ಕೊರೊನಾ ಆತಂಕ ದೂರವಾಗಬೇಕಾದರೆ ಸಾಮಾಜಿಕ ಅಂತರ ಅನಿವಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಭುವನೇಶ್ವರ್,ಡಿ.1-ಕೊರೊನಾ ಸೋಂಕಿನಿಂದ ಬಚಾವಾಗಬೇಕಾದರೆ ಮಾಸ್ಕ್ ಧರಿಸುವುದರ ಜತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲೇಬೇಕು ಇಲ್ಲದಿದ್ದರೆ ಭಾರಿ ಅನಾಹುತ ಎದುರಿಸಬೇಕಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಮನುಷ್ಯ ಸೀನಿದಾಗ ವೈರಾಣು 25 ಅಡಿಗೆ ಹಾರುವ ಸಾಮಥ್ರ್ಯ ಪಡೆದಿರುತ್ತದೆ ಹೀಗಾಗಿ ಮಾಸ್ಕ್ ಧರಿಸುವುದರ ಜತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲೆಬೇಕು ಎಂದು ಭುವನೇಶ್ವರದ ಐಐಟಿ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಮಾಸ್ಕ್ ಧರಿಸಿದರು ಸೂಕ್ಷ್ಮ ಕೊರೊನಾ ವೈರಾಣು ಸಮೀಪದಲ್ಲಿರುವ ವ್ಯಕ್ತಿಗಳಿಗೆ ಘಾತುಕವಾಗುವ ಸಾಧ್ಯತೆ ಇದೆ. ಸೀನಿದಾಗ ಕೊರೊನಾ ವೈರಸ್ ಹತ್ತಿರದಲ್ಲಿರುವ ವ್ಯಕ್ತಿಗಳ ಕೈ, ಮೊಣಕೈ ಮೇಲೆ ಕುಳಿತು ನಂತರ ದೇಹ ಸೇರುವ ಸಾಧ್ಯತೆ ಇದೆ.

ಇದರಿಂದ ಬಚಾವಾಗಬೇಕಾದರೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುದು ಸೂಕ್ತ ಎಂದು ವಿಜ್ಞಾನಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಕೊರೊನಾ ಸೋಂಕು ತಗಲಬಾರದು ಎಂದರೆ ಕನಿಷ್ಠ 6 ಅಡಿಗಳ ಅಂತರ ಕಾಪಾಡಿಕೊಳ್ಳಿ ಎಂದು ವಿಜ್ಞಾನಿಗಳು ಮನವಿ ಮಾಡಿಕೊಂಡಿದ್ದಾರೆ

Facebook Comments