಗಿದ್ದರು, ನಿನ್ನೆ ಸಂಜೆ ಅವರ ಮೃತದೇಹಗಳು ಪತ್ತೆಯಾಗಿದೆ.

ಹಿಮಪಾತದಿಂದ ಇಬ್ಬರು ಪೊಲೀಸರನ್ನು ರಕ್ಷಿಸಲಾಗಿದ್ದು, ಇನ್ನೊಬ್ಬರು ಕಣ್ಮರೆಯಾಗಿದ್ದಾರೆ.  ಅನಂತನಾಗ್ ಜಿಲ್ಲೆಯ ಕೊಕೆರ್‍ನಾಗ್ ಪ್ರದೇಶದಲ್ಲಿ ಭಾರೀ ಹಿಮ ವರ್ಷದಿಂದಾಗಿ ದಂಪತಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.

ಹಿಮಪಾತದಿಂದ ಬಂಡೆಯೊಂದು ಮನೆಯೊಂದರ ಮೇಲೆ ಉರುಳಿ ಬಷೀರ್ ಅಹಮದ್ ಖುರೇಷಿ ಮತ್ತು ಅವರ ಪತ್ನಿ ಹಿಮ ಸಮಾಧಿಯಾಗಿದ್ದಾರೆ. ಇಬ್ಬರು ಮಕ್ಕಳನ್ನು ಹಿಮಗರ್ಭದಿಂದ ರಕ್ಷಿಸಲಾಗಿದೆ. ಕಣಿವೆ ರಾಜ್ಯದ ವಿವಿಧೆಡೆ ಹಿಮಪಾತ ಮುಂದುವರಿದಿದ್ದು, ರಕ್ಷಣಾ ಕಾರ್ಯಕರ್ತರು ಕಟ್ಟೆಚ್ಚರ ವಹಿಸಿದ್ದಾರೆ.

Facebook Comments

Sri Raghav

Admin